ಹತ್ತು ವರ್ಷ ಶಾಸಕರಾಗಿ ಏನೊಂದೂ ಅಭಿವೃದ್ಧಿ ಮಾಡದ ಎಂ.ಕೆ.ಸೋಮಶೇಖರ್
ಮೈಸೂರು

ಹತ್ತು ವರ್ಷ ಶಾಸಕರಾಗಿ ಏನೊಂದೂ ಅಭಿವೃದ್ಧಿ ಮಾಡದ ಎಂ.ಕೆ.ಸೋಮಶೇಖರ್

May 14, 2020

ಮೈಸೂರು, ಮೇ 13(ಆರ್‍ಕೆಬಿ)- ಬಿಜೆ ಪಿಯ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಎರಡು ಬಾರಿ ಶಾಸಕರಾಗಿ 10 ವರ್ಷ ಏನೊಂದೂ ಅಭಿವೃದ್ಧಿ ಕೆಲಸ ಮಾಡದ ಎಂ.ಕೆ.ಸೋಮಶೇಖರ್, ಸೀವೆಜ್ ಫಾರಂ ಸಮಸ್ಯೆಯನ್ನು ಕಿಂಚಿತ್ತು ಬಗೆಹರಿಸದೆ ಕಾಲ ಹರಣ ಮಾಡಿದವರು. ಈಗ ಸೀವೆಜ್ ಫಾರ್ಮ್ ವಿಚಾರದಲ್ಲಿ ಅನಗತ್ಯವಾಗಿ ಶಾಸಕ ಎಸ್.ಎ.ರಾಮದಾಸ್ ಅವರ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು ಕಿಡಿಕಾರಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸೀವೆಜ್ ಫಾರಂ ಕಸದ ವಿಚಾರದಲ್ಲಿ ಶಾಸಕ ರಾಮ ದಾಸ್ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಬಿಜೆಪಿ ಮುಖಂಡರು ಬುಧs ವಾರ ಮೈಸೂರಿನ ಗನ್‍ಹೌಸ್ ಬಳಿಯ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಕರೆ ದಿದ್ದ ಸುದ್ದಿಗೋಷ್ಠಿಯಲ್ಲಿ ಸೋಮ ಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.

ಸೀವೆಜ್ ಫಾರಂ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿರುವುದಾಗಿ ಹೇಳಿಕೊಳ್ಳುವ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಅವರ ಗುರುಗಳಾದ ಹಾಗೂ ಸೀವೆಜ್ ಫಾರಂನಲ್ಲಿ ಕಸದ ಘಟಕ ತಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಸೀವೆಜ್ ಫಾರಂ ಸಮಸ್ಯೆ ಯನ್ನು ಕಿಂಚಿತ್ತು ಬಗೆಹರಿಸದೆ ಕಾಲ ಹರಣ ಮಾಡಿದ್ದವರು ಎಂದು ಟೀಕಿಸಿದರು.

ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ನಗರ ಪಾಲಿಕೆ ಸದಸ್ಯರಾಗಿ ಗೆದ್ದು, ಸರ್ಕಾರಕ್ಕೆ ಸುಳ್ಳು ಪತ್ರವನ್ನು ನೀಡಿ ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಏಜೆನ್ಸಿ ಹೊಂದಿರುವ ಸೋಮಶೇಖರ್ ಶಾಸಕ ರಾಮದಾಸ್‍ಗೆ ಪಾಠ ಹೇಳುವ ಅಗತ್ಯವಿಲ್ಲ. ಸೋಮಶೇಖರ್ ಶಾಸಕರಾಗಿ ದ್ದಾಗ ಅವರೇ ಆಶ್ರಯ ಸಮಿತಿಯ ಅಧ್ಯಕ್ಷ ರಾಗಿ ಕಡುಬಡವರಿಗೆ ಆಶ್ರಯ ಮನೆ ನೀಡ ಲಾಗಲಿಲ್ಲ. ಬಡವರು ಇವರಿಗೆ ಶಾಪ ಹಾಕು ವುದು ಇನ್ನೂ ನಿಂತಿಲ್ಲ ಎಂದು ಹೇಳಿದರು.

ಶಾಸಕ ರಾಮದಾಸ್ ಅವರು ಮೈಸೂ ರಿಗೆ ಅಂಬೇಡ್ಕರ್ ಭವನ, ಆಶ್ರಯ ಮನೆ ಗಳು, ಕಬಿನಿ ಕುಡಿಯುವ ನೀರಿನ ಯೋಜನೆ, ಜನೌಷಧಿ ಕೇಂದ್ರ, ಜಯದೇವ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಬಾಬು ಜಗಜೀವನ್ ರಾಮ್ ಭವನ, ಮೃಗಾಲಯದ ಅಭಿವೃದ್ದಿ, ಮಂಡ ಕಳ್ಳಿಯಲ್ಲಿ ಮತ್ತು ಮಹದೇವಪುರ ಗೇಟ್ ಬಳಿ ಗುಡಿಸಲು ನಿವಾಸಿಗಳಿಗೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಜಿ+3 ಮನೆಗಳ ನಿರ್ಮಾಣ, ಜಯನಗರ ಆಸ್ಪತ್ರೆ ಉನ್ನತೀಕರಣ, ಮುಕ್ತ ವಿವಿಯ ಯುಜಿಸಿ ಮಾನ್ಯತೆ ಹಾಗೂ ಇನ್ನು ಹತ್ತು ಹಲವಾರು ಯೋಜನೆಯನ್ನು ತಂದಿರುವ ಕ್ರಿಯಾ ಶೀಲ ಶಾಸಕ. ಅಂಥವರ ಬಗ್ಗೆ ಅನಗತ್ಯ ವಾಗಿ ಬರೀ ಸುಳ್ಳು ಹೇಳಿಕೆಗಳನ್ನು ನೀಡಿರುವ ಸೋಮಶೇಖರ್ ಮಾನಸಿಕ ಸ್ಥಿಮಿತ ಕಳೆದುಕೊಂಡು, ಹತಾಶರಾಗಿದ್ದಾರೆ ಎಂದು ಕಿಡಿಕಾರಿದರು.

