ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಕಿರಾತಕರಿಗೆ ಮೈಸೂರು ಅಚ್ಚುಮೆಚ್ಚಿನ ಸುಲಿಗೆ ತಾಣ
ಮೈಸೂರು

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಕಿರಾತಕರಿಗೆ ಮೈಸೂರು ಅಚ್ಚುಮೆಚ್ಚಿನ ಸುಲಿಗೆ ತಾಣ

August 30, 2021

ಕಾಮುಕ ಭೂಪತಿ ೮ ತಿಂಗಳ ಹಿಂದೆ ನಜರ್‌ಬಾದ್ ಪೊಲೀಸರಿಂದ ಸೆರೆಯಾಗಿದ್ದ
ಸರ್ಕಾರಿ ಸಂಸ್ಥೆಗಳಲ್ಲಿ ಬೆಳೆದಿರುವ ಶ್ರೀಗಂಧ ಮರ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ
ಮೈಸೂರಿನ ನಿರ್ಜನ ಪ್ರದೇಶಗಳಲ್ಲಿ ಯುವ ಪ್ರೇಮಿಗಳೇ ಇವರ ಟಾರ್ಗೆಟ್
ಸುಮಾರು ೩ ವರ್ಷದಿಂದ ಮೈಸೂರಿಗೆ ಬಂದು ದುಷ್ಕೃತ್ಯ ಎಸಗುತ್ತಿದ್ದ ತಂಡ

ಇದೇ ವರ್ಷ ಜನವರಿ ೮ರಂದು ಮೈಸೂರಿನ ನಜರ್‌ಬಾದ್ ಠಾಣೆ ಪೊಲೀಸರಿಂದ ಬಂಧಿತರಾದ ಶ್ರೀಗಂಧ ಮರ ಚೋರರು ಇವರಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿ ತಾಳವಾಡಿಯ ಭೂಪತಿ ಅಲಿಯಾಸ್ ಕೀರಿ ಇದ್ದಾನೆ.

