ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಿಂದಲೇ ಮೈಸೂರು ನಗರಪಾಲಿಕೆ ಬಜೆಟ್ ಮಂಡನೆ
ಮೈಸೂರು

ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಿಂದಲೇ ಮೈಸೂರು ನಗರಪಾಲಿಕೆ ಬಜೆಟ್ ಮಂಡನೆ

April 19, 2022

ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

ಬಜೆಟ್‌ನ ಸೇರ್ಪಡೆಗೊಳಿಸಬೇಕಾದ ವಿಚಾರದ ಬಗ್ಗೆ ಸದಸ್ಯರಿಂದ ನಾನಾ ಸಲಹೆ, ಸೂಚನೆ

ಮೈಸೂರು, ಏ.೧೮(ಆರ್‌ಕೆ)-ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಿಂದಲೇ ಮೈಸೂರು ಮಹಾನಗರಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲು ಮೂರೂ ಪಕ್ಷಗಳ ಸದಸ್ಯರು ಸಮ್ಮತಿಸಿದ್ದಾರೆ.

ಮೇಯರ್, ಉಪಮೇಯರ್ ಅವಧಿ ಪೂರ್ಣಗೊಂಡಿರು ವುದರಿಂದ ಸ್ಥಾಯಿ ಸಮಿತಿಗಳು ಅಸ್ತಿತ್ವದಲ್ಲಿರದ ಕಾರಣ ಪ್ರಸಕ್ತ ಸಾಲಿನ ಆಯ-ವ್ಯಯ ಮಂಡನೆಯನ್ನು ಹಂಗಾಮಿ ಮೇಯರ್ ಮಂಡಿಸಬೇಕೇ ಎಂಬುದರ ಬಗ್ಗೆ ಗೊಂದಲ ಉಂಟಾಗಿತ್ತು. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರ ಮುಂದುವರಿಯಲಿದೆ ಎಂದು ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರೇ ಆಯ-ವ್ಯಯ ಮಂಡಿಸುವರು ಎಂದು ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ಅವರು ಇಂದು ಪಾಲಿಕೆ ಕಚೇರಿ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪ್ರಕಟಿಸಿದರು.

ಸಭೆ ಆರಂಭಗೊಳ್ಳುತ್ತಿದ್ದAತೆಯೇ, ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಕಾರ್ಪೊರೇಟರ್ ಅಶ್ವಿನಿ ಅನಂತು ಅವರು, ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿಗಳಿಗೆ ಅಧಿಕಾರವಿದೆಯೇ? ೪ ತಿಂಗ ಳಿಂದ ಸಭೆ ನಡೆಸಿಲ್ಲವೇಕೆ?

ಕಾರ್ಯಕ್ರಮಗಳಿಗೆ ಸಮಿತಿ ಸದಸ್ಯರನ್ನು ಏಕೆ ಆಹ್ವಾನಿಸುತ್ತಿಲ್ಲ ಎಂದು ಪ್ರಶ್ನಿಸಿ ತಾವು ಪತ್ರದ ಮೂಲಕ ಕೇಳಿದರೂ ಉತ್ತರಿಸಿಲ್ಲ, ಮೊದಲು ಉತ್ತರ ನೀಡಿ ನಂತರ ಸಭೆ ನಡೆಸಿ ಎಂದು ಪಟ್ಟು ಹಿಡಿದರು.

ಅದಕ್ಕೆ ದನಿಗೂಡಿಸಿದ ಪ್ರೇಮಾ ಶಂಕರೇಗೌಡ, ಪುಷ್ಪಾ, ಜಗನ್ನಾಥ್ ಹಾಗೂ ಅಯೂಬ್‌ಖಾನ್, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೇವಲ ಮೇಯರ್, ಉಪಮೇಯರ್ ಮತ್ತು ಕೆಲ ಬಿಜೆಪಿ ಕಾರ್ಪೊರೇಟರ್ ಗಳನ್ನು ಮಾತ್ರ ಕರೆದು ಉಳಿದ ಸದಸ್ಯರಿಗೆ ಅಗೌರವ ತೋರಿಸುತ್ತಿ ರುವ ವರ್ತನೆ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸಭೆ ಸಮಾರಂಭಗಳಿಗೆ ಕಾರ್ಪೊರೇಟರ್‌ಗಳನ್ನು ಆಹ್ವಾನಿಸಿ ಮಾಹಿತಿ ನೀಡಿ ಶಿಷ್ಟಾಚಾರ ಪಾಲಿಸಬೇಕೆಂದು ಒತ್ತಾಯಿಸಿದಾಗ ಅದಕ್ಕೆ ಪ್ರೋಟೋಕಾಲ್ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಅಧಿಕೃತ ಆದೇಶವನ್ನೇ ಹೊರಡಿಸುತ್ತೇವೆ ಎಂದು ಪಾಲಿಕೆ ಆಯುಕ್ತ ಲಕ್ಷಿö್ಮÃಕಾಂತರೆಡ್ಡಿ ತಿಳಿಸಿದರು.

