ಮೈಸೂರು ಜಿಲ್ಲೆ ಗ್ರಾಪಂ ಚುನಾವಣೆ ಮೊದಲ ಹಂತ  123 ಮಂದಿ ಅವಿರೋಧ ಆಯ್ಕೆ
ಮೈಸೂರು

ಮೈಸೂರು ಜಿಲ್ಲೆ ಗ್ರಾಪಂ ಚುನಾವಣೆ ಮೊದಲ ಹಂತ 123 ಮಂದಿ ಅವಿರೋಧ ಆಯ್ಕೆ

December 16, 2020

ಮೈಸೂರು, ಡಿ.15-ಮೈಸೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಯಲ್ಲಿ 123 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೊದಲ ಹಂತದಲ್ಲಿ ಜಿಲ್ಲೆಯ 5 ತಾಲೂಕುಗಳ 148 ಗ್ರಾಪಂಗಳಿಗೆ ಚುನಾ ವಣೆ ನಡೆಯಲಿದೆ. ಒಟ್ಟು 2,303 ಸದಸ್ಯ ಸ್ಥಾನಗಳಿಗೆ 6,165 ಉಮೇದುವಾರಿಕೆ ಸಲ್ಲಿಕೆಯಾಗಿವೆ. ಅಂತಿಮವಾಗಿ 2,174 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಹುಣಸೂರು ತಾಲೂಕಿನಲ್ಲಿ 40 ಮಂದಿ ಅವಿರೋಧ ಆಯ್ಕೆಯಾಗಿದ್ದು, 555 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಕೆ.ಆರ್.ನಗರದಲ್ಲಿ 31 ಪ್ರತಿನಿಧಿಗಳು ಅವಿರೋಧ ಆಯ್ಕೆಯಾದರೆ, 527 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಪಿರಿಯಾಪಟ್ಟಣದಲ್ಲಿ 27 ಮಂದಿ ಅವಿರೋಧ ಆಯ್ಕೆಯಾದರೆ 521 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹೆಚ್.ಡಿ.ಕೋಟೆಯಲ್ಲಿ 20 ಮಂದಿ ಅವಿರೋಧ ಆಯ್ಕೆ ಯಾದರೆ, 366 ಸ್ಥಾನಗಳಿಗೆ ಮತದಾನ ನಡೆಯಲಿದೆ. ಸರಗೂರಿನಲ್ಲಿ 5 ಮಂದಿ ಅವಿರೋಧ ಆಯ್ಕೆಯಾಗಿದ್ದು, 185 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ನಾಮಪತ್ರವಿಲ್ಲ: ಕೆ.ಆರ್.ನಗರ ತಾಲೂಕಿನಲ್ಲಿ 4, ಪಿರಿಯಾಪಟ್ಟಣ ಮತ್ತು ಹೆಚ್.ಡಿ. ಕೋಟೆ ತಾಲೂಕಿನಲ್ಲಿ ತಲಾ 1 ಸ್ಥಾನಕ್ಕೆ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ.

2ನೇ ಹಂತ: ಜಿಲ್ಲೆಯ 104 ಗ್ರಾಪಂಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಂಗಳವಾರ ಮೈಸೂರು ತಾಲೂಕಿನಲ್ಲಿ 413, ನಂಜನಗೂಡಿನಲ್ಲಿ 515, ತಿ.ನರಸೀಪುರ ದಲ್ಲಿ 631 ಮಂದಿ ಸೇರಿದಂತೆ ಒಟ್ಟು 1559 ಉಮೇದುವಾರಿಕೆ ಸಲ್ಲಿಕೆಯಾಗಿವೆ. ಇದರಲ್ಲಿ 839 ಸಾಮಾನ್ಯ ಹಾಗೂ 720 ಮಹಿಳಾ ಮೀಸಲು ಅಭ್ಯರ್ಥಿಗಳ ನಾಮಪತ್ರಗಳಾಗಿವೆ.

 

 

 

 

Translate »