ಮೈಷುಗರ್ ಖಾಸಗೀಕರಣ: ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ
ಮೈಸೂರು

ಮೈಷುಗರ್ ಖಾಸಗೀಕರಣ: ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ

June 23, 2020

ಬೆಂಗಳೂರು, ಜೂ. 22 (ಕೆಎಂಶಿ)- ಮೈಷುಗರ್ ಕಾರ್ಖಾನೆ ಖಾಸಗೀಕರಣದ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕಾರ್ಖಾ ನೆಯ ಜೊತೆ ನಿರಾಣಿ ಶುಗರ್ಸ್ ಲಿಮಿಟೆಡ್ ಹೆಸರು ತಳುಕು ಹಾಕು ವುದು ಬೇಡ ಎಂದು ಶಾಸಕರೂ ಆದ ನಿರಾಣಿ ಶುಗರ್ಸ್ ಅಧ್ಯಕ್ಷರಾದ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವುದಕ್ಕಾಗಲೀ ಅಥವಾ ಕಾರ್ಯಾಚರಣೆ ಮತ್ತು ನಿರ್ವಹಣೆ (ಔ&ಒ) ಸಂಬಂಧ ರಾಜ್ಯ ಸರ್ಕಾರ ಈ ಕ್ಷಣದವರೆಗೆ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಮೈಷು ಗರ್ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆಯಲು ತಾವು ಟೆಂಡರ್ ಸಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುರುಗೇಶ್ ನಿರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ, ಬೇಕಾದವರಿಗೆ ಮೈಷುಗರ್ ಕಾರ್ಖಾನೆಯನ್ನು ನೀಡಲು ಅದು ಕಿರಾಣಿ ಅಂಗಡಿ ಯಲ್ಲ. ಯಾವುದೇ ಕಾರ್ಖಾನೆಗಳನ್ನು ಖಾಸಗಿಯವ ರಿಗೆ ಗುತ್ತಿಗೆ ನೀಡಬೇಕಾದರೆ ಪಾರದರ್ಶಕ ನಿಯಮ ಗಳಡಿ ಟೆಂಡರ್ ಕರೆಯಬೇಕು. ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆಯನ್ನಾಧರಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಬೇಕಾಗುತ್ತದೆ. ಈ ಸಾಮಾನ್ಯ ಮಾಹಿತಿ ಯನ್ನು ನನ್ನ ಮೇಲೆ ನಿರಾಧಾರ ಆರೋಪ ಮಾಡು ವವರು ಅರಿಯಬೇಕು. ಮುಂದಿನ ದಿನಗಳಲ್ಲಿ ಮೈಷು ಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ರಾಜ್ಯಸರ್ಕಾರ ಟೆಂಡರ್ ಅಧಿಸೂಚಿಸಿದರೆ ಆಗ ಅರ್ಹತೆ ಮತ್ತು ಆಸಕ್ತಿ ಇದ್ದರೆ ನಾನು ಟೆಂಡರ್‍ನಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ.

ಮೈಷುಗರ್ ಕಾರ್ಖಾನೆ ಕಳೆದ ನಾಲ್ಕು ವರ್ಷಗಳಿಂದ ಪೂರ್ಣ ಮಟ್ಟದಲ್ಲಿ ನಡೆದಿಲ್ಲ. ಕೆಲವೇ ತಿಂಗಳುಗಳು ಕಾರ್ಖಾನೆ ಕಬ್ಬು ಅರೆದಿದೆ. ಇಂತಹ ರೋಗಗ್ರಸ್ತ ಕಾರ್ಖಾನೆ ಯನ್ನು ಹೀಗೆಯೇ ಮುಂದುವರೆಯಲು ಬಿಡ ಬೇಕೋ ಅಥವಾ ಕಾರ್ಖಾನೆ ಪೂರ್ಣಪ್ರಮಾಣ ದಲ್ಲಿ ಕಬ್ಬು ಅರೆಯಲು ಆರಂಭಿಸಬೇಕೋ ಎಂಬು ದನ್ನು ರಾಜ್ಯ ಸರ್ಕಾರ, ಮಂಡ್ಯಜಿಲ್ಲೆಯ ಜನಪ್ರತಿನಿಧಿ ಗಳು, ರೈತ ಹಿತರಕ್ಷಣಾ ಹೋರಾಟ ಸಮಿತಿಗಳು, ವಿವಿಧ ರೈತ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರು ನಿರ್ಧರಿಸುವ ಕಾಲ ಸನ್ನಿಹಿತವಾಗಿದೆ. ಸದ್ಯಕ್ಕೆ ಮೈಷು ಗರ್ ಕಾರ್ಖಾನೆ ಜೊತೆ ನನ್ನ ಹೆಸರನ್ನು ತಳುಕುಹಾಕು ವುದು ಬೇಡ ಎಂದು ನಿರಾಣಿ ವಿನಂತಿಸಿದ್ದಾರೆ.