ಬಜೆಟ್ ಮಂಡಿಸದಿರುವುದರಿAದ ಯಾವುದೇ ಚೆಕ್‌ಗಳಿಗೆ ಸಹಿ ಮಾಡದ ಕಾರಣ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅಧಿಕಾರಿ ಗಳಿಂದ ಈ ಗೊಂದಲ ಉಂಟಾಗಿದೆ. ಏ.೨೮ರೊಳಗೆ ಬಜೆಟ್ ಮಂಡಿಸಿ ಎಂದು ಮಾಜಿ ಮೇಯರ್ ಆರಿಫ್ ಹುಸೇನ್ ಸಲಹೆ ನೀಡಿದರು. ರಸ್ತೆ, ಚರಂಡಿಯAತಹ ಕಾಮಗಾರಿಗಳಿಗೆ ಟೆಂಡರ್ ಆದರೂ ಕಾರ್ಯಾದೇಶ(Woಡಿಞ ಔಡಿಜeಡಿ )ನೀಡಲು ಇಂಜಿನಿಯರ್ ಗಳು ಹಣಕ್ಕೆ ಬೇಡಿಕೆ ಇಟ್ಟು ವಿಳಂಬ ಮಾಡುತ್ತಿದ್ದಾರೆ. ಅದರ ಜವಾಬ್ದಾರಿಯನ್ನು ಸೂಪರಿಂಟೆAಡಿAಗ್ ಇಂಜಿನಿ ಯರ್‌ಗೆ ಕೊಡಿ ಎಂದು ಮಾಜಿ ಮೇಯರ್ ಅಯೂಬ್‌ಖಾನ್ ಒತ್ತಾಯಿಸಿದರು.

ರೋಡ್ ಕಟಿಂಗ್, ಪ್ಯಾಚ್ ವರ್ಕ್ಗೆ ಸಂಬAಧಪಟ್ಟವರಿAದ ಹಣ ಕಟ್ಟಿಸಿ ಎಂದು ಅಶ್ವಿನಿ ಅನಂತು ಹೇಳಿದರೆ, ಕೇವಲ ಪ್ರಸಿದ್ಧಿಗಾಗಿ ಅತೀ ದೊಡ್ಡ ಬಜೆಟ್ ಮಂಡಿಸುವ ಬದಲು ಆದಾಯಕ್ಕೆ ತಕ್ಕ ವಾಸ್ತವ ಬಜೆಟ್ ನೀಡಿ ಎಂದು ಬಿ.ವಿ.ಮಂಜುನಾಥ ಸಲಹೆ ನೀಡಿದರು.

ಬಡವರಿಗೆ ಆರೋಗ್ಯ ಭದ್ರತೆ: ಬಡವರ ಆರೋಗ್ಯ ರಕ್ಷಿಸಲು ಹಣ ಮೀಸಲಿಡಿ, ಪಾರ್ಕ್ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಹೆಚ್ಚು ಅನು ದಾನ ಮೀಸಲಿಡಿ ಎಂದು ಮ.ವಿ.ರಾಮಪ್ರಸಾದ್ ತಿಳಿಸಿದರೆ, ಉದ್ಯಾನ ಮತ್ತು ರಸ್ತೆಗೆ ಆದ್ಯತೆ ಮೇಲೆ ಹಣವಿಡಿ ಎಂದು ಪ್ರೇಮಾ ಶಂಕರೇಗೌಡ ಸಲಹೆ ನೀಡಿದರು. ವಾಣ ಜ್ಯ ಕಟ್ಟಡಗಳಿಗೆ ನಕ್ಷೆ ಅನುಮೋದನೆ ನೀಡುವಾಗ ಸಂಗ್ರಹಿಸುವ ಪ್ರೊರೇಟಾ ಹಣವನ್ನು ಯುಜಿಡಿ, ಪಾರ್ಕ್, ಸ್ಮಶಾನಕ್ಕೆ ಬಳಸಿ, ಪ್ರತ್ಯೇಕ ಬ್ಯಾಂಕ್ ಖಾತೆ ನಿರ್ವಹಿಸಿ ಎಂದು ರಮೇಶ್ ತಿಳಿಸಿದರು. ಯೋಗ ಲಕ್ಷಿö್ಮ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಮುಂದುವರಿಸುವAತೆ ಪುಷ್ಪಲತಾ ಜಗನ್ನಾಥ್ ಒತ್ತಾಯಿಸಿದರು.

