ಮೈಸೂರಲ್ಲಿ ಇಂದು ಕೆಲವೆಡೆ ನೀರು ಪೂರೈಕೆ ವ್ಯತ್ಯಯ
ಮೈಸೂರು

ಮೈಸೂರಲ್ಲಿ ಇಂದು ಕೆಲವೆಡೆ ನೀರು ಪೂರೈಕೆ ವ್ಯತ್ಯಯ

June 18, 2020

ಮೈಸೂರು, ಜೂ.17-ಬೆಳಗೊಳ ಯಂತ್ರಾಗಾರದ ಮುಖ್ಯ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿ ನಿಮಿತ್ತ ಜೂ.18ರಂದು (ಗುರುವಾರ) ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ ಎ, ಬಿ, ಸಿ ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರನಗರ, ತಿಲಕ್‍ನಗರ, ಬಡೇಮಕಾನ್, ಹಲೀಂ ನಗರ, ದೇವರಾಜ ಮೊಹಲ್ಲಾ, ಭಾಗಶಃ ನಜರ್ ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ, ಚಾಮುಂಡಿಪುರಂ, ದೇವರಾಜ ಮೊಹಲ್ಲಾ, ಲೂರ್ದ್‍ನಗರ, ಮೀನಾ ಬಜಾರ್, ವಾರ್ಡ್ ನಂ. 8, 17, 18, 19, 23ರಿಂದ 27ರವ ರೆಗೆ 40, 41, 55, 60, 61, 62, ಮೇಟಗಳ್ಳಿ ಮತ್ತು ಹೆಬ್ಬಾಳು ಕೈಗಾರಿಕಾ ಪ್ರದೇಶಗಳು ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Translate »