ಮೈಮುಲ್ ನೇಮಕ ಪ್ರಕ್ರಿಯೆ ಹೊಸದಾಗಿ ನಡೆಯಲಿ
ಮೈಸೂರು

ಮೈಮುಲ್ ನೇಮಕ ಪ್ರಕ್ರಿಯೆ ಹೊಸದಾಗಿ ನಡೆಯಲಿ

May 16, 2020

ಮೈಸೂರು, ಮೇ 15(ಆರ್‍ಕೆಬಿ)- ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಹುದ್ದೆಗಳ ಭರ್ತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ನಡೆಸಬೇಕು ಎಂದು ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಆಗ್ರಹಿಸಿದ್ದಾರೆ.

ಮೈಸೂರಿನ ಸೀತಾವಿಲಾಸ ರಸ್ತೆಯಲ್ಲಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ನೇಮಕ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಹಣ ಪಡೆಯಲಾಗಿದೆ. ಹಾಗಾಗಿ ನೇಮಕ ಪ್ರಕ್ರಿಯೆಯ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದರು. ಈ ಸಂಬಂಧದ ಆಡಿಯೋ ಸಂಭಾಷಣೆಗಳಿ ರುವ 3 ಆಡಿಯೋ ಕ್ಲಿಪ್ಪಿಂಗ್ಸ್ ಬಿಡುಗಡೆ ಮಾಡಿದರು.

ಮೈಮುಲ್ ನಿರ್ದೇಶಕರೊಬ್ಬರು ತಮ್ಮ ಸಂಬಂಧಿ ಗಳಿಗೆ ಉದ್ಯೋಗ ಕೊಡಿಸಲು ಯತ್ನಿಸಿದ್ದಾರೆ. ಅಲ್ಲದೆ ನೇಮಕಕ್ಕಾಗಿ ಅಭ್ಯರ್ಥಿಗಳಿಗೆ ಭಾರೀ ಮೊತ್ತದ ಹಣಕ್ಕೆ ಒತ್ತಾಯ ಮಾಡಿರುವುದು ಆಡಿಯೋ ಮೂಲಕ ಬಹಿರಂಗಗೊಂಡಿದೆ ಎಂದು ಆರೋಪಿಸಿದರು. ನಿರ್ದೇ ಶಕರೇ ನೇರವಾಗಿ ಆಯ್ಕೆ ಆಗಿರುವ ಅಭ್ಯರ್ಥಿ, ಆಯ್ಕೆ ಆಗಿಲ್ಲದಿರುವ ಅಭ್ಯರ್ಥಿ ಜತೆ ಸಂಭಾಷಣೆ ನಡೆಸಿದ್ದಾರೆ. ಎಷ್ಟು ಮುಂಗಡ ಹಣ ನೀಡಲಾಗಿದೆ ಎಂಬುದೂ ಆಡಿಯೋದಲ್ಲಿ ದಾಖಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ತರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು.

ಲಾಕ್‍ಡೌನ್ ಆಗಿದ್ದು, ಜಿಲ್ಲೆಯಿಂದ ಜಿಲ್ಲೆಗೆ ತೆರಳ ಲಾಗದ ಸ್ಥಿತಿ ಇರುವಾಗ, ಕಚೇರಿಗಳೇ ಸರಿಯಾಗಿ ತೆರೆದಿಲ್ಲದಿರುವಾಗ ತರಾತುರಿಯಲ್ಲಿ ನೇಮಕ ಸಂದ ರ್ಶನ ನಡೆಸುತ್ತಿರುವುದೇಕೆ? ಎಂದು ಪ್ರಶ್ನಿಸಿ ದರು. ಮೇ 18ರಂದು ಸಂದರ್ಶನ ನಡೆಸಲು ತಯಾರಿ ನಡೆದಿದೆ. ಸಂದರ್ಶನ ನಡೆಸಿದ್ದೇ ಆದರೆ ಜೆಡಿಎಸ್ ಶಾಸಕರೆಲ್ಲರೂ ಮೇ 19ರಂದು ಭಾರೀ ಪ್ರತಿಭಟನೆ ಹಮ್ಮಿಕೊಳ್ಳುವರು ಎಂದು ಎಚ್ಚರಿಸಿದರು. ಟಿ.ನರಸೀ ಪುರ ಶಾಸಕ ಅಶ್ವಿನ್‍ಕುಮಾರ್, ಮೈಮುಲ್ ನಿರ್ದೇ ಶಕ ಎ.ಟಿ.ಸೋಮಶೇಖರ್, ಪಾಲಿಕೆ ಸದಸ್ಯೆ ಪ್ರೇಮಾ, ಜಿಪಂ ಮಾಜಿ ಸದಸ್ಯ ದ್ವಾರಕೀಶ್, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜೆಡಿಎಸ್ ವಕ್ತಾರ ರವಿಚಂದ್ರ ಗೌಡ, ಜೆಡಿಎಸ್ ಯುವಘಟಕ ಜಿಲ್ಲಾಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ರಾಮು, ಪ್ರಶಾಂತ್ ಇನ್ನಿತರರಿದ್ದರು.

 

 

 

Translate »