ಮೈಸೂರು ಜಿಲ್ಲೆ; ಸೋಂಕು ಗಣನೀಯ ಇಳಿಕೆ
ಮೈಸೂರು

ಮೈಸೂರು ಜಿಲ್ಲೆ; ಸೋಂಕು ಗಣನೀಯ ಇಳಿಕೆ

June 6, 2021

ಮೈಸೂರು, ಜೂ.5(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದರೂ ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಜಿಲ್ಲೆಯಲ್ಲಿ ಶನಿವಾರ 5,800ಕ್ಕೂ ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 1,155 ಮಂದಿಗೆ ಸೋಂಕು ತಗುಲಿರು ವುದು ದೃಢಪಟ್ಟಿದೆ. ಪಾಸಿಟಿವಿಟಿ ಪ್ರಮಾಣ ಶೇ.19ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕು ಬಾಧಿತರ ಸಂಖ್ಯೆ 1,49,648ಕ್ಕೆ ತಲುಪಿದೆ. 1,633 ಸೋಂಕಿ ತರು ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ ಒಟ್ಟು 1,33,348 ಮಂದಿ ಗುಣಮುಖರಾಗಿದ್ದಾರೆ.
ಸೋಂಕು ತಗ್ಗಿದ್ದರೂ ಸಾವಿನ ಪ್ರಮಾಣ ಕಡಿಮೆಯಾಗಿಲ್ಲ. 11 ಮಹಿಳೆಯರು ಸೇರಿ ದಂತೆ 22 ಮಂದಿ ಸೋಂಕಿತರು ಮೃತ ಪಟ್ಟಿರುವುದಾಗಿ ಶನಿ ವಾರದ ಬುಲೆಟಿನ್ ತಿಳಿಸಿದೆ. ಇದರೊಂ ದಿಗೆ ಜಿಲ್ಲೆಯಲ್ಲಿನ ಒಟ್ಟು ಸಾವಿನ ಸಂಖ್ಯೆ 1,703ಕ್ಕೆ ಹೆಚ್ಚಿದೆ. ಇನ್ನು ಸಕ್ರಿಯ ಪ್ರಕರಣ ಗಳ ಸಂಖ್ಯೆ 14,597ಕ್ಕೆ ಇಳಿಕೆಯಾಗಿದ್ದು, ಇವರಲ್ಲಿ 9,934 ಮಂದಿ ಹೋಂ ಐಸೊ ಲೇಷನ್‍ನಲ್ಲಿ ಇದ್ದಾರೆ. ಉಳಿದವರು ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಮತ್ತಷ್ಟು ಇಳಿಕೆ: ಬಾಗಲ ಕೋಟೆ 175, ಬಳ್ಳಾರಿ 345, ಬೆಳಗಾವಿ 847, ಬೆಂಗಳೂರು ಗ್ರಾಮಾಂತರ 326, ಬೆಂಗಳೂರು ನಗರ 2,686, ಬೀದರ್ 23, ಚಾಮರಾಜನಗರ 340, ಚಿಕ್ಕಬಳ್ಳಾಪುರ 432, ಚಿಕ್ಕಮಗಳೂರು 378, ಚಿತ್ರದುರ್ಗ 449, ದಕ್ಷಿಣಕನ್ನಡ 714, ದಾವಣಗೆರೆ 529, ಧಾರವಾಡ 247, ಗದಗ 152, ಹಾಸನ 568, ಹಾವೇರಿ 88, ಕಲಬುರಗಿ 69, ಕೊಡಗು 255, ಕೋಲಾರ 424, ಕೊಪ್ಪಳ 279, ಮಂಡ್ಯ 562, ಮೈಸೂರು 1,155, ರಾಯಚೂರು 110, ರಾಮನಗರ 57, ಶಿವ ಮೊಗ್ಗ 710, ತುಮಕೂರು 695, ಉಡುಪಿ 552, ಉತ್ತರಕನ್ನಡ 325, ವಿಜಯ ಪುರ 254 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 54 ಸೇರಿದಂತೆ ರಾಜ್ಯದಲ್ಲಿ ಶನಿವಾರ 13,800 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 26,83,314ಕ್ಕೆ ಏರಿಕೆ ಯಾಗಿದೆ. ಇಂದು 25,346 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 23,83, 758 ಮಂದಿ ಗುಣಮುಖರಾ ದಂತಾಗಿದೆ. ಮತ್ತೆ 365 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 31, 260ಕ್ಕೆ ಹೆಚ್ಚಿದೆ. ರಾಜ್ಯದಲ್ಲಿನ್ನು 2,68,275 ಸಕ್ರಿಯ ಪ್ರಕರಣಗಳಿವೆ.

Translate »