ಹಣ, ಅಧಿಕಾರಕ್ಕಿಂತ ಆರೋಗ್ಯವಂತ ಬದುಕಿಗೆ  ಮಹತ್ವ ನೀಡಲು ಮಾಜಿ ಶಾಸಕ ಎಂಕೆಎಸ್ ಸಲಹೆ
ಮೈಸೂರು

ಹಣ, ಅಧಿಕಾರಕ್ಕಿಂತ ಆರೋಗ್ಯವಂತ ಬದುಕಿಗೆ ಮಹತ್ವ ನೀಡಲು ಮಾಜಿ ಶಾಸಕ ಎಂಕೆಎಸ್ ಸಲಹೆ

March 15, 2021

ಮೈಸೂರು,ಮಾ.14(ಆರ್‍ಕೆಬಿ)- ಇಂದು ಹಣ, ಅಧಿಕಾರಕ್ಕೆ ಹೆಚ್ಚು ಮಹತ್ವ ನೀಡು ತ್ತೇವೆ. ಆದರೆ ಸಮಾಜದಲ್ಲಿ ಒಬ್ಬ ಉತ್ತಮ ಆರೋಗ್ಯವಂತ ವ್ಯಕ್ತಿಯಾಗಿ ಬದುಕು ವುದು ಬಹು ದೊಡ್ಡ ಸವಾಲಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅಭಿಪ್ರಾಯಪಟ್ಟರು.
ಮೈಸೂರಿನ ಅಶೋಕಪುರಂ ಜೈಭೀಮ್ ಪವರ್ ಇಂಡಿಯಾ ವ್ಯಾಯಾಮ ಶಾಲೆ ಯಲ್ಲಿ ಅಭ್ಯಾಸ ಮಾಡಿ, ರಾಷ್ಟ್ರ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರುವ ಮೋಹನ್, ಜಾನ್ ಬ್ಯಾಪ್ಟಿನ್ ಅವ ರನ್ನು ಅಭಿನಂದಿಸಿ ಅವರು ಮಾತನಾಡಿ ದರು. ಇಂದು ಬಹುತೇಕ ಯುವಕರು ಕಾಲೇಜು ಶಿಕ್ಷಣ ಮೊಟಕುಗೊಳಿಸಿ, ಮೋಜು, ಮಸ್ತಿ, ದುಶ್ಚಟಗಳಿಗೆ ದಾಸರಾಗಿ ಪವಿತ್ರ ವಾದ ಮಾನವ ಜನ್ಮವನ್ನು ಹಾಳು ಮಾಡಿ ಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಇಂತಹ ಸಂದರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗದವರೇ ಅಧಿಕವಾಗಿರುವ ಅಶೋಕಪುರಂನಲ್ಲಿ ಯುವಕರು, ವಿದ್ಯಾರ್ಥಿ ಗಳ ಸಾಧನೆಗೆ ಪ್ರೇರಣೆ ನೀಡಿ, ಜೈಭೀಮ್ ಪವರ್ ಇಂಡಿಯಾ ವ್ಯಾಯಾಮ ಶಾಲೆ ಶ್ರಮಿಸುತ್ತಿರುವುದು ಸಂತಸದ ವಿಚಾರ ಎಂದರು.
ಈ ವೇಳೆ ಮಾಜಿ ಮೇಯರ್ ಪುರು ಷೋತ್ತಮ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಸುನಿಲ್, ಮುಖಂಡರಾದ ಈಶ್ವರ ಚಕ್ಕಡಿ, ಜೋಗಿ ಮಹೇಶ್, ಶ್ರೀಧರ್, ನಾಗ ರಾಜು, ಪ್ರಸಾದ್ ಇತರರು ಉಪಸ್ಥಿತರಿದ್ದರು.

Translate »