ನಿರ್ಮಲ ಭಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ
ಮೈಸೂರು

ನಿರ್ಮಲ ಭಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ

February 24, 2021

ಮೈಸೂರು, ಫೆ. 23- ನಿರ್ಮಲ ಭಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವೆಂದು ದಾಸರು ಮತ್ತು ಶರಣರು ಪ್ರತಿಪಾದಿಸಿದ್ದಾರೆ ಎಂದು ಖ್ಯಾತ ಸಂಗೀತ ಕಲಾವಿದರಾದ ವಿದುಷಿ ಕಲಾವತಿ ಅವಧೂತ್ ಹೇಳಿದರು.

ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-12’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯ ಕ್ರಮದಲ್ಲಿ ‘ತ್ಯಾಗರಾಜ ಮತ್ತು ಪುರಂದರರ ರಚನೆಗಳು’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಪುರಂದರದಾಸರು ಮತ್ತು ತ್ಯಾಗರಾಜರ ರಚನೆಗಳು ಸಂಗೀತ ಪರಂಪರೆಯಿಂದ ಬಂದತಹವು. ಅವರು ರಚಿಸಿದ ಪ್ರತಿಯೊಂದು ರಚನೆಗಳು ನಮ್ಮ ಬದುಕಿಗೆ ದಾರಿ ದೀಪವಾಗಿವೆ. ನಿರ್ಮಲ ಭಕ್ತಿ ಮತ್ತು ಸರಳ ಭಾಷೆಯ ಮೂಲಕ ಎಲ್ಲರಿಗೂ ಅರ್ಥವಾಗು ವಂತೆ ಅವರು ಹಾಡಿದರು. ಪುರಂದರದಾಸರು ಕರ್ನಾಟಕ ಸಂಗೀತಕ್ಕೆ ಒಂದು ಉನ್ನತ ಮಾರ್ಗವನ್ನು ಹಾಕಿಕೊಟ್ಟರು. ಅಂತರಂಗ ಶುದ್ಧಿಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ, ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯುವುದಿಲ್ಲ, ಚಿತ್ತಶುದ್ಧಿಯಿಲ್ಲ ದವರು ಜ್ಞಾನಿಗಳಾಗಲು ಸಾಧ್ಯವಿಲ್ಲ, ಮನಸ್ಸನ್ನು ಸ್ವಾಧೀನದಲ್ಲಿಟ್ಟುಕೊಂಡವರಿಗೆ ಮಂತ್ರ- ತಂತ್ರಗಳ ಅವಶ್ಯಕತೆ ಇರುವುದಿಲ್ಲ, ದೇವರಲ್ಲಿ ಅಚಲವಾದ ನಂಬಿಕೆ ಇದ್ದ ಮೇಲೆ ಗ್ರಹಗತಿಗಳ ಬಗ್ಗೆ ಯೋಚಿಸಬಾರದು, ಕಲಹದೆಡೆಗೆ ಮನಸ್ಸನ್ನು ಹರಿಸದೆ ಕಾಯಕದಲ್ಲಿ ತೊಡಗಬೇಕು. ಆಗ ಮಾತ್ರ ಸಂತೃಪ್ತ ಜೀವನ ನಡೆಸಲು ಸಾಧ್ಯ ಎಂಬುದನ್ನು ತ್ಯಾಗರಾಜ ಮತ್ತು ಪುರಂದರರ ರಚನೆಗಳಲ್ಲಿ ಕಾಣುತ್ತೇವೆ ಎಂದು ತಿಳಿಸಿದರು.

ಆನ್‍ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಜಿ.ಸುನೀಲ್‍ಕುಮಾರ್ ಪ್ರಾರ್ಥಿಸಿದರು. ಡಾ. ಮಹೇಂದ್ರಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿ ಸೋಮವಾರವೂ ನಡೆಯುವ ಈ ಉಪನ್ಯಾಸದಲ್ಲಿ ಕಲೆ, ಸಾಹಿತ್ಯ, ಸಂಸ್ಕøತಿ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ, ಯೋಗ, ಆರೋಗ್ಯ, ಜೀವನಶೈಲಿ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಆನ್‍ಲೈನ್ ಮೂಲಕ ನಡೆಯುವ ಈ ಉಪನ್ಯಾಸ ಕಾರ್ಯಕ್ರಮವು ಸಾಕಷ್ಟು ಜನಪ್ರಿಯಗೊಂಡಿದೆ.

 

Translate »