ಪೀಪಲ್ಸ್ ಪಾರ್ಕ್ ಗ್ರಂಥಾಲಯ ಇನ್ನು ‘ಪೀಪಲ್ ಫ್ರೆಂಡ್ಲಿ’
ಮೈಸೂರು

ಪೀಪಲ್ಸ್ ಪಾರ್ಕ್ ಗ್ರಂಥಾಲಯ ಇನ್ನು ‘ಪೀಪಲ್ ಫ್ರೆಂಡ್ಲಿ’

May 28, 2021

ಮೈಸೂರು, ಮೇ 27 (ಎಂಕೆ)- ಸಾಂಸ್ಕøತಿಕ ನಗರಿ ಮೈಸೂರಿನ ಓದುಗರ ನೆಚ್ಚಿನ ಪೀಪಲ್ಸ್ ಪಾರ್ಕ್ ‘ಗ್ರಂಥಾಲಯ’ದ ಹಸಿರು ವನದಲ್ಲಿ ನಿರ್ಮಾಣವಾಗಲಿದೆ ಓಪನ್ ಲೈಬ್ರರಿ…!

ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ನಗರ ಕೇಂದ್ರ ಗ್ರಂಥಾಲಯವು ಆಕರ್ಷಣೀಯವಾಗಿದ್ದು, ಮತ್ತಷ್ಟು ಓದುಗರನ್ನು ಸೆಳೆಯಲು ಸಜ್ಜಾಗಿದೆ. ಕರ್ನಾ ಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಮೈಸೂರು ವತಿಯಿಂದ 499.30 ಲಕ್ಷ ರೂ., ವೆಚ್ಛದಲ್ಲಿ ನಿರ್ಮಾಣಗೊಂಡಿರುವ ಗ್ರಂಥಾಲಯ ದಲ್ಲಿ ಡಿಜಿಟಲ್ ಲೈಬ್ರರಿ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ವಿಭಾಗ, ಪರಾಮರ್ಶನ ವಿಭಾಗ, ಬ್ರೈಲ್ ಮತ್ತು ವಿಶೇಷಚೇತನರ ವಿಭಾಗ, ಮಹಿಳಾ ಓದುಗರ ವಿಭಾಗ, ಪುಸ್ತಕ ದಾಸ್ತಾನು ವಿಭಾಗ, ದಿನಪತ್ರಿಕೆ ಹಾಗೂ ನಿಯತಕಾಲಿಕೆ ವಿಭಾಗ, ಮಕ್ಕಳ ವಿಭಾಗಗಳಿದ್ದು ಸಾರ್ವಜನಿಕರಿಗೆ ಪುಸ್ತಕ ಸೇವೆ ನೀಡುತ್ತಿದÉ.

ಪೀಪಲ್ಸ್ ಪಾರ್ಕ್ ಇಕೋ-ಫ್ರೆಂಡ್ಲಿ ವ್ಯವಸ್ಥೆಯನ್ನು ಒಳಗೊಂಡಿದೆ. ಲ್ಯಾಂಡ್ ಸ್ಕೇಪಿಂಗ್, ದ್ವಿಚಕ್ರ ವಾಹನ ನಿಲ್ದಾಣ, ಓದುಗರು ವಿಶ್ರಮಿಸಿಕೊಳ್ಳಲು ಅನುಕೂಲ ವಾಗುವಂತೆ ಕಲ್ಲಿನ ಬೆಂಚ್‍ಗಳನ್ನು ಅಳವಡಿಸಲಾಗು ತ್ತಿದ್ದು, ಪರಗೋಲವನ್ನು ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುತ್ತಿದೆ. ಸದ್ಯ ಓದುಗರ ನೆಚ್ಚಿನ ತಾಣವಾಗಿ ಬದಲಾಗಿರುವ ಗ್ರಂಥಾಲಯಕ್ಕೆ ಓದುಗರ ಸಂಖ್ಯೆ ಹೆಚ್ಚಾಗುತ್ತಿರುವುರಿಂದ ಗ್ರಂಥಾಲಯದ ಹೊರ ಆವರಣದಲ್ಲಿ ‘ಓಪನ್ ಲೈಬ್ರರಿ (ಗ್ರೀನ್ ಲೈಬ್ರರಿ)’ ನಿರ್ಮಾಣ ಮಾಡಲು ಯೋಜನೆ ರೂಪುಗೊಂಡಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದರು.

