ನೇಪಾಳದಲ್ಲಿ ನಡೆದ ಕಿಕ್ ಬಾಕ್ಸಿಂಗ್‍ನಲ್ಲಿ ಮೈಸೂರಿನ ಐವರು ಯುವಕರಿಗೆ ಪದಕ
ಮೈಸೂರು

ನೇಪಾಳದಲ್ಲಿ ನಡೆದ ಕಿಕ್ ಬಾಕ್ಸಿಂಗ್‍ನಲ್ಲಿ ಮೈಸೂರಿನ ಐವರು ಯುವಕರಿಗೆ ಪದಕ

June 11, 2019

ಮೈಸೂರು: ನೇಪಾಳದಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮೈಸೂರಿನ ಐವರು ಯುವ ಪಟುಗಳು ಪದಕ ಗಳಿಸಿದ್ದಾರೆ.

ಮೈಸೂರಿನ ಅಕಾಡೆಮಿ ಆಫ್ ಸೆಲ್ಫ್ ಡಿಫೆನ್ಸ್(ಎಎಸ್‍ಡಿ) ಫೈಟ್ ಕ್ಲಬ್ ಮೂಲಕ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಹೆಚ್.ಎಂ.ಶ್ರೀಹರಿ ಲೈಟ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಪಾಯಿಂಟ್ ಫೈಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ, ಎಂ.ಶ್ರೀವಾತ್ಸವ್ ಲೋ ಕಿಕ್ ವಿಭಾಗದಲ್ಲಿ ಚಿನ್ನ, ಎಂ.ತೇಜಸ್ ಲೈಟ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಬೆಳ್ಳಿ, ಸುಹಾಸ್ ಹಾಗೂ ಎ.ರಂಜಿತ್ ಲೋ ಕಿಕ್ ವಿಭಾಗ ದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿರುವ ಹೆಚ್.ಎಂ.ಶ್ರೀಹರಿ ಮೂಲತಃ ಹಾಸನ ಜಿಲ್ಲೆ, ಹೊಳೆನರಸೀಪುರದವರಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಕೆಜಿ ಕೊಪ್ಪ ಲಿನಲ್ಲಿರುವ ಸಂಬಂಧಿಯೊಬ್ಬರ ಮನೆ ಯಲ್ಲಿ ವಾಸವಿದ್ದಾರೆ. ಇವರು ಎಂಐಟಿ ಕಾಲೇಜಿನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ. ಇನ್ನು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಶ್ರೀವಾತ್ಸವ್, ಕಾವೇರಿ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಮುಗಿಸಿರುವ ತೇಜಸ್, ಮಹಾಜನ ಪದವಿ ಕಾಲೇಜಿನ ವಿದ್ಯಾರ್ಥಿ ಸುಹಾಸ್ ವಿದ್ಯಾಭ್ಯಾಸದೊಂದಿಗೆ ಕಿಕ್ ಬಾಕ್ಸಿಂಗ್ ನಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹಾಗೆಯೇ ಪೇಂಟರ್ ರಂಜಿತ್ ಕುಂಚ ಕಲೆಯೊಂದಿಗೆ ರಕ್ಷಣಾತ್ಮಕ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಮಾರ್ಚ್ ನಲ್ಲಿ ಪುಣೆಯಲ್ಲಿ ನಡೆದಿದ್ದ ರಾಷ್ಟ್ರೀಯ ಮಟ್ಟದ ಚಾಂಪಿಯನ್‍ಶಿಪ್‍ನಲ್ಲಿ ಈ ಐವರು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಯಾಗಿದ್ದರು. ಎಎಸ್‍ಡಿ ಕೋಚ್ ಹರ್ಷ ಶಂಕರ್ ಅವರ ತರಬೇತಿಯೊಂದಿಗೆ ಭಾಗ ವಹಿಸಿದ್ದ ಐದು ಮಂದಿಗೂ ಪದಕ ದಕ್ಕಿರುವುದು ವಿಶೇಷ.

ನೇಪಾಳ ರಾಜಧಾನಿ ಕಠ್ಮಂಡುವಿನ ದಶರಥ್ ರಂಗಶಾಲಾದಲ್ಲಿ ಜೂ.1ರಿಂದ 4ರವರೆಗೆ ನಡೆದ `ವಕೋ(WAKO) ನೇಪಾಳ್ ಇಂಟರ್‍ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 58 ಪಟುಗಳು ಭಾಗವಹಿಸಿದ್ದರು. ಇವರಲ್ಲಿ ಕರ್ನಾಟಕದವರೆಂದರೆ ಮೈಸೂರಿನಿಂದ ತೆರಳಿದ್ದ ಈ 5 ಮಂದಿ ಮಾತ್ರ. ಮೈಸೂ ರಿನ ಪಟುಗಳು ಗಳಿಸಿರುವ 6 ಸೇರಿದಂತೆ ಭಾರತಕ್ಕೆ ಒಟ್ಟು 61 ಪದಕಗಳು ಸಂದಿವೆ. ಇದರಲ್ಲಿ 38 ಚಿನ್ನ, 14 ಬೆಳ್ಳಿ ಹಾಗೂ 9 ಹಿತ್ತಾಳೆ(ಬ್ರಾಸ್) ಪದಕಗಳಿವೆ.

Translate »