ಕೆ.ಆರ್.ಕ್ಷೇತ್ರದ ಕೊರೊನಾ ವಾರಿಯರ್ಸ್ ಜತೆ ಶಾಸಕ ರಾಮದಾಸ್ ಸಭೆ
ಮೈಸೂರು

ಕೆ.ಆರ್.ಕ್ಷೇತ್ರದ ಕೊರೊನಾ ವಾರಿಯರ್ಸ್ ಜತೆ ಶಾಸಕ ರಾಮದಾಸ್ ಸಭೆ

April 23, 2020

ಮೈಸೂರು,ಏ.22(ಎಂಟಿವೈ)- ಲಾಕ್ ಡೌನ್ ಶುರುವಾದಾಗಿನಿಂದ ದಿನವೂ ಕೆ.ಆರ್.ಕ್ಷೇತ್ರದ ಎಲ್ಲ ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಕಷ್ಟದಲ್ಲಿರುವವರಿಗೆ ಸಿದ್ಧ ಆಹಾರದ ಪೊಟ್ಟಣ ತಲುಪಿಸಲು ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ. ಈ ಸೇವೆ 28 ದಿನಗಳಿಂದಲೂ ನಿರಂತರ ವಾಗಿ ನಡೆಯುತ್ತಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆ.ಆರ್.ವಿಧಾನಸಭಾ ಕ್ಷೇತ್ರದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಬಿಜೆಪಿ ಕಾರ್ಯಕರ್ತರ ಜತೆ ಮೈಸೂರಿನ ಕಾಡಾ ಕಚೇರಿ ಹಿಂಭಾಗದ ಮೈದಾನದಲ್ಲಿ ಬುಧವಾರ ಸಭೆ ನಡೆಸಿದ ರಾಮದಾಸ್, ಕ್ಷೇತ್ರದ ಪ್ರತಿ ವಾರ್ಡ್‍ಗೂ ತಲಾ 25 ಸ್ವಯಂಸೇವಕರನ್ನು ನೇಮಿಸಲಾಗಿದೆ. ಲಾಕ್‍ಡೌನ್ ಆರಂಭವಾದ ದಿನದಿಂದ ಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡುತ್ತಾ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ದಿನಕ್ಕೆ ತಲಾ 3 ವಾರ್ಡ್‍ಗಳಂತೆ ಸಭೆ ನಡೆಸಿ, ಮಾಹಿತಿ ಕಲೆಹಾಕಿ ಅಗತ್ಯ ಸೂಚನೆ ಗಳನ್ನು ನೀಡಲಾಗುತ್ತಿದೆ ಎಂದರು. ಬುಧ ವಾರದ ಸಭೆಯಲ್ಲಿ ಪಾಲಿಕೆಯ ವಾರ್ಡ್ 49, 51, 52, 53ರಲ್ಲಿ ಬಿಜೆಪಿಯ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಕೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದಿ ರುವ ಬಿಜೆಪಿ ಕಾರ್ಯಕರ್ತರಿಗೂ ದಿನಸಿ ಕಿಟ್ ವಿತರಿಸಲಿದ್ದು, ಪಟ್ಟಿ ಮಾಡುವಂತೆ ಬೂತ್ ಮಟ್ಟದ ಬಿಜೆಪಿ ಅಧ್ಯಕ್ಷರುಗಳಿಗೆ ಸೂಚಿಸಲಾಗಿದೆ. ಕೆಲ ನಿಷ್ಠಾವಂತ ಕಾರ್ಯ ಕರ್ತರು ತಮಗೆ ನೀಡಿದ ಆಹಾರ ಕಿಟ್ಟನ್ನೂ ಕೂಲಿ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿ ಗಳ ಕುಟುಂಬಕ್ಕೆ ಕೊಟ್ಟು ನಿಸ್ವಾರ್ಥ ಗುಣ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿ ಸಿದ ಶಾಸಕರು, ದಿನಸಿ ಕಿಟ್ ಬೇಡ ಎನ್ನುವ ಕಾರ್ಯಕರ್ತರ ಪಟ್ಟಿಯನ್ನೂ ತಯಾರಿಸಿ ಬಿಜೆಪಿ ರಾಜ್ಯ ಕಾರ್ಯಾ ಲಯಕ್ಕೆ ಹಾಗೂ ರಾಜ್ಯಾಧ್ಯಕ್ಷರಿಗೆ ಕಳುಹಿಸಲಾಗುವುದು ಎಂದರು.

ನಿತ್ಯ ಮನೆ ಬಾಗಿಲಿಗೆ ಊಟ, ಔಷಧ ತಲುಪಿಸುತ್ತಿರುವ ಸ್ವಯಂಸೇವಕರು ಕಡ್ಡಾಯವಾಗಿ `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಕಂಟೈ ನ್ಮೆಂಟ್ ಏರಿಯಾಗೆ ತೆರಳಿದಾಗ ಕೊರೊನಾ ಸೋಂಕಿತರು ಸಮೀಪಿಸಿದರೆ ಈ ಆ್ಯಪ್ ಎಚ್ಚರಿಕೆ ಸಂದೇಶ ನೀಡುತ್ತದೆ. ಸ್ವರಕ್ಷಣೆಗೆ ಇದು ಸಹಕಾರಿ ಎಂದರು.

ಸೇವೆ ಸಲ್ಲಿಸಲು ಮನೆಗಳಿಗೆ ತೆರಳಿದಾಗ ಕನಿಷ್ಠ 10 ರೂ.ಗಳನ್ನು `ಪಿಎಂ ಕೇರ್ ಫಂಡ್’ ಮತ್ತು `ಸಿಎಂ ಕೇರ್ ಫಂಡ್’ಗೆ ದೇಣಿಗೆಯಾಗಿ ನೀಡುವಂತೆ ಆ ಕುಟುಂಬದ ಸದಸ್ಯರ ಮನವೊಲಿಸಿ ಎಂದೂ ಶಾಸಕರು ಸಲಹೆ ನೀಡಿದರು. ಬಿಜೆಪಿ ಕೆಆರ್ ಕ್ಷೇತ್ರ ಅಧ್ಯಕ್ಷ ಎಂ.ವಡಿವೇಲು, ಆಶ್ರಯ ಸಮಿತಿ ಸದಸ್ಯೆ ಎ.ವಿ.ವಿದ್ಯಾ ಅರಸ್, ಮುಖಂಡ ಮೈ.ಪು.ರಾಜೇಶ್, ಪಾಲಿಕೆ ಸದಸ್ಯರು, ವಾರ್ಡಿನ ಉಸ್ತುವಾರಿ ಮತ್ತು ಬೂತ್ ಅಧ್ಯಕ್ಷರು ಪಾಲ್ಗೊಂಡಿದ್ದರು. ಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.

Translate »