ಕೆ.ಆರ್. ಕ್ಷೇತ್ರದ ಫಲಾನುಭವಿಗಳಿಗೆ ಜಿ ಪ್ಲಸ್-3 ಮನೆ   ನಿರ್ಮಾಣಕ್ಕೆ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ಕೆ.ಆರ್. ಕ್ಷೇತ್ರದ ಫಲಾನುಭವಿಗಳಿಗೆ ಜಿ ಪ್ಲಸ್-3 ಮನೆ  ನಿರ್ಮಾಣಕ್ಕೆ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ

October 20, 2020

ಮೈಸೂರು,ಅ.19(ಎಂಟಿವೈ)- ಕೃಷ್ಣರಾಜ ಕ್ಷೇತ್ರದ ಫಲಾನು ಭವಿಗಳಿಗಾಗಿ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸಮಿತಿ ನೀಡಿರುವ ಸಲಹೆ ಯಂತೆ ಜಿ ಪ್ಲಸ್-3 ಮಾದರಿ ವಸತಿ ಸಮುಚ್ಛಯ ನಿರ್ಮಾ ಣಕ್ಕೆ ಶೀಘ್ರವೇ ಟೆಂಡರ್ ಕರೆಯುವಂತೆ  ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮ ವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತು ವಾರಿ ಸಮಿತಿ ಸಭೆಯಲ್ಲಿ ಕೆ.ಆರ್.ಕ್ಷೇತ್ರಕ್ಕೆ ಪಿಎಂಎವೈ ಯೋಜನೆಯಡಿ ಜಿ ಪ್ಲಸ್-3 ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿ ಅನುದಾನ ನೀಡಿದೆ. ಆದರೆ ಇದೀಗ ಜಿ ಪ್ಲಸ್-9 ಗುಂಪು ಮನೆಗಳ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಈ ಅಭಿಪ್ರಾಯವನ್ನು ಕೇಂದ್ರ ಸಮಿತಿಯೂ ಮಂಡಿಸಿದೆ. ಕೂಡಲೇ ಜಿ ಪ್ಲಸ್-3ರಂತೆ ಸಮುಚ್ಛಯ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ನಿರ್ದೇಶನ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಥಳೀಯ ಶಾಸಕರು ಅದನ್ನು ಬದಲಿಸಿಕೊಡಲು ಮುಖ್ಯಮಂತ್ರಿಗಳಿಂದ ಪತ್ರ ಬರೆಸಿದ್ದಾರೆಂದು ಹೇಳಿದ್ದಕ್ಕೆ, ಸ್ಥಳೀಯ ರಾಜಕಾರಣದಲ್ಲಿ ಇದು ಮಾಮೂಲು. ಸಿಎಂ ಇದನ್ನು ಪರಿಗಣಿಸಿ ಅಂದಿದ್ದಾರೆ ಹೊರತು, ಬದಲಿಸಿ ಅಂದಿಲ್ಲ. ಅದೇ ರೀತಿ ಸೀವೇಜ್ ಫಾರಂ ಘನತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ತಕ್ಷಣ ಟೆಂಡರ್ ಕರೆಯಬೇಕು. ಎಂಎಲ್‍ಎ ಅವರಿಗೋಸ್ಕರ ತಡೆಹಿಡಿಯಬಾರದು ಎಂದರು.

2017ರಲ್ಲಿ ಸೀವೇಜ್ ಫಾರಂ ಯೋಜನೆಗೆ ಅನುಮೋದನೆ ದೊರೆತು ಕೇಂದ್ರ 17 ಕೋಟಿ ರೂ. ಅನುದಾನ ನೀಡಿದೆ. ಸಾರ್ವಜನಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈಗ ಪಬ್ಲಿಕ್ ಹಿಯರಿಂಗ್ ಮಾಡಬೇಕು ಅಂದರೆ ಏನರ್ಥ? ಎಂದು ಪ್ರಶ್ನಿಸಿದರಲ್ಲದೆ, ಪಬ್ಲಿಕ್ ಹಿಯರಿಂಗ್ ಅಂದರೆ ಏನೆಂದು ಎಂಎಲ್‍ಎ ಹತ್ರ ಹೋಗಿ ಕೇಳಿ ನೋಡಿ. ತಲೆ ಒಳಗೆ ಇದನ್ನು ಇಟ್ಟುಕೊಂಡಿದ್ದರೆ ತೆÀಗೆಯಿರಿ ಎಂದು ಮಾರ್ಮಿಕವಾಗಿ ನುಡಿದರು.

