ನ.17ರಿಂದ ಕಾಲೇಜು ಆರಂಭ ಹಿನ್ನೆಲೆ:  ಮೈಸೂರು ವಿವಿ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಸೂಚನೆ
ಮೈಸೂರು

ನ.17ರಿಂದ ಕಾಲೇಜು ಆರಂಭ ಹಿನ್ನೆಲೆ: ಮೈಸೂರು ವಿವಿ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಸೂಚನೆ

November 15, 2020

ಮೈಸೂರು, ನ.14(ಆರ್‍ಕೆಬಿ)- ಪದವಿ ಕಾಲೇಜುಗಳನ್ನು ನ.17ರಿಂದ ಪ್ರಾರಂಭಿಸುವ ಕುರಿತು ವೈದ್ಯಕೀಯ ಸಚಿವ ಕೆ.ಸುಧಾಕರ್ ಹೇಳಿಕೆ ನೀಡುತ್ತಿದ್ದಂತೆಯೇ ಮೈಸೂರು ವಿಶ್ವವಿದ್ಯಾನಿಲಯ ಸರ್ಕಾರದ ಮಾರ್ಗಸೂಚಿ ಆಧರಿಸಿ ತರಗತಿಗಳನ್ನು ಆರಂಭಿಸಲು ಎಲ್ಲಾ ಮುನ್ನೆಚ್ಚರಿಕೆ ಕೈಗೊಂಡಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಯನ್ನು ಕಡ್ಡಾಯವಾಗಿ ಕೋವಿಡ್-10 ಪರೀಕ್ಷೆಗೆ ಒಳಪಡಿಸಲು ಸೂಚಿಸ ಲಾಗಿದೆ. ಕೋವಿಡ್ ನೆಗೆಟಿವ್ ವರದಿ ಬಂದವರಿಗೆ ಮಾತ್ರ ತರಗತಿಗಳಿಗೆ ಹಾಜ ರಾಗಲು ಅನುಮತಿಸಲು ನಿರ್ಧರಿಸಿರುವುದಾಗಿ ವಿವಿ ಮೂಲಗಳು ತಿಳಿಸಿವೆ.

Translate »