ಇಂದಿನಿಂದ ಮೈಸೂರು-ಬೆಂಗಳೂರು ರೈಲು ಸಂಚಾರ
ಮೈಸೂರು

ಇಂದಿನಿಂದ ಮೈಸೂರು-ಬೆಂಗಳೂರು ರೈಲು ಸಂಚಾರ

May 22, 2020

ಮೈಸೂರು, ಮೇ 21- ಕೊರೊನಾ ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ 2 ತಿಂಗಳ ನಂತರ ನಾಳೆ(ಶುಕ್ರವಾರ) ರಾಜ್ಯದಲ್ಲಿ ಪುನಾರಂಭಗೊಳ್ಳಲಿದ್ದು, ಬೆಂಗಳೂರಿನಿಂದ ಮೈಸೂರು ಮತ್ತು ಬೆಂಗಳೂರಿನಿಂದ ಬೆಳಗಾವಿಗೆ ಎರಡು ವಿಶೇಷ ರೈಲುಗಳು ಸಂಚರಿಸಲಿವೆ.

ಈ ಸಂಬಂಧ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರೂ ಆದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ಶೆಟ್ಟಿ, ಪತ್ರಿಕಾ ಪ್ರಕಟಣೆ ನೀಡಿದ್ದು, ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಮಾರ್ಚ್ 22ರಿಂದ ರೈಲು ಸಂಚಾರ ಸ್ಥಗಿತಗೊಳಿಸ ಲಾಗಿತ್ತು. ರಾಜ್ಯದೊಳಗೆ ರೈಲು ಸಂಚರಿಸಲು ಅವಕಾಶ ನೀಡು ವಂತೆ ಕರ್ನಾಟಕ ಮುಖ್ಯಮಂತ್ರಿಗಳು ಸಲ್ಲಿಸಿದ ಪ್ರಸ್ತಾವನೆ ಯನ್ನು ರೈಲ್ವೆ ಸಚಿವಾಲಯ ಪರಿಗಣಿಸಿ ಶುಕ್ರವಾರದಿಂದ 2 ಮಾರ್ಗಗಳಲ್ಲಿ ರೈಲು ಸಂಚರಿಸಲು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಿಂದ 06503 ಸಂಖ್ಯೆಯ ಪ್ಯಾಸೆಂಜರ್ ರೈಲು ಬೆಳಿಗ್ಗೆ 9.20ಕ್ಕೆ ಹೊರಡಲಿದ್ದು, 9.43ಕ್ಕೆ ಕೆಂಗೇರಿ, 10.15ಕ್ಕೆ ರಾಮನಗರ, 10.48ಕ್ಕೆ ಮದ್ದೂರು, 11.08ಕ್ಕೆ ಮಂಡ್ಯ, 11.44ಕ್ಕೆ ಪಾಂಡವಪುರ, 11.59ಕ್ಕೆ ನಾಗನಹಳ್ಳಿ ನಂತರ ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪಲಿದೆ. ಇದೇ ರೈಲು ಮೈಸೂರಿನಿಂದ ಮಧ್ಯಾಹ್ನ 1.45ಕ್ಕೆ ಹೊರಟು 1.54ಕ್ಕೆ ನಾಗನಹಳ್ಳಿ, 2.10ಕ್ಕೆ ಪಾಂಡವಪುರ, 2.40ಕ್ಕೆ ಮಂಡ್ಯ, 3.02ಕ್ಕೆ ಮದ್ದೂರು, 3.34ಕ್ಕೆ ರಾಮನಗರ,

4.10ಕ್ಕೆ ಕೆಂಗೇರಿ ನಂತರ ಸಂಜೆ 5 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಬೆಳಗಾವಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲು ಸಂಚರಿಸ ಲಿದ್ದು, 02059 ಸಂಖ್ಯೆಯ ಈ ರೈಲು ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ಹೊರಟು 8.09ಕ್ಕೆ ಯಶವಂತಪುರ, 8.59ಕ್ಕೆ ತುಮಕೂರು, 10.25ಕ್ಕೆ ಅರಸೀಕೆರೆ, 11.13ಕ್ಕೆ ಬಿರೂರು, 12.09ಕ್ಕೆ ಚಿಕ್ಕಜಾಜೂರು, 12.48ಕ್ಕೆ ದಾವಣಗೆರೆ, ಮಧ್ಯಾಹ್ನ 1.03ಕ್ಕೆ ಹರಿಹರ, 1.25ಕ್ಕೆ ರಾಣೆಬೆನ್ನೂರು, 1.51ಕ್ಕೆ ಹಾವೇರಿ, 3.25ಕ್ಕೆ ಹುಬ್ಬಳ್ಳಿ, 3.45ಕ್ಕೆ ಧಾರವಾಡ, ಸಂಜೆ 6.30ಕ್ಕೆ ಬೆಳಗಾವಿ ತಲುಪಲಿದೆ.

