ನವದೆಹಲಿ,ಸೆ.23-ಸಂಸತ್ ಮುಂಗಾರು ಅಧಿವೇಶನದ ಕೊನೆ ದಿನವಾದ ಬುಧ ವಾರ 8 ವಿಧೇಯಕಗಳು ಅನುಮೋದನೆ ಗೊಂಡಿವೆ. ಮಂಗಳವಾರ 7 ವಿಧೇಯಕ ಗಳಿಗೆ ಸಂಸತ್ ಅನುಮೋದನೆ ಸಿಕ್ಕಿತ್ತು. ವೃತ್ತಿಪರ ಸುರಕ್ಷತೆ, ಆರೋಗ್ಯ ರಕ್ಷಣೆ, ಕೆಲಸ ನಿರ್ವಹಣೆ, ಕೈಗಾರಿಕಾ ಸಂಬಂಧ ಗಳ ನಿರ್ವಹಣೆ ಹಾಗೂ ಸಾಮಾಜಿಕ ಭದ್ರತೆ ವಿಧೇಯಕ ಸೇರಿದಂತೆ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ವಿಧೇ ಯಕಗಳ ಅನುಮೋದನೆಯೊಂದಿಗೆ ಬುಧವಾರಕ್ಕೆ ಈ ಬಾರಿಯ ಮುಂಗಾರು ಅಧಿವೇಶನ ಅಂತ್ಯಗೊಂಡಿತು.
ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನ ಮಾತನಾಡಿದ ಸಭಾಪತಿಯೂ ಆದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, 8 ಸದಸ್ಯರನ್ನು ಅಮಾ ನತುಗೊಳಿಸಿದ್ದು ಒಳ್ಳೆಯ ಬೆಳವಣಿಗೆ ಅಲ್ಲ ಎನಿಸಿದರೂ, ಅವರ ವರ್ತನೆಯಿಂ ದಾಗಿ ಆ ಕ್ರಮ ಅನಿವಾರ್ಯವಾಗಿತ್ತು. ಪ್ರತಿಪಕ್ಷಗಳಿಗೆ ಪ್ರತಿಭಟನೆಗೆ ಹಕ್ಕು ಇದೆ. ಆದರೆ ಯಾವ ರೀತಿ ನಡೆಸಬೇಕು ಎನ್ನು ವುದನ್ನು ಅರಿತಿರಬೇಕು. ಸದನದ ಘನ ತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸ ಬೇಕಿತ್ತು ಎಂದರು. ಕಾರ್ಮಿಕರಿಗೆ ಸಂಬಂ ಧಿತ ವಿಧೇಯಕಗಳ ಜೊತೆಗೆ ಬುಧವಾರ ಅನುಮೋದನೆ ಪಡೆದ ವಿದೇಶಿ ದೇಣಿಗೆ ನಿಯಂತ್ರಣ
(ತಿದ್ದುಪಡಿ) ವಿಧೇಯಕದಿಂದಾಗಿ ಇನ್ಮುಂದೆ ಎನ್‍ಜಿಒಗಳ ಪದಾಧಿಕಾರಿಗಳು ನೋಂದಣಿ ವೇಳೆ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಲಿದೆ. ಇದರಿಂದ ಎನ್‍ಜಿಒಗಳ ಹಣದ ವಹಿವಾಟಿನ ಬಗ್ಗೆ ತೀವ್ರ ನಿಗಾ ಇರಿಸಲು ಅನುಕೂಲವಾಗಲಿದೆ. ವಿದೇಶಿ ದೇಣಿಗೆಯ ಶೇ.20ರಷ್ಟು ಮಾತ್ರ ಆಡಳಿ ತಾತ್ಮಕ ವೆಚ್ಚಗಳಿಗೆ ಬಳಸಿಕೊಳ್ಳಬೇಕು ಎಂಬ ನಿಯಂತ್ರಣವನ್ನು ವಿಧೇಯಕ ಹೇರಲಿದೆ. ಬುಧ ವಾರ ಸಂಜೆ ವೇಳೆ ಪ್ರತಿಪಕ್ಷಗಳ ನಿಯೋಗದ ಪರವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಸರಕಾರದ ಕಳುಹಿಸಿಕೊಡುವ ಕೃಷಿ ವಿಧೇಯಕಗಳಿಗೆ ಅಂಕಿತ ಹಾಕಬೇಡಿ ಎಂದು ಮನವಿಯನ್ನು ಸಲ್ಲಿಸಿದರು.
ಕೃಷಿ ವಿಧೇಯಕಗಳ ಅನುಮೋದನೆ ವೇಳೆ ವಾಯ್ಸ್ ವೋಟಿಂಗ್ ನಡೆದಿಲ್ಲ. ಮತಗಳ ವಿಭಜನೆಯೂ ಆಗಿಲ್ಲ. ಅಸಾಂವಿಧಾನಿಕ ರೀತಿಯಲ್ಲಿ ಏಕಪಕ್ಷೀಯ ನಿರ್ಧಾರವಾಗಿ ಸರಕಾರ ಕೃಷಿ ವಿಧೇಯಕಗಳಿಗೆ ಅನುಮೋದನೆ ಪಡೆದುಕೊಂಡಿದೆ. ಕೂಡಲೇ ಬಿಲ್‍ಗಳನ್ನು ಹಿಂದಕ್ಕೆ ಕಳುಹಿಸಿ ಎಂದು ಆಜಾದ್ ಅವರು ರಾಷ್ಟ್ರಪತಿಗೆ ಕೋರಿಕೆ ಸಲ್ಲಿಸಿದರು.
ಕೃಷಿ ವಿಧೇಯಕಗಳನ್ನು ಹಿಂಪಡೆಯಲು ಸರಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅದನ್ನು ವಿರೋಧಿ ರಾಜ್ಯಸಭೆಯಿಂದ ಹೊರನಡೆದ ಪ್ರತಿಪಕ್ಷಗಳು ಸಂಸತ್ ಆವರಣದಲ್ಲಿ ಮೌನ ಮೆರವಣಿಗೆಯನ್ನು ಬುಧವಾರ ನಡೆಸಿದವು. ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ಟಿಎಂಸಿ ಸಂಸದ ಡೆರಿಕ್ ಒಬ್ರೈನ್, ಎಸ್‍ಪಿಯ ಜಯಾ ಬಚ್ಚನ್, ಸಿಪಿಐ, ಡಿಎಂಕೆ, ಆರ್‍ಜೆಡಿ, ಆಪ್, ಎನ್‍ಸಿಪಿ ಸಂಸದರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೃಷಿಕರನ್ನು ರಕ್ಷಿಸಿ, ಕಾರ್ಮಿಕರನ್ನು ರಕ್ಷಿಸಿ ಮತ್ತು ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಪ್ಲೆಕಾರ್ಡ್ ಗಳನ್ನು ಹಿಡಿದು ಪ್ರತಿಪಕ್ಷ ನಾಯಕರು ಸಾಗಿದರು. ಅ.1ರಂದು ಮುಕ್ತಾಯವಾಗಬೇಕಿದ್ದ ಅಧಿವೇಶನ ಸೆ.23ಕ್ಕೆ ಅಂತ್ಯಗೊಂಡ ಪರಿಣಾಮ 10 ದಿನಗಳ ಕಲಾಪವಷ್ಟೇ ನಡೆಯಿತು.