ಸರ್ಕಾರಕ್ಕೆ ವರ್ಷ: ಫಲಾನುಭವಿ ಜತೆ ಸಿಎಂ ಡಿಜಿಟಲ್ ಸಂವಾದ
ಮೈಸೂರು

ಸರ್ಕಾರಕ್ಕೆ ವರ್ಷ: ಫಲಾನುಭವಿ ಜತೆ ಸಿಎಂ ಡಿಜಿಟಲ್ ಸಂವಾದ

July 27, 2020

ಜಿಪಂ ಸಭಾಂಗಣದಲ್ಲಿ ಇಂದು ನೇರ ಪ್ರಸಾರದ ವೀಕ್ಷಣೆ ಅವಕಾಶ
ಮೈಸೂರು, ಜು.26(ಆರ್‍ಕೆಬಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ `ಆಡಳಿತ 1 ವರ್ಷ: ಸವಾಲುಗಳ ವರ್ಷ-ಪರಿಹಾರದ ಸ್ಪರ್ಶ’ ಕಾರ್ಯ ಕ್ರಮ ಜು.27ರ ಬೆಳಗ್ಗೆ 11ಕ್ಕೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿದ್ದು, ವರ್ಚುವಲ್ ವೇದಿಕೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನೇರ ಪ್ರಸಾರವಾಗ ಲಿದೆ. ಸರ್ಕಾರದ 1 ವರ್ಷದ ಸಾಧನೆ ಕುರಿತು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳು ಸಂಪಾದಿಸಿ, ವಾರ್ತಾ-ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ ಸಾಧನಾ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಫಲಾ ನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದದ ನೇರ ಪ್ರಸಾರದ ವೀಕ್ಷಣೆಗೆ ಮೈಸೂರು ಜಿಪಂ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭ `ಪುಟಕಿಟ್ಟ ಚಿನ್ನ’ ಕಿರು ಹೊತ್ತುಗೆ ಬಿಡುಗಡೆ, ಸಾಕ್ಷ್ಯಚಿತ್ರ ಪ್ರಸಾರ ಮೊದಲಾದ ಕಾರ್ಯಕ್ರಮಗಳನ್ನು ವರ್ಚುವಲ್ ವೇದಿಕೆಯಲ್ಲಿ ವೀಕ್ಷಿಸಬಹುದು. ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು ಸಂಸದರು, ಶಾಸಕರು, ಜಿಲ್ಲಾಧಿಕಾರಿ ಮತ್ತು ಗಣ್ಯರು, ವಿವಿಧ ಯೋಜನೆಗಳ ಫಲಾನುಭವಿಗಳು, ಕೊರೊನಾ ಗುಣಮುಖರು ಉಪಸ್ಥಿತರಿರುವರು.

Translate »