ಪಾರ್ಕ್ಗಳಿಗೆ ಅನುದಾನ: ಪಾರ್ಕುಗಳನ್ನು ಸ್ವಚ್ಛಗೊಳಿಸಲು ಜನರೇ ಇಲ್ಲ, ನಿರ್ವಹಣೆ ಕ್ಷೀಣ ಸಿದೆ ಎಂದು ಸದಸ್ಯರು ಆರೋಪಿಸಿದಾಗ ಮೈಸೂರಲ್ಲಿರುವ ೫೩೯ ಉದ್ಯಾನ ನೋಡಿಕೊಳ್ಳಲು ತೋಟಗಾರಿಕೆ ಇಬ್ಬರು ಇನ್ಸ್ಪೆಕ್ಟರ್‌ಗಳು ಮಾತ್ರ ಇದ್ದು, ಪಾಲಿಕೆಯಿಂದ ೮೯ ಸಿಬ್ಬಂದಿ ಕೊಟ್ಟಿದ್ದೇವೆ. ಕೆಲವರು ನಿವೃತ್ತರಾಗುತ್ತಿರುವುದರಿಂದ ಟೆಂಡರ್ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ತೆಗೆದು ಕೊಳ್ಳುತ್ತೇವೆ ಎಂದು ಪಾಲಿಕೆ ಆಯಕ್ತರು ಹೇಳಿದರು. ಪಾರ್ಕುಗಳ ಜಿಮ್, ಫೌಂಟೆನ್ ನಿರ್ವಹಣೆ, ಒಂಟಿಕೊಪ್ಪಲಿ ನಲ್ಲಿರುವ ಮೇಯರ್ ನಿವಾಸ ಕೆಡವಿ ಹೊಸ ಕಟ್ಟಡ ನಿರ್ಮಾಣ, ಬಿಬಿಎಂಪಿ ಮಾದರಿ ಯುಜಿಡಿ ಮ್ಯಾನ್‌ಹೋಲ್ ಅಳವಡಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಟ್‌ನಲ್ಲಿ ಅನುದಾನ ಮೀಸಲಿರಿಸುವಂತೆ ಪಾಲಿಕೆ ಸದಸ್ಯರು ಸಲಹೆ ನೀಡಿದರು.

ಏ.೨೮ಕ್ಕೆ ಪಾಲಿಕೆ ಬಜೆಟ್
ಮೈಸೂರು: ಏಪ್ರಿಲ್ ೨೮ರಂದು ಮೈಸೂರು ಮಹಾನಗರ ಪಾಲಿಕೆ ಬಜೆಟ್ ಮಂಡನೆಗೆ ತೀರ್ಮಾನಿಸಲಾಗಿದೆ ಎಂದು ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ತಿಳಿಸಿದ್ದಾರೆ.
ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಅವರೇ ಆಯ-ವ್ಯಯ ಮಂಡಿಸಲಿದ್ದು, ಮೈಸೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಪ್ರಸಕ್ತ ಸಾಲಿನ ಬಜೆಟ್ ಮಂಡಿ ಸಲು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧ ರಿಸಲಾಯಿತು. ಒಂದೆರಡು ದಿನಗಳಲ್ಲಿ ಹಣಕಾಸು ಸ್ಥಾಯಿ ಸಮಿತಿಯಿಂದ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಆಯ-ವ್ಯಯ ಸಿದ್ಧಪಡಿಸಲಾಗುವುದು ಎಂದರು. ನಾನೇ ಬಜೆಟ್ ಮಂಡಿಸಬೇಕೆAಬ ಹಠವೇನಿಲ್ಲ, ಮೈಸೂರಿನ ನಾಗರಿಕರ ಹಿತದೃಷ್ಟಿಯಿಂದ ಹಾಗೂ ಎಲ್ಲಾ ಕಾರ್ಯಗಳೂ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದಸ್ಯರು ನೀಡಿರುವ ಸಲಹೆಗಳನ್ನೂ ಪರಿ ಗಣ ಸಿ ಯೋಜನೆಗಳನ್ನು ಆಯ-ವ್ಯಯದಲ್ಲಿ ಜೋಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪಾಲನೇತ್ರ ತಿಳಿಸಿದರು.

