ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಶಾರೀಕ್‍ಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಸಂಪರ್ಕ
News

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಶಾರೀಕ್‍ಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಸಂಪರ್ಕ

November 22, 2022

ಮಂಗಳೂರು, ನ. 21- ಮಂಗಳೂರಿನಲ್ಲಿ ಶನಿವಾರ ಆಟೋದಲ್ಲಿ ಕುಕ್ಕರ್ ಸ್ಫೋಟಗೊಂಡ ಪ್ರಕರಣದ ಶಂಕಿತ ಆರೋಪಿ ಅಂತರರಾಷ್ಟ್ರೀಯ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಎಂದು ಕಾನೂನು-ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಕ್ಕರ್ ಸ್ಫೋಟದ ಆರೋಪಿಯನ್ನು ತೀರ್ಥಹಳ್ಳಿಯ ಶಾರೀಕ್ ಎಂದು ಗುರುತಿಸಲಾಗಿದೆ ಎಂದು ಖಚಿತಪಡಿಸಿದರು. ಆತನ ಮಲತಾಯಿ ಶಬಾನ ಸೋದರಿಯರಾದ ಆತಿಯಾ, ಯಾಸ್ಮಿನ್ ಅವರುಗಳು ಆತನನ್ನು ಗುರು ತಿಸಿದ್ದಾರೆ ಎಂದು ಅವರು ಹೇಳಿದರು. ಮೈಸೂರಿನಲ್ಲಿ ತಾನೇ ತಯಾರಿಸಿದ್ದ ಕುಕ್ಕರ್ ಬಾಂಬ್ ಸ್ಫೋಟಿಸಿ, ದುಷ್ಕøತ್ಯವೆಸಗಲು ಆತ ತಾನು ಗುರುತಿಸಿದ್ದ ಜಾಗಕ್ಕೆ ಹೋಗುತ್ತಿದ್ದ. ಆದರೆ ಆತ ಗುರುತಿಸಿದ್ದ ಜಾಗ ಯಾವುದು ಎಂಬುದರ ಬಗ್ಗೆ ಇನ್ನೂ ಮಾಹಿತ ಲಭ್ಯವಾಗಿದೆ. ಆತನ ಯೋಜನೆಯಂತೆ ಬಾಂಬ್ ಸ್ಫೋಟಿಸಿದ್ದರೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಬಾಂಬ್ ಸ್ಫೋಟಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ವಿಚಾರದಲಿ ದೇವರಿಗೆ ಧನ್ಯವಾದ ಸಲ್ಲಿಸಲೇಬೇಕು ಎಂದರು. ಈತನಿಗೆ ಆರ್ಥಿಕ ನೆರವು ನೀಡುತ್ತಿದ್ದವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಅವರ ಶಂಕಿತ ಶಾರೀಕ್ ತಮಿಳುನಾಡಿನ ಕೊಯಮತ್ತೂರು, ಕೇರಳ ಮುಂತಾದೆಡೆಯಲ್ಲಾ ಸುತ್ತಾಡಿ ಮೈಸೂರಿಗೆ ಬಂದು ನೆಲೆಸಿದ್ದ. ಮೊಬೈಲ್ ತಯಾರಿಸುವ ಇನ್ಸ್‍ಟಿಟ್ಯೂಟ್‍ನಲ್ಲಿ ಕೆಲಸ ಮಾಡುತ್ತಿದ್ದ. ಫೋಟೋ ನೋಡಿದಾಗಲೇ ಆತ ಶಾರೀಕ್ ಎಂದುಬುದು ಗೊತ್ತಾಗಿತ್ತು. ಆದರೂ ಅವರ ಮನೆಯವರನ್ನು ಕರೆಸಿ ಆತನ ಗುರುತು ಪತ್ತೆ ಮಾಡಿದ್ದೇವೆ ಎಂದರು.

ಮಂಗಳೂರಿನಲ್ಲಿ 2020ರಲ್ಲಿ ಗೋಡೆಬರಹ ವಿಚಾರವಾಗಿದ ಯುಎಪಿಎ ಆಕ್ಟ್‍ನಡಿ ಪ್ರಕರಣ ದಾಖಲಾಗಿದೆ. ಆ ಪ್ರಕರಣದಲ್ಲಿ ಈತನೇ ಪ್ರಮುಖ ಆರೋಪಿಯಾಗಿದ್ದ. ಆಗಲೇ ಅವನಿಗೆ ಮನೆಯವರು ಬುದ್ಧಿ ಹೇಳಿದ್ದರಂತೆ. ಈ ವಿಚಾರ ಶಿವಮೊಗ್ಗದಲ್ಲಿ ಜಬಿವುಲ್ಲಾ ಕೇಸ್ ವಿಚಾರಣೆ ವೇಳೆ ನಮಗೆ ಗೊತ್ತಾಗಿತ್ತು. ಮುನೀರ್ ಎಂಬಾತನನ್ನು ಬಂಧಿಸಿದ್ದಾಗ ಶಿವಮೊಗ್ಗದಲ್ಲಿ ಶಾರೀಕ್ ಟ್ರಯಲ್ ಬ್ಲ್ಯಾಸ್ಟ್ ಮಾಡಿದ್ದು ಗೊತ್ತಾಗಿದೆ. ಶನಿವಾರ ಸಂಜೆ ಮಂಗಳೂರಿನಲ್ಲಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಬಾಂಬ್ ತಯಾರಿಸಲು ಶಾರೀಕ್‍ಗೆ ತರಬೇತಿ ನೀಡಲಾಗಿತ್ತೇ. ಅಥವಾ ಆತನೇ ಸ್ವಯಂ ಕಲಿತುಕೊಂಡನೆ ಎಂಬುದರ ಬಗ್ಗೆ ತಿಳಿಯಬೇಕಿದೆ ಎಂದರು. ಈತ ಮೈಸೂರಿನಲ್ಲಿ ವಾಸವಿದ್ದ ಮನೆಯಲ್ಲಿ ಹಲವು ಸ್ಫೋಟಕ ವಸ್ತುಗಳು ದೊರೆತಿವೆ. ಈ ಶಂಕಿತ ನಕಲಿ ಗುರುತಿನ ಚೀಟಿ ಪಡೆದು ಕೊಯಮತ್ತೂರಿನಲ್ಲೂ ವಾಸವಿದ್ದ ಎಂದು ಹೇಳಿದ ಅವರು, ಈತ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿರುವ ವಿಚಾರ ಮೈಸೂರಿನಲ್ಲಿ ಈತನಿಗೆ ಮನೆ ಬಾಡಿಗೆಗೆ ನೀಡಿದ್ದ ಮೋಹನ್‍ಕುಮಾರ್ ಎಂಬುವರಿಗೆ ಗೊತ್ತಿಲ್ಲ ಎಂದು ಅಲೋಕ್‍ಕುಮಾರ್ ತಿಳಿಸಿದರು.

Translate »