ನೀಟ್ ಫಲಿತಾಂಶ ಯಡವಟ್ಟು: ಬರೀ 6 ಅಂಕ ಬಂತೆಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು: ಒಎಂಆರ್ ಶೀಟ್‍ನಲ್ಲಿ ಬಂದಿದ್ದು 590 ಮಾಕ್ರ್ಸ್
ಮೈಸೂರು

ನೀಟ್ ಫಲಿತಾಂಶ ಯಡವಟ್ಟು: ಬರೀ 6 ಅಂಕ ಬಂತೆಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು: ಒಎಂಆರ್ ಶೀಟ್‍ನಲ್ಲಿ ಬಂದಿದ್ದು 590 ಮಾಕ್ರ್ಸ್

October 25, 2020

ನವದೆಹಲಿ,ಅ.24- ವೈದ್ಯಕೀಯ ಕೋರ್ಸ್‍ಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶದಿಂದಾದ ಯಡವಟ್ಟೊಂದು ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವ ಕಳೆದುಕೊಳ್ಳುವಂತೆ ಮಾಡಿದೆ. ತಾನು ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಮಧ್ಯಪ್ರದೇಶದ ವಿಧಿ ಸೂರ್ಯವಂಶಿ ನೀಟ್ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾದು ಕುಳಿತಿ ದ್ದಳು. ಅ.16ರಂದು ಫಲಿತಾಂಶ ಪ್ರಕಟಗೊಂಡಿದ್ದು, ತನ್ನ ಹೆಸರಿನ ಮುಂದೆ ಕೇವಲ 6 ಸಂಖ್ಯೆ ಇರುವುದು ಕಂಡು ವಿಧಿ ಆಘಾತಕ್ಕೊಳಗಾಗಿದ್ದಾಳೆ. ಇಷ್ಟು ಕಡಿಮೆ ಅಂಕ ಬಂದಿರುವುದನ್ನು ವಿಧಿಯ ಪೆÇೀಷಕರು ಕೂಡ ನಂಬಲಾಗಿಲ್ಲ. ಇದರಿಂದ ಮಾನಸಿಕವಾಗಿ ಆಘಾತಕ್ಕೊಳ ಗಾದ ವಿಧಿ ತನ್ನ ರೂಮಿನ ಕೊಠಡಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಈ ನಡುವೆ ವಿಧಿ ಸೂರ್ಯವಂಶಿ ನೀಟ್ ಪರೀಕ್ಷೆ ಒಎಂಆರ್ ಶೀಟ್ (ಉತ್ತರ ಪತ್ರಿಕೆಯ ಪ್ರತಿ)ಅನ್ನು ಪರಿಶೀಲಿಸಿದಾಗ ಆಕೆ 590 ಅಂಕ ಪಡೆದಿ ರುವುದು ಕಂಡುಬಂದಿದೆ. ವಿದ್ಯಾರ್ಥಿನಿ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿರುವು ದಾಗಿ ವರದಿಗಳು ತಿಳಿಸಿವೆ.

 

 

 

 

Translate »