ಬಡಾವಣೆಗಳನ್ನು ಪಾಲಿಕೆಗೆ ಸೇರಿಸಿ: ರಿಂಗ್ ರಸ್ತೆ ವ್ಯಾಪ್ತಿಗೆ ಬರುವ 9 ಗ್ರಾಪಂಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಶೀಘ್ರ ಪಾಲಿಕೆಯಲ್ಲಿ ಠರಾವು ಮಾಡಿ ಕಳುಹಿಸಬೇಕು. ಈ ಬಗ್ಗೆ ಡಿಸಿ ಅಗತ್ಯ ಕ್ರಮಜರುಗಿಸಬೇಕು ಎಂದಾಗ, ತಾಪಂ ಇಒ ಸಿ.ಆರ್.ಕೃಷ್ಣಕುಮಾರ್, ನಾವು ಎರಡು ರೀತಿಯ ಪ್ರಸ್ತಾವನೆಗಳನ್ನು ಕಳುಹಿಸಿದ್ದೇವೆ. 2011ರ ಜನಗಣತಿ ಪ್ರಕಾರ ಕೆಲವು ಗ್ರಾಪಂಗಳನ್ನು ಮೇಲ್ದಜೇಗೇರಿಸಲು ಸಾಧ್ಯವಿಲ್ಲವೆಂದು ಹೇಳಿದೆ. ಈಗ ಚಾಮುಂಡಿಬೆಟ್ಟ, ಆಲನಹಳ್ಳಿ, ಶ್ರೀರಾಂಪುರ, ಹಿನಕಲ್ ಗ್ರಾಪಂಗಳನ್ನು ಸೇರಿಸುವ ಮತ್ತೊಂದು ಪ್ರಸ್ತಾವನೆ ಕಳುಹಿಸಿರುವುದಕ್ಕೆ ಸಮ್ಮತಿ ನೀಡಿದ್ದಾರೆ ಎಂದರು. ಇದಕ್ಕೆ ಸಮ್ಮತಿಸಿದ ಸಂಸದರು, ತಕ್ಷಣವೇ ಶಾಸಕರು, ಸಂಸದರು, ಪಾಲಿಕೆ ಸದಸ್ಯರ ಸಭೆ ಕರೆದು ಪಾಲಿಕೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಜುಬಿಲಂಟ್ ಕಾರ್ಖಾನೆ ನೀಡಿದ ಆಹಾರ ಕಿಟ್ ಏನಾಯ್ತು?: ನಂಜನಗೂಡು ತಾಲೂಕಿ ನಲ್ಲಿ ಗ್ರಾಪಂಗಳು ಎಷ್ಟು ಸ್ವಂತ ಕಟ್ಟಡ ಹೊಂದಿವೆ ಎಂದು ಸಂಸದರು ನಂಜನಗೂಡು ತಾಪಂ ಇಒ ಶಿವಕುಮಾರಯ್ಯ ಅವರಿಂದ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ 17ಕ್ಕೆ ಸ್ವಂತ ಕಟ್ಟಡವಿದ್ದು, ಉಳಿದ ಗ್ರಾ.ಪಂಗೆ  ಕಟ್ಟಡ ನಿರ್ಮಿಸಲು ಜಾಗದ ಸಮಸ್ಯೆ ಇದೆ ಎಂದರು. ಇದಕ್ಕೆ ಸಂಸದ ಪ್ರತಾಹ ಸಿಂಹ ಆಕ್ಷೇಪಿಸಿ ಲಡಾಯಿ ಮಾಡುವುದರಲ್ಲಿ ನಂಜನಗೂಡಿನವರು ಮುಂದೆ ಇರ್ತೀರಾ? ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಗ್ರಾಪಂಗಳಿಗೆ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳದೇ ಸುಮ್ಮನಿದ್ದೀರಾ? ಎಂದು ಅಸಮಾದಾನ ವ್ಯಕ್ತಪಡಿಸಿದರು. ಜುಬಿಲಂಟ್ ಕಾರ್ಖಾನೆಯವರು 50 ಸಾವಿರ ದಿನಸಿ ಕಿಟ್ ನೀಡಿದ್ದರು. ಇದನ್ನು ಯಾರಿಂದ ಖರೀದಿ ಮಾಡಿದ್ದಾರೆ. ಎಷ್ಟು ಹಣ ನೀಡಿದ್ದಾರೆ. ಯಾರಿಗೆ ಕೊಟ್ಟರು, ಹೇಗೆ ಕೊಟ್ಟರು ಅನ್ನೋದು ಗೊತ್ತಿಲ್ಲ. ಕಿಟ್ ಖರೀದಿಸಲು ಹಣ ನೀಡಿರುವ ಕಾರ್ಖಾನೆಯವರಿಗೂ ಮಾಹಿತಿ ನೀಡಿಲ್ಲ. ಕೂಡಲೇ ಆ ಕಿಟ್ ಏನಾಯಿತು ಎಂದು ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜಿ.ಪಂ ಇಸಿಓ ಡಿ.ಭಾರತಿ ಅವರಿಗೆ ಸೂಚನೆ ನೀಡಿದರು.

