ವಿವಿಧ ಸೇವಾಕಾರ್ಯ ಮೂಲಕ ಶಾಸಕ ನಾಗೇಂದ್ರ ಹುಟ್ಟುಹಬ್ಬ ಆಚರಣೆ
ಮೈಸೂರು

ವಿವಿಧ ಸೇವಾಕಾರ್ಯ ಮೂಲಕ ಶಾಸಕ ನಾಗೇಂದ್ರ ಹುಟ್ಟುಹಬ್ಬ ಆಚರಣೆ

September 12, 2021

ಮೈಸೂರು, ಸೆ.11(ಎಂಕೆ)- ಮೈಸೂರು ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಿಶೇಷಚೇತನ ಮಕ್ಕಳಿಗೆ ಉಪ ಹಾರ, ಹಣ್ಣು-ಹಂಪಲು ವಿತರಣೆ, ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಮಹಿಳೆಯರಿಗೆ ಸೀರೆ ವಿತರಣೆ ಮಾಡುವ ಮೂಲಕ ಶಾಸಕ ಎಲ್.ನಾಗೇಂದ್ರ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನಲ್ಲಿ ಶನಿವಾರ ಬೆಳಗ್ಗೆ 7.30ಕ್ಕೆ ಪಾರಿವಾಳಗಳಿಗೆ ಆಹಾರ ನೀಡುವ ಮೂಲಕ ಆರಂಭವಾದ ಶಾಸಕ ಎಲ್. ನಾಗೇಂದ್ರ ಅವರ ಹುಟ್ಟುಹಬ್ಬದ ಕಾರ್ಯ ಕ್ರಮಗಳು ರಾತ್ರಿ 9 ಗಂಟೆಯವರೆಗೆ ನಡೆ ದವು. ವಿಜಯನಗರ 1ನೇ ಹಂತದಲ್ಲಿರುವ ಯೋಗಾನರಸಿಂಹಸ್ವಾಮಿ ದೇವಸ್ಥಾನ, ಕೆ.ಆರ್. ಆಸ್ಪತ್ರೆ ಎದುರಿನ ಗಣಪತಿ ದೇವಸ್ಥಾನ (ಅಕ್ಕಿಚೌಕ), ಹೆಬ್ಬಾಳ 3ನೇ ಹಂತದ ಸುಬ್ರ ಹ್ಮಣ್ಯನಗರದಲ್ಲಿರುವ ಗಣಪತಿ ದೇವಸ್ಥಾನ, ಮಂಚೇಗೌಡನಕೊಪ್ಪಲಿನ ಮಾರಿಗುಡಿ ಬಳಿ, ಮಹದೇಶ್ವರ ಬಡಾವಣೆ ತ್ರಿನೇತ್ರ ವೃತ್ತ ದಲ್ಲಿ ಬಳಿಯಿರುವ ಚಾಮುಂಡೇಶ್ವರಿ ದೇವ ಸ್ಥಾನ, ಲೋಕನಾಯಕನಗರದ ಬಸವ ಗುಡಿ ವೃತ್ತದಲ್ಲಿನ ಬಸವೇಶ್ವರ ದೇವಸ್ಥಾನ, ಕುಂಬಾರಕೊಪ್ಪಲಿನ ಬಯಲು ರಂಗಮಂದಿರ ಹಾಗೂ ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಚಾಮರಾಜ ಕ್ಷೇತ್ರದ ಪಾಲಿಕೆ ಸದಸ್ಯರು, ಮುಖಂಡರಿಂದ ಅಭಿನಂದಿಸಲಾಯಿತು.

ವಿಶೇಷಚೇತನ ಮಕ್ಕಳಿಗೆ ಉಪಾಹಾರ, ಹಣ್ಣು ವಿತರಣೆ: ಗಂಗೋತ್ರಿ ಬಡಾವಣೆ ಯಲ್ಲಿರುವ ಪುಟ್ಟೀರಮ್ಮ ಕಿವುಡ ಶಾಲಾ ಮಕ್ಕಳಿಗೆ ಉಪಾಹಾರ ಹಾಗೂ ತಿಲಕ್ ನಗರದ ಬಂಬೂಬಜಾರ್ ವೃತ್ತದಲ್ಲಿರುವ ಡೆಫ್ ಅಂಡ್ ಡಮ್ ಶಾಲೆಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಹಾಗೆಯೇ ಯಾದಗಿರಿಯ ರೈಲ್ವೆ ಶಾಲೆ ಮತ್ತು ಮೇದಾರ್ ಬ್ಲಾಕ್‍ನ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪಸ್ತಕ ವಿತರಣೆ ಮಾಡಲಾಯಿತು.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ದೇವ ರಾಜ ಮೊಹಲ್ಲಾದ ಗಂಗಮ್ಮ ದೇವಸ್ಥಾನ ದಲ್ಲಿ 200 ಮಂದಿ ಮಹಿಳೆಯರಿಗೆ ಉಡು ಗೊರೆಯಾಗಿ ಶಾಸಕ ನಾಗೇಂದ್ರ ಸೀರೆ ವಿತರಿಸಿದರು. ನಾಳೆಯೂ(ಸೆ.12) ನಾಗೇಂದ್ರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜ ಕ್ಷೇತ್ರದಲ್ಲಿರುವ ದೇವಸ್ಥಾನಗಳಲ್ಲಿ ವಿಶೇಷ ಮತ್ತು ಅಭಿನಂದನೆ ಕಾರ್ಯಕ್ರಮಗಳು ನಡೆಯಲಿವೆ.

Translate »