ಪಾಲಿಕೆಯ ‘ಸಫಾಯಿಮಿತ್ರ’ ಸಮವಸ್ತ್ರ ಸ್ಪರ್ಧೆಯಲ್ಲಿ ಮೈಸೂರು ಮಹಿಳೆಗೆ ಪ್ರಥಮ ಬಹುಮಾನ
ಮೈಸೂರು

ಪಾಲಿಕೆಯ ‘ಸಫಾಯಿಮಿತ್ರ’ ಸಮವಸ್ತ್ರ ಸ್ಪರ್ಧೆಯಲ್ಲಿ ಮೈಸೂರು ಮಹಿಳೆಗೆ ಪ್ರಥಮ ಬಹುಮಾನ

December 17, 2020

ಮೈಸೂರು,ಡಿ.16(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆಯು ಇತ್ತೀಚೆಗೆ ನಡೆ ಸಿದ ‘ಸಫಾಯಿಮಿತ್ರ’ ಸಮವಸ್ತ್ರ ಡಿಸೈನ್ ಸ್ಪರ್ಧೆಯಲ್ಲಿ ಮೈಸೂರಿನ ಕುವೆಂಪುನಗ ರದ ‘ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್’ ಪ್ರಾಂಶು ಪಾಲರಾದ ಆಶಾ ಜಯಕೃಷ್ಣನ್ ಅವರು ಮೊದಲ ಬಹುಮಾನ ಪಡೆದಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಕೇವಲ 7 ನಗರ ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಕರ್ನಾ ಟಕದಿಂದ ಮೈಸೂರು ನಗರ ಮಾತ್ರ ವಿಶೇಷ ಕಾಸ್ಟ್ಯೂಮ್ ಅನ್ನು ಸಲ್ಲಿಸಿದೆ. ಸಫಾಯಿಮಿತ್ರ ಸಮವಸ್ತ್ರಗಳ ಉತ್ತಮ ವಿನ್ಯಾಸ ಪಡೆಯಲೆಂದು ಮೈಸೂರು ಮಹಾ ನಗರ ಪಾಲಿಕೆಯು ಏರ್ಪಡಿಸಿದ್ದ ಸ್ಪರ್ಧೆ ಯಲ್ಲಿ ಮೈಸೂರಿನವರೇ ಆದ ಫ್ಯಾಷನ್ ಡಿಸೈನರ್ ಪ್ರಥಮ ಬಹುಮಾನ ಗಳಿಸಿ ರುವುದು ವಿಶೇಷ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್’ (ಛಿiಣಥಿ ಛಿhಚಿಟಟ eಟಿge oಟಿ mಚಿಟಿhoಟe ಣo mಚಿಛಿhiಟಿehoಟe) ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ದೇಶದ 242 ನಗರಗಳಲ್ಲಿ ನಡೆಸುತ್ತಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರ ವರ್ಗದಲ್ಲಿ 12 ಕೋಟಿ ರೂ. ಪ್ರಥಮ ಬಹುಮಾನ, 6 ಕೋಟಿ ರೂ. ದ್ವಿತೀಯ ಹಾಗೂ 3 ಕೋಟಿ ರೂ. ತೃತೀಯ ಬಹುಮಾನ ನಿಗದಿಪಡಿಸಲಾಗಿದೆ. 3 ಲಕ್ಷದಿಂದ 10 ಲಕ್ಷ ದವರೆಗಿನ ಜನಸಂಖ್ಯೆ ವರ್ಗದಲ್ಲಿ ಬರುವ ಮೈಸೂರು ನಗರಕ್ಕೆ 10 ಕೋಟಿ ರೂ. (ಪ್ರಥಮ), 5 ಕೋಟಿ ರೂ. (ದ್ವಿತೀಯ) ಹಾಗೂ 2.5 ಕೋಟಿ ರೂ. (ತೃತೀಯ) ಬಹುಮಾನ ನಿಗದಿ ಮಾಡಲಾಗಿತ್ತು. 3 ಲಕ್ಷವರೆಗಿನ ಜನಸಂಖ್ಯೆವುಳ್ಳ ನಗರಕ್ಕೆ 8, 4 ಮತ್ತು 2 ಕೋಟಿ ರೂ. ನಗದು ಬಹುಮಾನಗಳನ್ನು ಕ್ರಮವಾಗಿ ನಿಗದಿ ಮಾಡಲಾಗಿದೆ. ಮೈಸೂರು ನಗರವು 3ರಿಂದ 10 ಲಕ್ಷ ಜನಸಂಖ್ಯೆ ಇರುವ ನಗರ ವರ್ಗಕ್ಕೆ ಬರಲಿದ್ದು, ಮೈಸೂರು ಮಹಾನಗರ ಪಾಲಿಕೆಯು ಆಶಾ ಜಯ ಕೃಷ್ಣನ್ ಅವರು ಸಲ್ಲಿಸಿರುವ ಸಮವಸ್ತ್ರ ವಿನ್ಯಾಸಕ್ಕೆ 10,000 ರೂ. ಬಹುಮಾನ ನೀಡಿದೆಯಲ್ಲದೆ, ರಾಷ್ಟ್ರಮಟ್ಟದ ಸ್ಪರ್ಧೆಗೂ ಕಳುಹಿಸಿಕೊಡುತ್ತಿದೆ. ಸಫಾಯಿಮಿತ್ರ ಸುರಕ್ಷಾ ಚಾಲೆಂಜ್ ಅಂಗವಾಗಿ ನಡೆಯ ಲಿರುವ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರ ಹೆಸರನ್ನು 2021ರ ಆಗಸ್ಟ್ 15ರಂದು ಪ್ರಕಟಿಸಲಾಗುವುದು.

 

 

Translate »