ಕಫ್ರ್ಯೂ ತೆರವಿಗೆ ಸಂಸದ ಪ್ರತಾಪ್ ಸಿಂಹ ಒತ್ತಾಯ
ಮೈಸೂರು

ಕಫ್ರ್ಯೂ ತೆರವಿಗೆ ಸಂಸದ ಪ್ರತಾಪ್ ಸಿಂಹ ಒತ್ತಾಯ

January 20, 2022

ಮೈಸೂರು,ಜ.19(ಆರ್‍ಕೆ)- ರಾಜ್ಯದಲ್ಲಿ ವಿಧಿಸಿರುವ ನೈಟ್ ಕಫ್ರ್ಯೂ ಹಾಗೂ ವಾರಾಂತ್ಯ ಕಫ್ರ್ಯೂ ನಿರ್ಬಂಧ ಆದೇಶವನ್ನು ತೆರವುಗೊಳಿಸುವಂತೆ ಸಂಸದ ಪ್ರತಾಪ್‍ಸಿಂಹ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್, ಕಫ್ರ್ಯೂ ವಿಧಿಸುವುದಾದರೆ ವಾಕ್ಸಿನ್ ಯಾಕೆ ಬೇಕಿತ್ತು? ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಚಾರ ಹಾಗೂ ರ್ಯಾಲಿಗಳು ನಡೆಯುತ್ತಿರುವಾಗ ಕರ್ನಾಟಕ ರಾಜ್ಯದಲ್ಲಿ ಯಾಕೆ ಕಫ್ರ್ಯೂ? ಲಾಕ್‍ಡೌನ್? ಜನರನ್ನು ಮತ್ತೆ ಸಂಕಷ್ಟ ಕ್ಕೀಡು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಜನರನ್ನು ಆತಂಕದಲ್ಲಿಡುವುದನ್ನು ಮೊದಲು ಸರ್ಕಾರ ನಿಲ್ಲಿಸಲಿ, ಕಫ್ರ್ಯೂ, ಲಾಕ್ ಡೌನ್‍ನಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡು ಆರ್ಥಿಕ ಸಂಕಷ್ಟದಲ್ಲಿರುವ ಜನರ ಜೀವನ ಹಾಗೂ ಜೀವ ಎರಡೂ ಮುಖ್ಯವಾಗಿದೆ. ಜೀವ ಉಳಿಸಿಕೊಳ್ಳಲು ಲಸಿಕೆ ಕೊಟ್ಟಿದ್ದೇವೆ. ಈಗ ಜೀವನ ಉಳಿಯಬೇಕಾದರೇ ಕಫ್ರ್ಯೂ ಲಾಕ್‍ಡೌನ್ ತೆಗೆಯಬೇಕು. ಈ ಬಗ್ಗೆ ಮುಖ್ಯಮಂತ್ರಿ ಶುಕ್ರವಾರ ನಡೆಯುವ ಸಭೆಯಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಂಸದ ಪ್ರತಾಪ್‍ಸಿಂಹ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ: ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಗಣ ರಾಜ್ಯೋತ್ಸವದಲ್ಲಿ ಅವಕಾಶ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್‍ಸಿಂಹ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾಮಾಲೆ ಕಣ್ಣಿಗೆ ನೋಡುವುದೆಲ್ಲಾ ಹಳದಿ ಎಂಬಂತೆ ಸಿದ್ದ ರಾಮಯ್ಯನವರು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕ್ಯಾಂಟಿನ್‍ಗೆ ಹೆಸರಿಡುವಾಗ ಸಿದ್ದರಾಮಯ್ಯಗೆ ನೆನಪಾಗಿದ್ದು ಇಂದಿರಾಗಾಂಧಿ ಹೆಸರು ಮಾತ್ರ. ಅಧಿಕಾರ ದಲ್ಲಿರುವಾಗ ಅವರಿಗೆ ಮಹನೀಯರು ನೆನಪಾಗುವುದಿಲ್ಲ. ಅಧಿಕಾರ ಹೋದ ಮೇಲೆ ಮಹಾಪುರುಷರ ನೆನಪಾಗುತ್ತದೆ ಎಂದು ಛೇಡಿಸಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಾರಾಯಣಗುರುಗಳು, ಒನಕೆ ಓಬವ್ವ, ಮೈಸೂರು ಮಹಾರಾಜರು ನೆನಪಾಗಲಿಲ್ಲ, ಈಗ ಮಹನೀಯರಿಗೆ ಗೌರವ ಕೊಡುತ್ತಿ ದ್ದಾರೆ ಎಂದ ಅವರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಒಂದು ವಿಷಯದ ಸ್ತಬ್ಧಚಿತ್ರ ತಯಾರಿಸಬೇಕೆಂದು ಸಲಹೆ ಬಂದ ಹಿನ್ನೆಲೆಯಲ್ಲಿ ಅದಕ್ಕನುಗುಣವಾಗಿ ಗುಣಮಟ್ಟದ ಆಧಾರದ ಮೇಲೆ ಸ್ತಬ್ಧಚಿತ್ರ ಆಯ್ಕೆಯಾಗುತ್ತದೆ. ಇಲ್ಲಿ ಯಾರ ಅವ ಮಾನದ ಪ್ರಶ್ನೆ ಬರುವುದಿಲ್ಲ. ಸಿದ್ದರಾಮಯ್ಯ ಅವರು ಮೊದಲು ಗಣರಾಜ್ಯೋತ್ಸ ವದ ಸ್ತಬ್ಧಚಿತ್ರಗಳ ಮಾರ್ಗಸೂಚಿಗಳನ್ನು ಓದಿಕೊಳ್ಳಲಿ ಎಂದು ಪ್ರತಿಕ್ರಿಯೆ ನೀಡಿದರು.

Translate »