ಮೈಸೂರು,ಮೇ18(ಎಂಟಿವೈ)- ಮೈಸೂರನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡ ಳಿತದೊಂದಿಗೆ ಕೈಜೋಡಿಸಲು ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಸಂಸ್ಥೆ ನಿರ್ಧರಿ ಸಿದ್ದು, ಮುಂದಿನ ದಿನಗಳಲ್ಲಿ `ನೋ ಮಾಸ್ಕ್-ನೋ ಬಿಸಿನೆಸ್’ ಘೋಷಣೆಯೊಂದಿಗೆ ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮಹತ್ತರ ನಿರ್ಧಾರವನ್ನು ಒಮ್ಮತದಿಂದ ಕೈಗೊಂಡಿರುವುದಾಗಿ ಎಫ್‍ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದ್ದಾರೆ.
ಮೈಸೂರಿನ ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಸಂಸ್ಥೆಯ ಸಭಾಂಗಣದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಲ್ಲಿ ಈ ಹಿಂದೆ ಪತ್ತೆಯಾಗಿದ್ದ 90 ಸೋಂಕಿ ತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ದ್ದಾರೆ. ಕೊರೊನಾ ಮುಕ್ತ ಮೈಸೂರು ಎಂಬ ಹೆಮ್ಮೆ ಪಡುವ ಸಂಗತಿ ನಡುವೆ ಇದೀಗ ಹೊರ ರಾಜ್ಯದಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರದ ಗೈಡ್ ಲೈನ್ಸ್(ಮಾರ್ಗಸೂಚಿ) ಅನ್ವಯ ಕೆಲವು ನಿಯಮ ವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯ. ಅದಕ್ಕೆ ಪೂರಕವಾಗಿ ಮೈಸೂರಿನ ಎಲ್ಲಾ ಕೈಗಾಗರಿಕಾ ಸಂಸ್ಥೆಗಳು ಒಮ್ಮತದ ನಿರ್ಧಾರ ಕೈಗೊಂಡಿದೆ ಎಂದರು.
ಕಳೆದ ಒಂದು ವಾರದಿಂದ ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಚುರುಕು ಗೊಂಡಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗ ಮಿಸಿ ಖರೀದಿಯಲ್ಲಿ ತೊಡಗಿದ್ದಾರೆ. ಮಾಸ್ಕ್ ಧರಿ ಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಗಮನಿಸಿದ್ದೇವೆ. ಆದ್ದರಿಂದ ವ್ಯಾಪಾರಿಗಳು ಎಚ್ಚರಿಕೆ ಯಿಂದ ವ್ಯಾಪಾರ ನಡೆಸಲು `ನೋ ಮಾಸ್ಕ್-ನೋ ಬಿಸಿನೆಸ್’ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ನಷ್ಟವಾದರೂ ಸರಿ ಇನ್ನು ಮುಂದೆ ಮಾಸ್ಕ್ ಧರಿ ಸದೇ ಬರುವ ಗ್ರಾಹಕರನ್ನು ಅಂಗಡಿ ಒಳಗೆ ಬಿಡುವು ದಿಲ್ಲ. ಕಡ್ಡಾಯವಾಗಿ ಅಂಗಡಿ, ಮಳಿಗೆ ಮುಂದೆ ಸ್ಯಾನಿಟೈಸರ್ ಇಡಲು ಸೂಚಿಸಲಾಗಿದೆ. ಎಲ್ಲರೂ ಕಡ್ಡಾಯ ವಾಗಿ ಸ್ಯಾನಿಟೈಸರ್ ಬಳಸಲು ಸೂಚನೆ ನೀಡುವಂತೆ ಅಲ್ಲದೆ, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಅಂಗಡಿ, ಕಾರ್ಖಾನೆ, ಮಳಿಗೆ, ಕೈಗಾರಿಕೆ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಲೀ ಕರು ಮಾಸ್ಕ್ ಧರಿಸಿ ಅಂಗಡಿ, ಕೈಗಾರಿಕೆ ಪ್ರವೇಶಿಸ ಬೇಕು. ಗ್ರಾಹಕÀರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡು ವಂತೆ ಸೂಚನೆ ನೀಡಲಾಗಿದೆ. ಬಳಸಿದ ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ನೌಕರರು ಮತ್ತು ಸಿಬ್ಬಂ ದಿಯ ಆರೋಗ್ಯದ ಬಗ್ಗೆ ಮಾಲೀಕರು ಕಾಳಜಿ ವಹಿಸಬೇಕು. ಜ್ವರ, ಕೆಮ್ಮು ಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಲು ಸೂಚನೆ ನೀಡ ಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಎ.ಎಸ್. ಸತೀಶ್, ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಉಪಸ್ಥಿತರಿದ್ದರು.