`ಕಾವಾ’ಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ
ಮೈಸೂರು

`ಕಾವಾ’ಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ

February 19, 2021

ಮೈಸೂರು, ಫೆ.18(ವೈಡಿಎಸ್)- ಮೈಸೂರು ನಜರ್‍ಬಾದ್‍ನಲ್ಲಿರುವ ಚಾಮ ರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿ (ಕಾವಾ)ಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಗುರುವಾರ ಮಧ್ಯಾಹ್ನ ಭೇಟಿ ನೀಡಿ, ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ, ಅನ್ವಯ ಕಲೆ, ಛಾಯಾಚಿತ್ರ ಮತ್ತು ಛಾಯಾ ಪತ್ರಿ ಕೋದ್ಯಮ, ಕಲಾ ಇತಿಹಾಸ ವಿಭಾಗ ವೀಕ್ಷಿಸಿದರು. ನಂತರ, ಗ್ರಂಥಾಲಯ ಸಭಾಂಗಣದಲ್ಲಿ `ಕಾವಾ’ ಅಧಿಕಾರಿಗಳು, ಪ್ರಾಧ್ಯಾಪಕರೊಂದಿಗೆ ಸಭೆ ನಡೆಸಿದರು.

ಕಾವಾ ಕಾಲೇಜಿನ ಪ್ರಭಾರ ಡೀನ್ ಬಿ.ಆರ್.ಪೂರ್ಣಿಮಾ, ಆಡಳಿತಾಧಿಕಾರಿ ನಿರ್ಮಲಾ ಮಠಪತಿ ಕಾಲೇಜು ನಡೆದು ಬಂದ ಹಾದಿ, ಮುಂದಿನ ಶೈಕ್ಷಣಿಕ ಸಾಲಿ ನಲ್ಲಿ ಕೈಗೊಂಡಿರುವ ಕಾರ್ಯ ಚಟುವಟಿಕೆ ಗಳ ಕುರಿತು ಮಾಹಿತಿ ನೀಡಿದರು. ಕಾಲೇ ಜಿನಲ್ಲಿ ಖಾಲಿ ಇರುವ ಉಪನ್ಯಾಸಕರು, ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೊಸದಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ಆರಂಭಿಸಲು ಕಟ್ಟಡ ನಿರ್ಮಾಣವಾಗುತ್ತಿದ್ದು, ಅಗತ್ಯ ಪರಿಕರಗಳು ಹಾಗೂ ಇತ್ಯಾದಿಗಳನ್ನು ಖರೀದಿಸಿ ವಿದ್ಯಾರ್ಥಿಗಳ ಅವಶ್ಯಕತೆಗೆ ತಕ್ಕಂತೆ ಅನು ಕೂಲ ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು. `ಮುಂದಿನ ದಿನ ಗಳಲ್ಲಿ ಸಭೆ ಕರೆದು ಪರಿಹರಿಸುವೆ’ ಎಂದು ಸಚಿವರು ಭರವಸೆ ನೀಡಿದರು.

ಖಾಯಂಗೊಳಿಸಿ: ಹಲವು ವರ್ಷ ಗಳಿಂದ ಅತಿಥಿ ಬೋಧಕರಾಗಿದ್ದು, ನೌಕರಿ ಕಾಯಂಗೊಳಿಸಬೇಕೆಂದು ಉಮಾಶ್ರೀ ಅವರು ಕನ್ನಡ-ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗಿನಿಂದ ಈವ ರೆಗೂ ಮೂವರು ಸಚಿವರಲ್ಲಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ. ತಾವಾದರೂ ಖಾಯಂಗೊಳಿಸಿ ಎಂದು ಕಾವಾದ ಅತಿಥಿ ಉಪನ್ಯಾಸಕರು ಸಚಿವ ಅರವಿಂದ ಲಿಂಬಾವಳಿ ಅವರಿಗೆ ಮನವಿ ಮಾಡಿದರು.

 

Translate »