ಕೆ.ಆರ್.ಎಸ್ ಜಲಾಶಯಕ್ಕಿಂತ ಆಲಮಟ್ಟಿ ಜಲಾ ಶಯ ತುಂಬಾ ದೊಡ್ಡದಾಗಿದ್ದು, ನಾನು ನಮ್ಮ ಭಾಗ ದಲ್ಲಿಯೇ ಇನ್ನೂ ನಾಲ್ಕೈದು ಸಕ್ಕರೆ ಕಾರ್ಖಾನೆ ಗಳನ್ನು ಆರಂಭಿಸಲು ಅವಕಾಶವಿದೆ. ಹೀಗಾಗಿ ಮಂಡ್ಯ ದಲ್ಲಿನ ಕಾರ್ಖಾನೆಗಳನ್ನೇ ನಡೆಸಬೇಕೆಂಬ ಹಠ ವಾಗಲೀ, ಯಾವುದೇ ಹಿತಾಸಕ್ತಿಯಾಗಲೀ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ರಾಜ್ಯದ ಯಶಸ್ವಿ ಉದ್ಯಮಿಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರಕ್ಕೆ ನನ್ನದೇ ಕೊಡುಗೆ ನೀಡಿದ್ದೇನೆ. ನಾನು ಮಹಾನ್ ಲೂಟಿ ಕೋರನೂ ಅಲ್ಲ, ಕಳ್ಳತನವನ್ನು ಮಾಡುವ ಅಗತ್ಯವೂ ನನಗಿಲ್ಲ. ಇದೇ ರೀತಿಯ ನಿರಾಧಾರ ಆರೋಪ ಗಳನ್ನು ನನ್ನ ಮೇಲೆ ವಿನಾಕಾರಣ ಮಾಡಿದರೆ ಕಾನೂನಿನ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಯದುವೀರ್ ಒಡೆಯರ್ ಭೇಟಿ ಮಾಡಿಲ್ಲ ಮೈಸೂರಿನ ಅರಮನೆಯಲ್ಲಿ, ಜೂನ್ 10ರಂದು ನಾನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವ ರನ್ನು ಸೌಜನ್ಯದ ಭೇಟಿ ಮಾಡಿದ್ದೆ. ಇದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಪ್ರಜ್ಞಾವಂತರಿಗೆ ಶೋಭೆ ತರುವು ದಿಲ್ಲ. ಯದುವೀರ್ ಒಡೆಯರ್ ಅವರನ್ನು ನಾನು ಭೇಟಿಯೇ ಆಗಿಲ್ಲ. ಕಬ್ಬು ಬೆಳೆಗಾರರ ಹಿತ ದೃಷ್ಟಿಯಿಂದ ಮೈಷುಗರ್ ಕಾರ್ಖಾನೆಯನ್ನು ಔ&ಒ ವ್ಯವಸ್ಥೆಯ ಲ್ಲಾದರೂ ಆರಂಭಿಸುವಂತೆ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜಮನೆತನ ವನ್ನು ಈ ವಿಷಯದಲ್ಲಿ ಸೇರಿಸಿ ಹೇಳಿಕೆಗಳನ್ನು ನೀಡುವುದು ಸರಿಯಾದ ಕ್ರಮವಲ್ಲ. ಈ ನಿಟ್ಟಿನಲ್ಲಿ ಕಪೋಲ ಕಲ್ಪಿತ ಹೇಳಿಕೆಯನ್ನು ಕೊಡುವುದು ಸ್ವಾಭಿಮಾನಿ ಮಂಡ್ಯ ಜನತೆಯ ಘನತೆ ಗೌರವಕ್ಕೆ ಶೋಭೆ ತರುವ ವಿಷಯವಲ್ಲ. ನಾನೂ ಸಹ ಕರ್ನಾಟಕದವನೇ, ನಾನೇನು ಹೊರದೇಶ ದವನಲ್ಲ. ಕಬ್ಬು ಬೆಳೆಗಾರರ ಹಿತ ರಕ್ಷಿಸುವುದೊಂದೇ ಇದರ ಹಿಂದಿನ ಉದ್ದೇಶವಾಗಿದೆ ಎಂದಿದ್ದಾರೆ.

Translate »