 

ಅನುದಾನ ತಾರತಮ್ಯ ಪ್ರಸ್ತಾಪ ಬಿಜೆಪಿ ಕಾರ್ಪೊರೇರ‍್ಸ್ ವಿರುದ್ಧ ಮಾಜಿ ಮೇಯರ್‌ಗಳ ವಾಗ್ದಾಳಿ
ಮೈಸೂರು, ಏ.೧೮(ಆರ್‌ಕೆ)- ಹೆಚ್ಚು ತೆರಿಗೆ ಸಂಗ್ರಹವಾಗುವ ವಾರ್ಡುಗಳ ಅಭಿವೃದ್ಧಿಗೆ ಅಧಿಕ ಪ್ರಮಾಣದ ಅನುದಾನ ನೀಡಿ ಎಂದು ಪ್ರಸ್ತಾಪಿಸಿದ ಬಿಜೆಪಿ ಕಾರ್ಪೊರೇಟರ್‌ಗಳ ವಿರುದ್ಧ ತಿರುಗಿ ಬಿದ್ದ ಇಬ್ಬರು ಮಾಜಿ ಮೇಯರ್‌ಗಳು ತೀವ್ರ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚು ಪ್ರಮಾಣದಲ್ಲಿ ತೆರಿಗೆ ಪಾವತಿಸುವ ವಾರ್ಡ್ಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಹೆಚ್ಚಿನ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸ ಬೇಕು ಎಂದು ಬಿಜೆಪಿ ಕಾರ್ಪೊರೇಟರ್ ಸುಬ್ಬಯ್ಯ ಪ್ರಸ್ತಾಪಿಸುತ್ತಿದ್ದಂತೆಯೇ ಕೆಂಡಾಮAಡಲವಾದ ಆರಿಫ್ ಹುಸೇನ್, ಶ್ರೀಮಂತರು ಮಾತ್ರ ಬದುಕಬೇಕೆ? ಬಡವರು ಸಾಯಬೇಕೆ ಎಂದು ಪ್ರಶ್ನಿಸಿದರಲ್ಲದೆ, ನಿಮಗೆ ಚುನಾವಣೆಯಲ್ಲಿ ಗೆಲ್ಲಲು ಬಡವರ ಓಟು ಬೇಕು, ಸೌಲಭ್ಯ ಮಾತ್ರ ಶ್ರೀಮಂತರಿಗಾ? ಎಂದು ಹರಿಹಾಯ್ದರು.

ಒಂದು ಕುಟುಂಬದಲ್ಲಿ ರೋಗಗ್ರಸ್ಥ, ಅಂಗವಿಕಲ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡಬೇಕು. ಪಾಲಿಕೆ ಎಲ್ಲಾ ವಾರ್ಡ್ಗಳಲ್ಲೂ ಕರ ಪಾವತಿಯಾಗುತ್ತದೆಯಾದ್ದರಿಂದ ತಾರತಮ್ಯ ಮಾಡದೇ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು, ಬಡವರಿಗೇನೂ ನೀವು ಭಿಕ್ಷೆ ನೀಡುತ್ತಿಲ್ಲ, ಸಮಾನತೆ, ಸಾಮಾಜಿಕ ನ್ಯಾಯದಂತೆ ಎಲ್ಲರಿಗೂ ಒಂದೇ ಮಾದರಿ ಅನುದಾನ ಕೊಡಿ ಎಂದು ಅವರು ಒತ್ತಾಯಿಸಿದರು.

