ಸೋಮವಾರ ನಾಪೋಕ್ಲು ವಾರದ ಸಂತೆ ರದ್ದು
ಕೊಡಗು

ಸೋಮವಾರ ನಾಪೋಕ್ಲು ವಾರದ ಸಂತೆ ರದ್ದು

April 25, 2021

ಟಾಸ್ಕ್‍ಪೋರ್ಸ್ ಸಭೆಯಲ್ಲಿ ತೀರ್ಮಾನ
ನಾಪೋಕ್ಲು(ದುಗ್ಗಳ), ಏ.24- ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸೋಮವಾರ ನಡೆಯುವ ಈ ಬಾರಿಯ ನಾಪೋಕ್ಲು ವಾರದ ಸಂತೆಯನ್ನು ರದ್ದುಪಡಿಸಲಾಗಿದೆ. ಲಾಕ್‍ಡೌನ್ ಅವಧಿ ಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲ್ಲಿನ ಗ್ರಾಮಪಂಚಾಯಿತಿ ಸಭಾಂಗಣ ದಲ್ಲಿ ನಡೆದ ಟಾಸ್ಕ್‍ಪೋರ್ಸ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಗ್ರಾಮಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್‍ಬೇಬ ಮಾತನಾಡಿ, ಲಾಕ್‍ಡೌನ್ ಅವಧಿಯಲ್ಲಿ ಹಾಗೂ ಇತರ ದಿನಗಳಲ್ಲಿ ಹಣ್ಣು-ಹಂಪಲು, ತರಕಾರಿ ಅಂಗಡಿ ಗಳಲ್ಲಿ ಗ್ರಾಹಕರು ವ್ಯವಹರಿಸಬೇಕು. ತೆರೆದ ವಾಹನಗಳ ಮೂಲಕ ದಿನಸಿ ಹಾಗೂ ಇನ್ನಿತರ ವಸ್ತು ಗಳನ್ನು ಮಾರಾಟ ಮಾಡುವಂತಿಲ್ಲ. ಹಾಗೆ ಮಾರಾಟ ಮಾಡಿದಲ್ಲಿ ಹಾಗೂ ಸಾರ್ವಜನಿಕ ರಿಂದ ದುಪ್ಪಟ್ಟು ದರ ವಸೂಲು ಮಾಡಿದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪೋಲಿಸ್ ಇಲಾಖೆ ವತಿಯಿಂದ ಕೋವಿಡ್ 19ರ ಮಾರ್ಗಸೂಚಿ ಅನ್ವಯ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಿ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಎಚ್ಚರಿಸಿದರು.
ಠಾಣಾಧಿಕಾರಿ ಆರ್.ಕಿರಣ್ ಮಾತನಾಡಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವ ಜನಿಕರ ಸಹಕಾರ ಅಗತ್ಯ ಎಂದರು. ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಹೆಚ್.ಎಸ್. ಪಾರ್ವತಿ ವಹಿಸಿದ್ದರು. ಉಪಾಧ್ಯಕ್ಷ ಮಹಮ್ಮದ್ ಖುರೇಶಿ, ಕಾಳೇ ಯಂಡ ಸಾಬ ತಿಮ್ಮಯ್ಯ, ಟಿ.ಎ. ಮಹ ಮ್ಮದ್. ಉಪ ತಹಸೀಲ್ದಾರ್ ರವಿ ಕುಮಾರ್, ಅಭಿವೃದ್ಧಿ ಅಧಿಕಾರಿ ಚೊಂದಕ್ಕಿ, ಗ್ರಾಮ ಲೆಕ್ಕಿಗೆ ಅಮೃತಾ ಇದ್ದರು.

Translate »