ಭಾರತ ಆಹಾರ ಉಗ್ರಾಣ ನಿಗಮದಿಂದ ನೀಡುವ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಸಿಕ್ಕಿಬಿದ್ದವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ತಪ್ಪು ಮಾಡಿದ್ದವರನ್ನು ರಕ್ಷಿಸಬಾರದು. ಅಂತಹವರನ್ನು ಬ್ಲಾಕ್‍ಲಿಸ್ಟ್‍ಗೆ ಹಾಕಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶಿವಣ್ಣ ಅವರಿಗೆ ಎಚ್ಚರಿಸಿದರು.

ಅಮೃತ್ ಯೋಜನೆ ಮುಗಿಸಿ: ದಸರಾ ಮಹೋತ್ಸವದ ಆರಂಭಕ್ಕೂ ಮುನ್ನ ಅಮೃತ್ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡುತ್ತೇವೆಂದು ಹೇಳಿದ್ದೆವು. ಈಗ ಅದು ಸಾಧ್ಯವಾಗಲಿಲ್ಲ. ಕೆಲಸ ಮಾಡಲು ನಿಮಗೆ ಏನಾಗಿದೆ ಎಂದು ನೀರು ಸರಬರಾಜು ಮಂಡಳಿ ಅಧಿಕಾರಿಗಳನ್ನು ಸಂಸದರು ತರಾಟೆಗೆ ತೆಗೆದುಕೊಂಡರು. ಮೇಳಾಪುರ, ಹೊಂಗಳ್ಳಿ ಯೋಜನೆ ಪಂಪ್ ಮೋಟಾರ್ ಟ್ರಯಲ್ ನಡೆಯುತ್ತಿದೆ. ಕೆಲವು ಕಡೆ ಸಣ್ಣಪುಟ್ಟ ಕೆಲಸ ನಡೆಯುತ್ತಿದೆ. ನಾಲ್ಕು ಟಿಸಿ ಹಾಕಬೇಕಿದೆ. ಈಗ ಟ್ರಯಲ್ ನೋಡಿದರೆ ನಗರ ಪ್ರದೇಶಕ್ಕೆ ನೀರು ಪೂರೈಸÀಲು ಸಮಸ್ಯೆಯಾಗಲಿದೆ ಎಂದು ಎಇಇ ಜಯಣ್ಣ ಪ್ರತಿಕ್ರಿಯಿಸಿ ದಾಗ, ಈ ವೇಳೆ ಸಭೆಯಲ್ಲಿದ್ದ ಸೆಸ್ಕಾಂ ಅಧೀಕ್ಷಕ ಅಭಿಯಂತರ ಮುನಿಗೋಪಾಲರಾಜು, ನಮ್ಮಿಂದ ಎಲ್ಲಾ ಕೆಲಸ ಮುಗಿದಿದೆ. ನಾಳೆಯೇ ಪವರ್ ಕೊಡಲು ರೆಡಿ ಇದ್ದೇವೆ. ಯಾವ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು. ಇದಕ್ಕೆ ಸ್ಪಂದಿಸಿದ ಸಂಸದರು, ನೀರು ಸರಬರಾಜು ಮಂಡಳಿ ಅಧಿಕಾರಿಗಳು ತ್ವರಿತವಾಗಿ ಕೆಲಸ ನಿರ್ವ ಹಿಸದೇ ಹಳೆ ಕಥೆ, ಸಬೂಬು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ಸಿದ್ದರಾಮಯ್ಯರ ಕಾಲದ ಮಳೆ ಹಾನಿ ಸಂತ್ರಸ್ತರಿಗೆ ಯಡಿಯೂರಪ್ಪರ ನೆರವು  ಕೊಡಗಿನ ನೆರೆ ಸಂತ್ರಸ್ತರಿಗೆ ಮನೆ ಒದಗಿಸಿದ ವಿಚಾರ ಪ್ರಸ್ತಾಪ

