ಮೈಸೂರಿನ ವಿವಿಧೆಡೆ ಭಗವಾನ್ ಬುದ್ಧ ಸ್ಮರಣೆ
ಮೈಸೂರು

ಮೈಸೂರಿನ ವಿವಿಧೆಡೆ ಭಗವಾನ್ ಬುದ್ಧ ಸ್ಮರಣೆ

May 8, 2020

ಮೈಸೂರು, ಮೇ 7(ಪಿಎಂ)- ಇಡೀ ವಿಶ್ವಕ್ಕೆ ಶಾಂತಿ, ಸಮಾನತೆ, ಸಹಬಾಳ್ವೆ, ಸಾಮರಸ್ಯ ಸಂದೇಶ ಸಾರಿದ ಬುದ್ಧ ಭಗವಾನರ ಜನ್ಮದಿನವಾದ ಇಂದು ಮೈಸೂರು ನಗರದ ವಿವಿಧೆಡೆ `ಬುದ್ಧ ಪೂರ್ಣಿಮೆ’ ಸರಳವಾಗಿ ಆಚರಣೆಗೊಂಡಿತು.

ಮೈಸೂರಿನ ಅಶೋಕ ವೃತ್ತ ಬಳಿಯ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಬೌದ್ಧ ಬಿಕ್ಕು ಕಲ್ಯಾಣಸಿರಿ ಬಂತೇಜಿ ಅವರ ಸಾನಿಧ್ಯದಲ್ಲಿ ಬುದ್ಧಪೂರ್ಣಿಮೆ ಆಚರಿಸಲಾಯಿತು. ಬುದ್ಧ ವಂದನೆ, ಧಮ್ಮ ವಂದನೆ ಸೇರಿದಂತೆ ಧಮ್ಮದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಸದ ವಿ.ಶ್ರೀನಿವಾಸಪ್ರಸಾದ್, ಮಾಜಿ ಮೇಯರ್ ಪುರು ಷೋತ್ತಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮೈಸೂರಿನ ವಿಜಯನಗರದ ಮೊದಲ ಹಂತದ ಕರ್ನಾಟಕ ಬುದ್ಧ ಧಮ್ಮ ಸಮಿತಿ ಸಭಾಂಗಣದಲ್ಲಿ ಬೆಳಿಗ್ಗೆ ಯಿಂದ ಸಂಜೆವರೆಗೂ ಒಂದೊಂದು ತಂಡವಾಗಿ (ಕೊರೊನಾ ಹಿನ್ನೆಲೆಯಲ್ಲಿ) ಬುದ್ಧ ಪೂರ್ಣಿಮೆ ಆಚ ರಣೆಯ ಪ್ರಾರ್ಥನೆ ಸಲ್ಲಿಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ಮಹದೇವಪ್ಪ ಸೇರಿ ದಂತೆ ಬುದ್ಧ ಅನುಯಾಯಿಗಳು ಪಾಲ್ಗೊಂಡಿದ್ದರು.

ಸಿದ್ಧಾರ್ಥ ನಗರದ ಭಗವಾನ್ ಬುದ್ಧ ವೃತ್ತದಲ್ಲಿ ಬುದ್ಧನ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಾರ್ಥಿ ಸುವ ಮೂಲಕ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಬೌದ್ಧ ಬಿಕ್ಕು ಬಂತೆ ಬೋಧಿ ದತ್ತ ಅವರ ಸಾನಿಧ್ಯದಲ್ಲಿ ಬುದ್ಧ ವಂದನೆ, ಧಮ್ಮ ವಂದನೆ ಸೇರಿದಂತೆ ಧಮ್ಮದ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಭಾರತೀಯ ಬೌದ್ಧ ಮಹಾಸಭಾದ ಮೈಸೂರು ಶಾಖೆಯ ಅಧ್ಯಕ್ಷ ಯತೀಶ್ ಚಂದ್ರ, ಕಾರ್ಯದರ್ಶಿ ಪ್ರದೀಪ್‍ಕುಮಾರ್, ಸಹ ಕಾರ್ಯದರ್ಶಿ ಗಿರೀಶ್, ಡಾ. ಅಂಬೇಡ್ಕರ್ ವಾದಿಗಳು, ಬುದ್ಧ ಅನು ಯಾಯಿಗಳು ಪಾಲ್ಗೊಂಡಿದ್ದರು.

Translate »