ವಸತಿ ಪ್ರದೇಶದ ರಸ್ತೆಗಳನ್ನು ಜನರೇ ಅಡ್ಡಗಟ್ಟಿ ಕಾಯುತ್ತಿದ್ದಾರೆ
ಮೈಸೂರು

ವಸತಿ ಪ್ರದೇಶದ ರಸ್ತೆಗಳನ್ನು ಜನರೇ ಅಡ್ಡಗಟ್ಟಿ ಕಾಯುತ್ತಿದ್ದಾರೆ

April 19, 2020

ಮೈಸೂರು,ಏ.18(ಆರ್‍ಕೆ)-ಕೋವಿಡ್-19 ಲಾಕ್ ಡೌನ್ ನಿರ್ಬಂಧದಿಂದಾಗಿ ಪೊಲೀಸರು ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡುತ್ತಿದ್ದರೆ, ವಸತಿ ಬಡಾವಣೆಗಳಲ್ಲಿ ಸಣ್ಣಪುಟ್ಟ ರಸ್ತೆಗಳಲ್ಲಿ ಜನರೇ ವಾಹನ ಸವಾರರನ್ನು ನಿಯಂತ್ರಿಸುತ್ತಿದ್ದಾರೆ.

ಶುಕ್ರವಾರ ಒಂದೇ ದಿನ 12 ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿರುವುದು ದೃಢಪಟ್ಟ ನಂತರವಂತೂ ಎಚ್ಚೆತ್ತ ವಸತಿ ಬಡಾವಣೆಗಳ ಯುವಕರು, ತಾವೇ ಸ್ವತಃ ಮುಂದೆ ಬಂದು ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಸಣ್ಣಪುಟ್ಟ ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಮುಖ್ಯ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್‍ಗಳನ್ನು ಅಳ ವಡಿಸಿ ಪೊಲೀಸರು ಸಂಚಾರ ನಿರ್ಬಂಧಿಸುತ್ತಿರುವುದ ರಿಂದ ಜನರು ವಸತಿ ಬಡಾವಣೆಯ ರಸ್ತೆಗಳ ಮೂಲಕ ಓಡಾಡುತ್ತಿದ್ದರು. ಅದರಿಂದ ಎಚ್ಚೆತ್ತ ಬಡಾವಣೆ ನಿವಾಸಿ ಗಳೇ ಕಲ್ಲು, ಮುಳ್ಳಿನ ಗಿಡಗಳು, ತೆಂಗಿನ ಗರಿ, ಮರದ ರೆಂಬೆಗಳು, ಹಳೇ ವಾಹನಗಳನ್ನು ರಸ್ತೆಗಳಿಗೆ ಅಡ್ಡಲಾಗಿ ಹಾಕಿ ವಾಹನ ಸಂಚಾರವನ್ನು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿಯೇ ಕಾವಲಿದ್ದು, ವಾಹನ ಸವಾರರನ್ನು ವಾಪಸ್ ಕಳುಹಿಸುತ್ತಿದ್ದರಿಂದ ನಿರ್ಬಂಧವಿದ್ದರೂ ಬೀದಿಗಿಳಿ ದವರು ಸುತ್ತಿ ಬಳಸಿ ಓಡಾಡುವಂತಾಗಿದೆ. ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಹೆದರಿರುವ ಸಾರ್ವಜನಿಕರೇ ಈಗ ಸಂಚಾರ ನಿಯಂತ್ರಿಸಲು ಮುಂದಾಗಿ ರುವುದರಿಂದ ಪೊಲೀಸರ ಕೆಲಸ ಕೊಂಚ ಸಲೀಸಾಗಿದೆ.

Translate »