ವಿಶ್ವದಲ್ಲಿ 24 ಗಂಟೆಯಲ್ಲಿ ಲಕ್ಷ ಮಂದಿಗೆ ಸೋಂಕು
ಮೈಸೂರು

ವಿಶ್ವದಲ್ಲಿ 24 ಗಂಟೆಯಲ್ಲಿ ಲಕ್ಷ ಮಂದಿಗೆ ಸೋಂಕು

May 22, 2020

ವಾಷಿಂಗ್ಟನ್, ಮೇ 21- ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1,06,000 ಲಕ್ಷ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಕೊರೊನಾದಿಂದ ನಲುಗಿ ಹೋಗಿದ್ದ ಇಟಲಿ, ಸ್ಪೇನ್ ಮುಂತಾದ ಕಡೆ ನಿಧಾನವಾಗಿ ಲಾಕ್‍ಡೌನ್ ಸಡಿಲಿಸಲಾಗಿದೆ. ಆದರೂ 2ನೇ ಹಂತದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಮೆರಿಕಾ ದಲ್ಲಿ ಕೊರೊನಾ ಆರ್ಭಟ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,531 ಮಂದಿ ಬಲಿಯಾಗಿದ್ದಾರೆ. ಬುಧವಾರ ಸಾವನ್ನಪ್ಪಿದ 1,531 ಮಂದಿಯೊಂದಿಗೆ ಅಮೆರಿಕಾದಲ್ಲಿ ಈವರೆಗೂ ಮಹಾಮಾರಿ ವೈರಸ್‍ಗೆ 94,994 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸೋಂಕಿತರ ಸಂಖ್ಯೆ ಕೂಡ ಏರುತ್ತಲೇ ಇದ್ದು, ಈವರೆಗೂ 1,591,991 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಗುಣಮುಖ ರಾಗುತ್ತಿರುವವರ ಸಂಖ್ಯೆ ಏರಿಕೆ ಕಾಣುತ್ತಿದ್ದು, ಈ ವರೆಗೂ 370,076 ಸೋಂಕಿನಿಂದ ಗುಣಮುಖರಾಗಿದ್ದಾರೆ. ರಷ್ಯಾದಲ್ಲಿ 3 ಲಕ್ಷ ಸೋಂಕಿ ತರಿದ್ದರೆ 2,972 ಮಂದಿ ಸಾವಿಗೀಡಾಗಿದ್ದಾರೆ. ಸ್ಪೇನ್‍ನಲ್ಲಿ 2.79 ಲಕ್ಷ ಸೋಂಕಿದ್ದರೆ 27,888 ಮಂದಿ ಸಾವಿಗೀಡಾಗಿದ್ದಾರೆ. ಬ್ರೆಜಿಲ್ ನಲ್ಲಿ 2.93 ಲಕ್ಷ ಸೋಂಕು. 18,894 ಮಂದಿ ಸಾವು. ಬ್ರಿಟನ್‍ನಲ್ಲಿ 2.48 ಲಕ್ಷ ಸೋಂಕು. 35 ಸಾವಿರ ಬಲಿ. ಇಟಲಿಯಲ್ಲಿ 2.27 ಲಕ್ಷ ಸೋಂಕಿತರ ಪೈಕಿ 32 ಸಾವಿರ ಮಂದಿ ಬಲಿಯಾಗಿದ್ದಾರೆ.

Translate »