ವಿವಿಧ ವಿಷಯಗಳ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಸುಮಾರು 36,000ಕ್ಕಿಂತ ಅಧಿಕ ಪುಸ್ತಕಗಳು ಲಭ್ಯವಿದ್ದು, ಸಾರ್ವಜನಿಕರಿಗಷ್ಟೇ ಅಲ್ಲದೆ ವಿಶ್ವವಿದ್ಯಾಲಯಗಳ ಸಂಶೋಧಕರಿಗೆ ಮತ್ತು ಇತರ ಸ್ನಾತಕೋತ್ತರ ಪದವೀಧರರಿಗೂ ಸದಾ ಕಾಲ ಈ ಗ್ರಂಥಾಲಯ ನೆರವಾಗುತ್ತಿದೆ. ಉತ್ತಮ ಪೀಠೋ ಪಕರಣ ವ್ಯವಸ್ಥೆ, ಯುಪಿಎಸ್ ಹಾಗೂ ನೀರು ಶುದ್ಧೀ ಕರಣ ಯಂತ್ರವನ್ನು ಅಳವಡಿಸಲಾಗಿದ್ದು, ಕುಡಿಯುವ ನೀರು, ಶೌಚಾಲಯದಂತಹ ಮೂಲಭೂತ ಸೌಕರ್ಯ ಗಳನ್ನು ನೀಡಲಾಗಿದೆ. ಕನ್ನಡ, ಹಿಂದಿ, ಇಂಗ್ಲಿಷ್, ಉರ್ದು, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ 31 ಪ್ರಮುಖ ದಿನಪತ್ರಿಕೆಗಳು ಹಾಗೂ 51 ನಿಯತಕಾಲಿಕೆಗಳು ಸರಬರಾಜಾಗುತ್ತಿದೆ.

ವೈ-ಫೈ ಸೇವೆ: ಮುಂದಿನ ದಿನಗಳಲ್ಲಿ ತಡೆರಹಿತ ವೈ-ಫೈ ವ್ಯವಸ್ಥೆಯನ್ನು ನೀಡುವ ಯೋಜನೆಯಿದ್ದು, ಗ್ರಂಥಾಲಯದ ಸದಸ್ಯರು ತಮಗೆ ಅಗತ್ಯವಿರುವ ಮಾಹಿತಿ ಗಳನ್ನು ಅಂತರ್ಜಾಲದ ಮೂಲಕ ಪಡೆದು ಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಗ್ರಂಥಾ ಲಯದ ಸೇವೆಗಳನ್ನು ಗಣಕೀಕೃತಗೊಳಿಸಿ `ಗ್ರಂಥಾ ಲಯ -2.0′ (ಆigiಣeಛಿh ಐibಡಿಚಿಡಿಥಿ) ಮೇಲ್ದರ್ಜೆ ಗೇರಿಸಲು ಇದು ಸಹಕಾರಿಯಾಗಿದೆ. ಓದುಗರಿಗೆ ತಮ್ಮ ಲ್ಯಾಪ್‍ಟಾಪ್ ಹಾಗೂ ಮೊಬೈಲ್ ಫೋನ್ ಗಳನ್ನು ಬಳಕೆ ಮಾಡಿ ಕೊಳ್ಳಲು ಗ್ರಂಥಾಲಯದಲ್ಲಿ ಚಾರ್ಜಿಂಗ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಆಯೋಜನೆ: ಗ್ರಂಥಾಲಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಕಿರು ಮತ್ತು ತೆರೆದ ಸಭಾಂ ಗಣಗಳಿದ್ದು, ಮುಂದಿನ ದಿನಗಳಲ್ಲಿ ಸಾಹಿತ್ಯಾಸಕ್ತರ ಬೇಡಿಕೆಯಂತೆ ಪುಸ್ತಕ ಬಿಡುಗಡೆ ಕಾರ್ಯಕ್ರಮ, ಸಾಂಸ್ಕøತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಪೂರಕವಾಗಿ ರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ನಿಯಮಿತವಾಗಿ ಗ್ರಂಥಾಲಯಕ್ಕೆ ಓದುಗರನ್ನು ಸೆಳೆಯಲು ಸದರಿ ಗ್ರಂಥಾಲಯದಲ್ಲಿ ಬುಕ್ ಟಾಕ್, ಪುಸ್ತಕ ಪ್ರದ ರ್ಶನ ಮತ್ತು ಮಾರಾಟ ಹಾಗೂ ಸಂವಾದವನ್ನು ಏರ್ಪಡಿಸಲಾಗುವುದು. ಗ್ರಂಥಾಲಯಕ್ಕೆ ಆಗಮಿಸು ವವರಿಗೆ ಅನುಕೂಲವಾಗುವಂತೆ “ಗ್ರೀನ್-ಕೆಫೆಟೇ ರಿಯಾ”ವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

Translate »