ಕೊರೊನಾ ಭಯವಿಲ್ಲ: ಈಗ ಏನಿದ್ದರೂ ಪರೀಕ್ಷೆ ಚೆನ್ನಾಗಿ ಬರೆಯಬೇಕು ಎಂಬ ಭರವಸೆ ಬಂದಿದೆ
ಮೈಸೂರು

ಕೊರೊನಾ ಭಯವಿಲ್ಲ: ಈಗ ಏನಿದ್ದರೂ ಪರೀಕ್ಷೆ ಚೆನ್ನಾಗಿ ಬರೆಯಬೇಕು ಎಂಬ ಭರವಸೆ ಬಂದಿದೆ

June 25, 2020

ಮೈಸೂರು,ಜೂ.24(ಎಂಕೆ)- ಕೊರೊನಾ ಭಯದಷ್ಟೇ ಮುಂಜಾಗ್ರತೆಯ ಅರಿವೂ ಇದೆ. ಮಾಸ್ಕ್, ಸಾನಿಟೈಸರ್ ಬಳಕೆ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯುತ್ತೇವೆ. ಉತ್ತಮ ಅಂಕ ಗಳಿಸಿ ಯಶಸ್ವಿಯಾಗುತ್ತೇವೆ…

2020ರ ಮಾ.27ರಂದು ನಡೆಯ ಬೇಕಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಹಾಮಾರಿ ಕೊರೊನಾ ಸೋಂಕಿನಿಂದ ನಾಳೆ(ಜೂ.25)ಯಿಂದ ಪ್ರಾರಂಭ ವಾಗು ತ್ತಿದ್ದು, ಕೊರೊನಾ ಹಾವಳಿಯಿಂದ ವಿದ್ಯಾರ್ಥಿ ಗಳಲ್ಲಿದ್ದ ‘ಪರೀಕ್ಷೆ ನಡೆಯು ತ್ತದೋ ಅಥವಾ ಇಲ್ಲವೋ’ ಎಂಬ ಆತಂಕ ದೂರ ವಾಗಿದೆ. ಪರೀಕ್ಷೆ ಬರೆಯಲು ಸಕಲ ರೀತಿಯಲ್ಲೂ ಸಜ್ಜಾಗಿರುವ ಮೈಸೂರಿನ ವಿವಿಧ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.

ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 89 ದಿನಗಳ ಹೆಚ್ಚುವರಿ ಅಭ್ಯಾಸ ನಡೆಸಿರುವ ವಿದ್ಯಾರ್ಥಿಗಳು. ಕೊರೊನಾ ಭಯದ ನಡುವೆಯೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಛಲ ತೊಟ್ಟಿದ್ದು, ‘ಮೈಸೂರು ಮಿತ್ರ’ನೊಂದಿಗೆ ಪರೀಕ್ಷೆಯ ಪೂರ್ವಸಿದ್ದತೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮರಿಮಲ್ಲಪ್ಪ ಪ್ರೌಢಶಾಲೆ ವಿದ್ಯಾರ್ಥಿ ಗಗನ್, 10ನೇ ತರಗತಿ ಪರೀಕ್ಷೆಗಾಗಿ ಚೆನ್ನಾಗಿ ತಯಾರಿ ಮಾಡಿಕೊಂಡಿದ್ದೇನೆ. ಐದಾರು ಬಾರಿ ಪುಸ್ತಕಗಳು, ಮಾದರಿ ಮತ್ತು ಹಳೆ ಪ್ರಶ್ನೆ ಪತ್ರಿಕೆಗಳನ್ನು ಪುನರಾವರ್ತನೆ ಮಾಡಿ ದ್ದೇನೆ. ಅದಷ್ಟು ಬೇಗ ಪರೀಕ್ಷೆ ನಡೆಸಿದರೆ ನಮಗೂ ಒಳ್ಳೆಯದು ಎಂದು ಪ್ರತಿಕ್ರಿಯಿಸಿ ದರೆ, ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಎಸ್.ಮಹಾಂತ್ ಪ್ರತಿಕ್ರಿಯಿಸಿ, ಚೆನ್ನಾಗಿ ತಯಾರಿ ಮಾಡಿಕೊಂಡಿದ್ದೇನೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಾಠ ಬೋಧನೆಯನ್ನು ನೋಡುತ್ತಿದ್ದೆ. ಕೊರೊನಾ ಸೋಂಕಿನ ಭಯವಿದ್ದರೂ ಅಷ್ಟೇ ಮುನ್ನೆ ಚ್ಚರಿಕೆಯ ಅರಿವೂ ಇದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ, ಸಾನಿಟೈ ಸರ್ ಬಳಸಿ ಪರೀಕ್ಷೆ ಬರುತ್ತೇನೆ ಎಂದರು.

