ಬೆಂಗಳೂರಿನಲ್ಲಿ ಇನ್ನು ಮುಂದೆ ಸೀಲ್‍ಡೌನ್ ಇರಲ್ಲ
ಮೈಸೂರು

ಬೆಂಗಳೂರಿನಲ್ಲಿ ಇನ್ನು ಮುಂದೆ ಸೀಲ್‍ಡೌನ್ ಇರಲ್ಲ

August 18, 2020

ಬೆಂಗಳೂರು: ಮಾರಕ ಕೊರೊನಾ ವೈರಸ್ ಸೋಂಕು ಪ್ರಸರಣದ ನಡುವೆಯೇ ಬೆಂಗಳೂರಿಗರಿಗೆ ಇದ್ದ ಸೀಲ್‍ಡೌನ್ ತಲೆನೋವು ಇನ್ನು ಮುಂದೆ ಇರುವುದಿಲ್ಲ.

ನಗರದಲ್ಲಿ ನಾಳೆಯಿಂದಲೇ ಸೀಲ್‍ಡೌನ್ ಪದ್ಧತಿ ರದ್ದುಪಡಿಸಲಾಗಿದ್ದು, ಇನ್ನು ಮುಂದೆ ಸೋಂಕಿತರ ಮನೆ ಸುತ್ತ ಬ್ಯಾರಿಕೇಡ್ ಹಾಕುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಕೊರೊನಾ ವೈರಸ್ ಬೆಂಗಳೂರಿನಲ್ಲಿ ಗರಿಷ್ಟ ಮಟ್ಟದಲ್ಲಿದ್ದರೂ ಬಿಬಿಎಂಪಿ ಸೀಲ್‍ಡೌನ್ ಮತ್ತು ಕಂಟೇನ್ಮೆಂಟ್ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಬೆಂಗ ಳೂರಿನಲ್ಲಿ ಸೀಲ್‍ಡೌನ್ ಬೇಕಾ ಅಥವಾ ಬೇಡವಾ ಎಂದು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಬಿಬಿಎಂಪಿಯ ಎಲ್ಲಾ ವಲಯದ ಎಂಜಿನಿ ಯರ್‍ಗಳೊಂದಿಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸೀಲ್‍ಡೌನ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಎನ್.ಮಂಜು ನಾಥ ಪ್ರಸಾದ್ ಅವರು, ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೀಲ್‍ಡೌನ್ ಇರುವುದಿಲ್ಲ. ಕೇವಲ 100 ಮೀಟರ್ ಒಳಗೆ 3 ಅಥವಾ 3ಕ್ಕಿಂತ ಹೆಚ್ಚು ಪ್ರಕರಣಗಳಿದ್ದರೆ ಮಾತ್ರ ಕಂಟೇನ್ಮೆಂಟ್ ಜೋನ್ ಮಾಡಲು ನಿರ್ಧಾರ ಮಾಡಲಾಗಿದೆ. ಇಲ್ಲದಿದ್ದರೆ ಸೀಲ್‍ಡೌನ್ ಮಾಡುವುದಿಲ್ಲ. ನಾಳೆಯಿಂದ ಎಲ್ಲ ಕಡೆ ಬ್ಯಾರಿಕೇಡ್ ಹಾಕುವುದು ನಿಲ್ಲುತ್ತದೆ. ಬ್ಯಾರಿಕೇಡ್, ಕಂಟೇನ್ಮೆಂಟ್ ಬದಲು ಪೆÇೀಸ್ಟರ್ ಅಂಟಿಸಿ ಜನರಿಗೆ ಜವಾ ಬ್ದಾರಿ ಮೂಡಿಸಲಾಗುತ್ತಿದೆ. ನಾವೇ ಕೋವಿಡ್-19 ವಿರುದ್ಧ ಬ್ಯಾರಿಕೇಡ್ ಹಾಕಿ ಜನರಿಗೆ ಭಯದ ವಾತಾವರಣ ಕಲ್ಪಿಸಬಾರದು. ಜೊತೆಗೆ ಈವರೆಗೂ ನಗರದಲ್ಲಿ ಕಂಟೇನ್ಮೆಂಟ್‍ಗಾಗಿ ವೆಚ್ಚವಾಗಿರುವ ಮಾಹಿತಿ ಪಡೆಯಲಾಗುತ್ತದೆ ಎಂದು ಹೇಳಿದರು.

Translate »