ಅದಕ್ಕೆ ಮಾಜಿ ಮೇಯರ್ ಅಯೂಬ್‌ಖಾನ್, ಕಾರ್ಪೊರೇಟರ್‌ಗಳಾದ ಪ್ರೇಮಾ ಶಂಕರೇಗೌಡ, ಶ್ರೀಧರ್ ಸಹ ಧ್ವನಿಗೂಡಿಸಿದರು. ಅದೇ ರೀತಿ ಸುಬ್ಬಯ್ಯರಿಗೆ ಬಿಜೆಪಿಯ ಶಿವಕುಮಾರ್, ರಮೇಶ ಹಾಗೂ ಮ.ವಿ.ರಾಮಪ್ರಸಾದ್ ಬೆಂಬಲ ನೀಡಿದರು. ಕಡೆಗೆ ಪಾಲಿಕೆಯಿಂದ ಎಲ್ಲಾ ವಾರ್ಡ್ಗಳಿಗೂ ಸಮಾನವಾಗಿ ಅನುದಾನ ನೀಡಿ ಮೂಲ ಸೌಕರ್ಯ ಕಲ್ಪಿಸುವುದಾಗಿ ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ತಿಳಿಸಿದರು.

ಪಾರಂಪರಿಕ ಕಟ್ಟಡಗಳಿಗೆ ಅನುದಾನ ಮೀಸಲಿಡಿ:ಶಿಥಿಲಾವಸ್ಥೆಯಲ್ಲಿರುವ ಹಳೆಯ ಲ್ಯಾನ್ಸ್ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ
ಪಾರಂಪರಿಕ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಬಜೆಟ್‌ನಲ್ಲಿರಿಸಿಕೊಳ್ಳಿ, ಕಟ್ಟಡ ಕಾಮಗಾರಿ ಆರಂಭವಾದ ನಂತರ ಹಣದ ಕೊರತೆಯಿಂದ ವಿಳಂಬವಾಗಬಾರದು ಎಂದು ಅಯೂಬ್ ಖಾನ್ ಸಲಹೆ ನೀಡಿದರು. ಈಗಾಗಲೇ ಈ ಎರಡೂ ಕಟ್ಟಡಗಳಿಗೆ ಸರ್ಕಾರ ಅನುದಾನ ನೀಡುವ ಬಗ್ಗೆ ಸೂಚನೆ ನೀಡಿದೆಯಾದ್ದರಿಂದ ಪಾಲಿಕೆಯ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಅಗತ್ಯವಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಬೀದಿ ನಾಯಿಗಳ ಹಾವಳಿ: ಮೈಸೂರಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾ ಗಿದ್ದು, ದಾಳಿಗೊಳಗಾದ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಬೇಕು. ಈಗಾಗಲೇ ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತçಚಿಕಿತ್ಸೆ ಮಾಡಲು ಪಾಲಿಕೆಯಿಂದ ಕೋಟ್ಯಾಂತರ ರೂ. ಹಣ ಖರ್ಚು ಮಾಡಿದರೂ ನಾಯಿಗಳ ಸಂಖ್ಯೆ ಕಡಿಮೆಯಾಗದಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ತರಾಟೆ: ಪೈಪುಗಳು ಒಡೆದು ನೀರು ಸರಬರಾಜಿನಲ್ಲಿ ವ್ಯತ್ಯಯವುಂ ಟಾಗಿ ಜನರಿಗೆ ತೀವ್ರ ತೊಂದರೆಯಾದರೂ ರಿಪೇರಿ ಮಾಡಿ ಸಮಸ್ಯೆ ಬಗೆಹರಿಸದ ವಾಣ ವಿಲಾಸ ವಾಟರ್ ವರ್ಕ್ಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಯೂಬ್ ಖಾನ್, ಕೇವಲ ಎಸಿ ಕಾರು, ಕಚೇರಿಯಲ್ಲಿ ಕುಳಿತು ಮಜಾ ಮಾಡುತ್ತಿದ್ದೀರಿ, ಜನರು ನಮಗೆ ಹಾದಿ ಬೀದಿಯಲ್ಲಿ ಬಯ್ಯುತ್ತಿದ್ದಾರೆ ಎಂದು ಕೆಂಡ ಕಾರಿದರು.

Translate »