ಶಿವಮೊಗ್ಗ, ಮೇ ೨೩- ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಏಕಕಾಲದಲ್ಲಿ ಬರೋಬ್ಬರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ಆರೀಫ್ ಹಾಗೂ ಅಲ್ಮಾಜಾ ಬಾನು ದಂಪತಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅಲ್ಮಾಜಾ ಬಾನು ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯಕೀಯ ಕ್ಷೇತ್ರದ ಪ್ರಕಾರ ಒಟ್ಟಿಗೆ ೪ ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ತುಂಬಾ ಅಪರೂಪ. ೫.೧೨ ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿ ೪ ಮಕ್ಕಳಿಗೆ ಜನ್ಮ ನೀಡುವುದು ಕಂಡು ಬರುತ್ತದೆ. ೪ ಮಕ್ಕಳಾಗುವುದಕ್ಕೆ ಅನುವಂಶೀಯ ಅಂಶಗಳೇ ಕಾರಣ ಎಂದು ತಜ್ಞ ವೈದ್ಯರೊಬ್ಬರು ಮಾಹಿತಿ ಹಂಚಿಕೊAಡಿದ್ದಾರೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯ ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.