ಇದೇ ರೈಲು(ಸಂಖ್ಯೆ 02060) ಬೆಳಗಾವಿಯಿಂದ ಬೆಂಗಳೂರಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚರಿಸಲಿದ್ದು, ಬೆಳಿಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಟು 10.15ಕ್ಕೆ ಧಾರವಾಡ, 10.37ಕ್ಕೆ ಹುಬ್ಬಳ್ಳಿ, 11.40ಕ್ಕೆ ರಾಣೆಬೆನ್ನೂರು, 12.27ಕ್ಕೆ ಹರಿಹರ, 12.43ಕ್ಕೆ ದಾವಣಗೆರೆ, ಮಧ್ಯಾಹ್ನ 1.35ಕ್ಕೆ ಚಿಕ್ಕಹೆಜ್ಜೂರು, 2.35ಕ್ಕೆ ಬಿರೂರು, 3.10ಕ್ಕೆ ಅರಸೀಕೆರೆ, ಸಂಜೆ 4.35ಕ್ಕೆ ತುಮಕೂರು, 5.40ಕ್ಕೆ ಯಶವಂತಪುರ, 6.30ಕ್ಕೆ ಬೆಂಗಳೂರು ತಲುಪಲಿದೆ ಎಂದು ತಿಳಿಸಿದ್ದಾರೆ. ಭಾನುವಾರ ರಾಜ್ಯ ಸರ್ಕಾರ ಸಂರ್ಪೂಣ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಅಂದು ರೈಲು ಸಂಚಾರ ಇರುವುದಿಲ್ಲ. ಈ ರೈಲುಗಳಲ್ಲಿ ಪ್ರಯಾಣಿಸಲು Iಖಅಖಿಅ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ರೈಲು ನಿಲ್ದಾಣದಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಟಿಕೆಟ್ ಬುಕ್ಕಿಂಗ್ ಖಾತರಿಯಾಗಿರುವ ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿದೆ ಎಂದು ತಿಳಿಸಿರುವ ಅವರು 14 ಬೋಗಿಗಳುಳ್ಳ ಈ ರೈಲುಗಳಲ್ಲಿ ಬೋಗಿಯೊಂದಕ್ಕೆ 106 ಮಂದಿ ಸೇರಿದಂತೆ ಒಟ್ಟು 1,484 ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಅವರು ತಿಳಿಸಿದ್ದಾರೆ.

ರೈಲು ಬೋಗಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಸನಗಳನ್ನು ಕಾಯ್ದಿರಿಸಲಾಗುತ್ತದೆ. ಬೋಗಿಗಳಿಗೆ ಸ್ಯಾನಿಟೈಸ್ ಮಾಡಲಾಗುವುದಲ್ಲದೆ, ಭದ್ರತಾ ಸಿಬ್ಬಂದಿಯು ರೈಲಿನಲ್ಲಿ ರುತ್ತಾರೆ. ಪ್ರಯಾಣಿಕರು ರೈಲು ಹೊರಡುವ 90 ನಿಮಿಷಗಳ ಮುನ್ನ ನಿಲ್ದಾಣದಲ್ಲಿ ಇರಬೇಕಾಗುತ್ತದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿದ ನಂತರ ಪ್ರಯಾ ಣಕ್ಕೆ ಅನುಮತಿ ನೀಡಲಾಗುತ್ತದೆ. ಶುಕ್ರವಾರದಿಂದ ರೈಲು ಸಂಚಾರ ಪುನಾರಂಭವಾಗುವ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ವಿಭಾಗೀಯ ರೈಲ್ವೆ ಮ್ಯಾನೇಜರ್(ಡಿಆರ್‍ಎಂ) ಶ್ರೀಮತಿ ಅಪರ್ಣಾ ಗಾರ್ಗ್ ಹಾಗೂ ಹಿರಿಯ ಅಧಿಕಾರಿಗಳು ರೈಲ್ವೆ ನಿಲ್ದಾಣದಲ್ಲಿ ಏರ್ಪಡಿಸಿರುವ ವ್ಯವಸ್ಥೆಗಳನ್ನು ಪರಿಶೀಲಿಸಿ, ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Translate »