ಲಾಕ್‍ಡೌನ್ ಅವಧಿಯಲ್ಲಿ ಮತ್ತಷ್ಟು ಅಭ್ಯಾಸ ನಡೆಸಲು ಸಹಕಾರಿಯಾಯಿತು. ಎಲ್ಲಿ ಎಕ್ಸಾಂ ಕ್ಯಾನ್ಸಲ್ ಆಗುತ್ತೋ ಎಂಬ ಆತಂಕವೂ ಇತ್ತು. ಮನಸ್ಸಿನಲ್ಲಿ ಸ್ವಲ್ಪ ಪರೀಕ್ಷೆಗಿಂತ ಕೊರೊನಾ ಭಯ ಇದೆ. ಯಾರೊಂದಿಗೂ ಮಾತ ನಾಡದೆ ಪರಸ್ಪರ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯುತ್ತೇನೆ ಎಂದು ರೋಟರಿ ಐಡಿಯಲ್ ಜಾವಾ ಪೌಢಶಾಲೆ ವಿದ್ಯಾರ್ಥಿ ಮಹಮ್ಮದ್ ರೆಹಾನ್ ಹೇಳಿದರೆ, ವಿಜಯ ವಿಠಲ ಶಾಲೆಯ ವಿದ್ಯಾರ್ಥಿನಿ ಪ್ರಾಪ್ತಿ ಪ್ರಶಾಂತ್, ಬಾಕಿ ಉಳಿದಿದ್ದ ಕೆಲವು ಪಾಠ ಗಳನ್ನು ಓದಿಕೊಳ್ಳಲು ಸಾಧ್ಯವಾಯಿತು. ಇಂಗ್ಲಿಷ್ ಸುಲಭ ಯಾವುದೇ ಭಯವಿಲ್ಲ. ಪೆನ್ನು, ಪೆನ್ಸಿಲ್ ಜೊತೆಗೆ ಮಾಸ್ಕ್, ಸಾನಿ ಟೈಸರ್ ಇಟ್ಟುಕೊಂಡಿದ್ದೇನೆ. ಕಳೆದ 3 ತಿಂಗಳ ಬಿಡುವಿನಲ್ಲಿ ಓದುವಿನ ಜೊತೆಗೆ ಚಿತ್ರಕಲೆ ಬಿಡುಸುತ್ತಿದ್ದೆ. ಜೊತೆಗೆ ತಮ್ಮ ನೊಂದಿಗೆ ಆಟವಾಡುತ್ತಿದ್ದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿ ಎಂ.ಎನ್.ವಿಹಾನ್ ಮಾತನಾಡಿ, ಪರೀಕ್ಷೆಗೆ ಮೊದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಂಡಿದ್ದೆ. ಲಾಕ್‍ಡೌನ್ ಟೈಂನಲ್ಲಿ ಒಂದಷ್ಟು ಹೆಚ್ಚುವರಿ ಕಲಿಕೆಗೆ ಸಹಕಾರಿಯಾಯಿತು. ಪರೀಕ್ಷೆಯನ್ನು 10-15 ದಿನವಷ್ಟೇ ಮುಂದೂಡ ಬಹುದು ಎಂದುಕೊಂಡಿದ್ದೆ. ಆದರೆ ಕೊರೊನಾ ಸೋಂಕು ಜಾಸ್ತಿಯಾಗುತ್ತಿದ್ದ ರಿಂದ ಮತ್ತೆ ಪರೀಕ್ಷೆ ಬರೆಯಲು ಇಷ್ಟು ದಿನಗಳು ಕಾಯಬೇಕಾಯಿತು. ಶಾಲೆಯಿಂದ ವಾಟ್ಸಾಪ್ ಗ್ರೂಪ್ ಮಾಡಿ, ಮಾದರಿ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಿಕೊಡುತ್ತಿದ್ದರು. ಶಾಲೆಯ ಹೆಚ್‍ಎಂ ತುಂಬಾ ಸಹಕಾರ ನೀಡಿದ್ದಾರೆ. ಪರೀಕ್ಷೆ ನೆಡೆಯುತ್ತದೆ ನಂಬಿಕೆಯಿಂದಿರಿ ಎಂದು ಆಗಾಗ ಹೇಳಿ ವಿಶ್ವಾಸ ಹೆಚ್ಚಿಸು ತ್ತಿದ್ದರು. ಚೆನ್ನಾಗಿ ಪರೀಕ್ಷೆ ಬರೆದು ಯಶಸ್ವಿ ಯಾಗುತ್ತೇನೆ ಎಂದು ಹೇಳಿದರು.

Translate »