ಹತ್ತು ವರ್ಷಗಳ ಕಾಲ ಶಾಸಕರಾಗಿದ್ದ ಸೋಮಶೇಖರ್ ಕ್ಷೇತ್ರದಲ್ಲಿ ಏನೊಂದೂ ಕೆಲಸ ಮಾಡದಿದ್ದರಿಂದಲೇ ಕ್ಷೇತ್ರದ ಜನತೆ ಕಳೆದ ಚುನಾವಣೆಯಲ್ಲಿ ಅವರನ್ನು ನಾಲಾ ಯಕ್ ಎಂದು ತೀರ್ಮಾನಿಸಿ 26,395 ಮತ ಗಳ ಅಂತರದಿಂದ ಸೋಲಿಸಿದ್ದಾರೆ. ಜನತೆ ನೀಡಿರುವ ತೀರ್ಪನ್ನು ಅರಗಿಸಿ ಕೊಳ್ಳಲಾ ಗದೆ ಜನರ ತೀರ್ಪಿನ ವಿರುದ್ಧವೇ ಬಾಲಿಶ ವಾಗಿ ಇವಿಎಂ ಹ್ಯಾಕ್ ಆಗಿದೆ ಎಂದು ನಿರಾಧಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿ, ಒಮ್ಮೆಯೂ ನ್ಯಾಯಾಲಯಕ್ಕೆ ಹಾಜ ರಾಗದೆ ವಿನಾಕಾರಣ ಕಾಲಹರಣ ಮಾಡು ತ್ತಿದ್ದಾರೆ. ಇಂತಹವರು ರಾಮದಾಸ್ ಅವರ ರಾಜೀನಾಮೆ ಕೇಳಲು ನೈತಿಕತೆ ಉಳಿಸಿ ಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಕೊರೊನಾ ವೈರಸ್ ತಡೆಗೆ ಲಾಕ್‍ಡೌನ್ ಜಾರಿಯಿರುವ ಸಂದರ್ಭದಲ್ಲಿ ಮೈಸೂರು ನಗರದ ಕಲ್ಯಾಣ ಮಂಟಪಗಳ ಸಂಘದ ಅಧ್ಯಕ್ಷರಾಗಿರುವ ಸೋಮಶೇಖರ್, ಇದು ವರೆಗೂ ಕಲ್ಯಾಣ ಮಂಟಪಕ್ಕೆ ಮುಂಗಡ ಹಣ ನೀಡಿ ಕಾಯ್ದಿರಿಸಿರುವ ಗ್ರಾಹಕರಿಗೆ ಮುಂಗಡ ಹಣ ವಾಪಸ್ ನೀಡಬೇಕೆಂದಿ ದ್ದರೂ ಹಣ ನೀಡದೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುವುದು ಅವರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ ಯಾಗಿದೆ ಎಂದು ಟೀಕಿಸಿದರು.

ಕೆಟ್ಟ ಮನಸ್ಥಿತಿಯ ಸೋಮಶೇಖರ್ ಸೀವೆಜ್ ಫಾರಂನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿರುವುದು, ಆ ಜಾಗವನ್ನು ದಾನ ನೀಡಿದ ಮೈಸೂರು ರಾಜವಂಶಸ್ಥರ ಒಡಂಬಡಿಕೆ ಯಲ್ಲಿದೆಯೇ? ಇದೇ ಸ್ಥಳದಲ್ಲಿ ಕಸ ವಿಲೇ ವಾರಿ ಘಟಕ ಇರಬೇಕೋ ಅಥವಾ ರಾಯನ ಕೆರೆಗೆ ಸ್ಥಳಾಂತರವಾಗಬೇಕೋ ಎಂಬ ಪ್ರಶ್ನೆಗೆ ಸೋಮಶೇಖರ್ ಉತ್ತರ ನೀಡಿ, ನನ್ನೊಂದಿಗೆ ನೇರ ಸಂವಾದಕ್ಕೆ ಬರಲಿ. ಆ ಬಳಿಕ ಶಾಸಕ ಎಸ್.ಎ.ರಾಮದಾಸ್ ಜೊತೆಗೆ ಸಂವಾದ ನಡೆಸುವ ಪ್ರಯತ್ನ ಮಾಡಲಿ ಎಂದು ಸವಾಲು ಹಾಕಿದರು. ಗೋಷ್ಠಿ ಯಲ್ಲಿ ನಗರಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಶಾರದಮ್ಮ, ಶಾಂತಮ್ಮ ವಡಿವೇಲು, ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ರಾದ ಸಂತೋಷ್, ರವಿ, ಪ್ರಧಾನ ಕಾರ್ಯ ದರ್ಶಿ ಜೆ.ನಾಗೇಂದ್ರ ಉಪಸ್ಥಿತರಿದ್ದರು.

Translate »