ಮೈಸೂರು, ಆ.೨೯-ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕ ರಣದಲ್ಲಿ ಬಂಧಿತರಾಗಿ ರುವ ಕಾಮುಕರಿಗೆ ಮೈಸೂರು ಅಚ್ಚುಮೆಚ್ಚಿನ ಸುಲಿಗೆ ತಾಣವಾಗಿತ್ತು. ಅಲ್ಲದೇ ಗಂಧದ ಮರ ಕಳವು ಸೇರಿದಂತೆ ಹಲವಾರು ಅಪರಾಧ ಕೃತ್ಯಗಳನ್ನು ಇವರು ಮೈಸೂರಿಗೆ ಬಂದು ಎಸಗುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬಂಧಿತರಲ್ಲಿ ಒಬ್ಬನಾದ ತಾಳವಾಡಿಯ ಸುಸಯ್ಯಪುರಂ ನಿವಾಸಿ ಭೂಪತಿ ಅಲಿ ಯಾಸ್ ಕೀರಿ ಎಂಟು ತಿಂಗಳ ಹಿಂದೆ ಜನವರಿ ೮ರಂದು ಗಂಧದ ಮರ ಕಳವು ಪ್ರಕರಣದಲ್ಲಿ ನಜರ್‌ಬಾದ್ ಪೊಲೀಸ ರಿಂದ ಬಂಧನಕ್ಕೊಳಗಾಗಿದ್ದ. ವಿಶೇಷ ವೆಂದರೆ ಅಂದು ಭೂಪತಿ ಸೇರಿದಂತೆ ತಮಿಳುನಾಡಿನ ನಾಲ್ವರನ್ನು ಲಲಿತ ಮಹಲ್ ಹೆಲಿಪ್ಯಾಡ್ ರಸ್ತೆಯಲ್ಲೇ ಪೊಲೀಸರು ಬಂಧಿಸಿದ್ದರು. ಈ ಖದೀಮರ ತಂಡವು ತಾಳವಾಡಿಯ ರಾಯನ್ ಎಂಬಾತನ ನೇತೃತ್ವದಲ್ಲಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಾ, ಸರ್ಕಾರಿ ಕಚೇರಿಗಳ ಆವ ರಣದಲ್ಲಿ ಬೆಳೆದಿರುವ ಗಂಧದ ಮರಗಳನ್ನು ಬ್ಯಾಟರಿ ಚಾಲಿತ ಗರಗಸದಿಂದ ಕೆಲವೇ ನಿಮಿಷಗಳಲ್ಲಿ ಕತ್ತರಿಸಿ ತಮಿಳುನಾಡಿಗೆ ಕೊಂಡೊಯ್ಯುತ್ತಿದ್ದರು. ಅಂದು ಭೂಪತಿ ಅಲಿಯಾಸ್ ಕೀರಿ ಜೊತೆ ತಾಳವಾಡಿಯವರೇ ಆದ ಪ್ರವೀಣ್ ಕುಮಾರ್ ಅಲಿಯಾಸ್ ತಂಬಿ, ಫ್ರಾನ್ಸಿಸ್ ಅಲಿಯಾಸ್ ಲೂಯಿಸ್ ಮತ್ತು ತಿರುಪೂರು ಜಿಲ್ಲೆಯ ಸೆಂದಿಲ್ ಕುಮಾರ್ ಅಲಿಯಾಸ್ ಸೆಂದಿಲ್ ಅವರನ್ನು ಬಂಧಿಸಲಾಗಿತ್ತು. ಈ ಖದೀಮರು ಮೈಸೂರಿನ ಸಿಎಫ್‌ಟಿಆರ್‌ಐ, ಡಿಎಫ್‌ಆರ್‌ಎಲ್, ಮೈಸೂರು ಮೃಗಾಲಯ ಸೇರಿದಂತೆ ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಬೆಳೆದಿದ್ದ ಗಂಧದ ಮರಗಳನ್ನು ಕದಿಯುತ್ತಿದ್ದರು. ಆಗ ಜಯಲಕ್ಷಿö್ಮÃಪುರಂ, ಲಕ್ಷಿö್ಮÃಪುರಂ, ನರಸಿಂಹರಾಜ ಠಾಣಾ ವ್ಯಾಪ್ತಿಯ ತಲಾ ಒಂದು, ಅಶೋಕಪುರಂ ಮತ್ತು ನಜರ್‌ಬಾದ್ ಠಾಣಾ ವ್ಯಾಪ್ತಿಯ ತಲಾ ಎರಡು ಹಾಗೂ ಕೆ.ಆರ್.ಠಾಣಾ ವ್ಯಾಪ್ತಿಯಲ್ಲಿ ಮೂರು ಸೇರಿದಂತೆ ಹತ್ತು ಶ್ರೀಗಂಧ ಮರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಗಿತ್ತು. ಈ ಖತರ್‌ನಾಕ್ ವ್ಯಕ್ತಿಗಳು ತಮಗೆ ಹಣದ ಅವಶ್ಯಕತೆ ಇದ್ದಾಗಲೆಲ್ಲಾ ಬಂಡಿಪಾಳ್ಯ ಎಪಿಎಂಸಿಗೆ ಬಾಳೆಕಾಯಿ ಹಾಗೂ ತರಕಾರಿ ಸಾಗಿಸುವ ವಾಹನಗಳಲ್ಲಿ ಮೈಸೂರಿಗೆ ಬಂದು ದುಷ್ಕೃತ್ಯವೆಸಗುವುದನ್ನೇ ಕಳೆದ ಸುಮಾರು ೩ ವರ್ಷಗಳಿಂದ ಕಾಯಕ ಮಾಡಿಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಇದಕ್ಕೆ ಪೂರಕವೆಂಬAತೆ ೨೦೧೯ರ ಡಿಸೆಂಬರ್ ತಿಂಗಳಿನಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯುವ ಪ್ರೇಮಿಗಳ ಮೇಲೆ ಹಲ್ಲೆ ಮಾಡಿ ೨ ಮೊಬೈಲ್‌ಗಳನ್ನು ಕಸಿದಿದ್ದರು. ಈಗ ಆ ಮೊಬೈಲ್‌ಗಳನ್ನೇ ಇವರು ಬಳಸುತ್ತಿರುವುದು ಸಾಕ್ಷಿಯಾಗಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಅನ್‌ಲೋಡ್ ಮಾಡಿದ ನಂತರ ೨ ಅಥವಾ ೩ ದಿನಗಳ ಕಾಲ ಮೈಸೂರಲ್ಲೇ ಬೀಡು ಬಿಡುತ್ತಿದ್ದ ಈ ಖದೀಮರು, ನಿರ್ಜನ ಪ್ರದೇಶಗಳಾದ ಚಾಮುಂಡಿಬೆಟ್ಟದ ತಪ್ಪಲು, ರಿಂಗ್ ರಸ್ತೆ ಸುತ್ತಮುತ್ತ ಹಾಗೂ ಲಿಂಗಾAಬುದಿ ಕೆರೆ ಸುತ್ತಮುತ್ತ ವಿಹರಿಸುತ್ತಿದ್ದ ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಸುಲಿಗೆ ನಡೆಸುತ್ತಿದ್ದರು. ಅಲ್ಲದೇ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂಬ ಆತಂಕಕಾರಿ ವಿಷಯ ಬಯಲಾಗಿದೆ. ವಿಪರ್ಯಾಸವೆಂದರೆ ಇವರಿಂದ ಸುಲಿಗೆಗೊಳಗಾದವರು ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದವರು ಪೊಲೀಸರಿಗೆ ದೂರನ್ನೇ ನೀಡದೇ ಇದ್ದುದರಿಂದ ಈ ಕಾಮುಕರಿಗೆ ಮೈಸೂರು ಅಚ್ಚುಮೆಚ್ಚಿನ ಸುಲಿಗೆ ತಾಣವಾಗಿ ಪರಿಣಮಿಸಿತ್ತು ಎಂಬುದು ತಿಳಿದು ಬಂದಿದೆ. ಈಗ ಬಂಧಿತರಾಗಿರುವ ಅಪ್ರಾಪ್ತ ಸೇರಿದಂತೆ ಐವರು ಮಾತ್ರವಲ್ಲದೆ ಇನ್ನೂ ಕೆಲವರು ಮೈಸೂರನ್ನು ಸುಲಿಗೆ ತಾಣವನ್ನಾಗಿ ಮಾಡಿಕೊಂಡು ದುಷ್ಕೃತ್ಯಗಳನ್ನು ಎಸಗುತ್ತಿದ್ದರು ಎಂಬ ಆತಂಕಕಾರಿ ವಿಷಯವು ಹೊರ ಬಂದಿದೆ ಎನ್ನಲಾಗಿದೆ.

Translate »