ಮೈಸೂರು, ಅ.19(ಎಂಟಿವೈ)- ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಕೊಡಗು ಜಿಲ್ಲೆಯಲ್ಲಿ ಉಂಟಾಗಿದ್ದ ನೆರೆ ಹಾವಳಿ ಹಾಗೂ ಭೂ ಕುಸಿತದಿಂದ ಮನೆ ಕಳೆದುಕೊಂಡಿದ್ದವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿz್ದÁಗ, 2018ರಲ್ಲಿ ಕೊಡಗು ಜಿ¯್ಲÉಯಲ್ಲಿ ಸುರಿದ ಭಾರಿ ಮಳೆಗೆ 20 ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. 3 ಸಾವಿರಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಕೊಚ್ಚಿಕೊಂಡು ಹೋಗಿತ್ತು. ಆದರೆ, ಅವರಿಗೆ ಸಿದ್ದರಾಮಯ್ಯ ಸ್ಪಂದಿಸಲಿಲ್ಲ. ಅವರಿಗೆ ಮನೆ ಕಟ್ಟಿಕೊಡುವ ಕೆಲಸವನ್ನು ಈಗ ಯಡಿಯೂರಪ್ಪ ಅವರು ಮಾಡಿz್ದÁರೆ. ಈಗ ಆರೋಪ ಮಾಡುವವರು, ತಾವು ಅಧಿಕಾರದಲ್ಲಿz್ದÁಗ ಏನು ಮಾಡಿದರು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ಭರ್ತಿಯಾಗಿ, ರೈತರ ಮೊಗದಲ್ಲಿ ಸಂತಸ ಮೂಡಿದೆ. ಪ್ರವಾಹ ಬಂದಾಗ ತೊಂದರೆ, ಕಷ್ಟನಷ್ಟಗಳು ಉಂಟಾಗುವುದು ಸಹಜ. ಪ್ರವಾಹ ಬಂದಾಗ ಭೂಮಿಗೆ ನೀರುಣಿಸುವು ದರಿಂದ ಹಸಿರು ಬರುತ್ತದೆ. ಹಾಗಾಗಿ ಪ್ರವಾಹದಿಂದ ತಾತ್ಕಾಲಿಕವಾಗಿ ಹಿನ್ನಡೆ ಆದರೂ ಮುಂದಿನ ದಿನಗಳಲ್ಲಿ ಒಳಿತಾಗುತ್ತದೆ. ಈ ಸಂಬಂಧ ಆರೋಪ ಮಾಡುವವರು ವಾಸ್ತವ ಅರ್ಥ ಮಾಡಿಕೊಳ್ಳಬೇಕು ಎಂದರು. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಸರಿಯಾಗಿ ಮಳೆಯಾಗದೇ ನೀರಿಗೆ ಹಾಹಾಕಾರ ನಿರ್ಮಾಣವಾಗಿತ್ತು. ಆದರೀಗ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ನಿರೋ ನೀರು, ಹಸಿರೋ ಹಸಿರು ಎಂದು ಬಣ್ಣಿಸಿದರು.

Translate »