`ನಮ್ಮ ಭೂಮಿ ಮಾರಾಟಕ್ಕಿಲ್ಲ’  ಫಲಕ ಚಳವಳಿಗೆ ಆ.8ಕ್ಕೆ ಚಾಲನೆ
ಮೈಸೂರು

`ನಮ್ಮ ಭೂಮಿ ಮಾರಾಟಕ್ಕಿಲ್ಲ’ ಫಲಕ ಚಳವಳಿಗೆ ಆ.8ಕ್ಕೆ ಚಾಲನೆ

July 28, 2020

xಮೈಸೂರು, ಜು.27(ಪಿಎಂ)- ಕರ್ನಾ ಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದನ್ನು ಹಿಂಪಡೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ `ನಮ್ಮ ಭೂಮಿ ಮಾರಾಟಕ್ಕಿಲ್ಲ, ಕಾರ್ಪೊರೇಟ್ ಕಂಪನಿ ಮತ್ತು ಬಂಡವಾಳ ಶಾಹಿಗಳಿಗೆ ಪ್ರವೇಶವಿಲ್ಲ’ ಎಂಬ ಫಲಕ ಗಳನ್ನು ಹಳ್ಳಿಗಳಲ್ಲಿ ಅಳವಡಿಸುವ ಚಳವಳಿಗೆ ಆ.8ರಂದು ಚಾಲನೆ ನೀಡುತ್ತಿದೆ.

ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, `ಆ.8 ಕ್ವಿಟ್ ಇಂಡಿಯಾ ಚಳವಳಿ ಘೋಷಣೆ ದಿನ. ಅಂದು ಪ್ರತಿಜಿಲ್ಲೆಯ 1 ಗ್ರಾಮದ ಮುಖ್ಯ ದ್ವಾರದಲ್ಲಿ ಫಲಕ ಅಳವಡಿಸುವ ಚಳವಳಿಗೆ ಚಾಲನೆ ಸಿಗಲಿದೆ. ಬಳಿಕ ಪ್ರತಿಗ್ರಾಮಕ್ಕೂ ವಿಸ್ತರಿಸಲಾಗುವುದು. ಆ.15ರ ಬೆಳಗ್ಗೆ 10ಕ್ಕೆ ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ಗಾಂಧಿ ಪ್ರತಿಮೆ ಎದುರು ಸಂಘದ 100 ಪದಾಧಿಕಾರಿಗಳು ಧರಣಿ ನಡೆಸಲಿದ್ದೇವೆ ಎಂದರು. ಕೇಂದ್ರ, ರಾಜ್ಯ ಸರ್ಕಾರಗಳು ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಜನರ ಬದುಕು ಕಿತ್ತುಕೊಳ್ಳುತ್ತಿವೆ. ಇದರ ವಿರುದ್ಧ ಜನಪರ ಚಳವಳಿ ಆಯೋಜಿಸುತ್ತಿದ್ದು, ಸಂಘಟಿತ ಹೋರಾಟದ ನೇತೃತ್ವ ವಹಿ ಸುವಂತೆ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು ಕೋರಲಾಗಿದೆ. ಅವರು ನೇತೃತ್ವ ವಹಿಸುವ ಬಗ್ಗೆ ಶೀಘ್ರವೇ ಪ್ರಕಟಿಸಲಿದ್ದಾರೆ ಎಂದು ಪ್ರಶ್ನೆಗಳಿಗೆ ಉತ್ತ ರಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೊಸಕೋಟೆ ಬಸವರಾಜು, ಮೈಸೂರು ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ರೈತ ಮುಖಂಡರಾದ ಮಂಡಕಳ್ಳಿ ಮಹೇಶ್, ನೇತ್ರಾ ವತಿ, ಸ್ವರಾಜ್ ಇಂಡಿಯಾದ ಎನ್. ಪುನೀತ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »