ಕುಡಿಯುವ ನೀರಿನ ಟ್ಯಾಂಕಿಗೆ ವಿಷಮಿಶ್ರಣ
ಮೈಸೂರು

ಕುಡಿಯುವ ನೀರಿನ ಟ್ಯಾಂಕಿಗೆ ವಿಷಮಿಶ್ರಣ

April 21, 2021

ಮೈಸೂರು,ಏ.20(ಎಂಕೆ)-ಕುಡಿಯುವ ನೀರಿನ ಟ್ಯಾಂಕ್‍ಗೆ ವಿಷವಿ ಕ್ಕಿರುವ ಘಟನೆ ನಂಜನ ಗೂಡು ತಾಲೂಕಿನ ಸಿಂಧು ವಳ್ಳಿ ಗ್ರಾಪಂ ವ್ಯಾಪ್ತಿಯ ಕುರಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವ ಶಾತ್ ಗ್ರಾಮಸ್ಥರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಿಡಿಗೇಡಿಗಳು ಸೋಮವಾರ ಗ್ರಾಮ ದಲ್ಲಿನ 50 ಸಾವಿರ ಲೀ. ಸಾಮಥ್ರ್ಯದ ಹೆಡ್ ವಾಟರ್ ಟ್ಯಾಂಕರ್‍ಗೆ ಕ್ರಿಮಿನಾಶಕ ಸುರಿ ದಿದ್ದರು. ಇದನ್ನು ಗಮನಿಸದ ಗ್ರಾಮದ ನೀರುಗಂಟಿ ಮಹೇಶ್, ನೀರು ಬಿಟ್ಟಿದ್ದರು. ಈ ವೇಳೆ ನೀರಿನಲ್ಲಿ ಕ್ರಿಮಿನಾಶಕದ ವಾಸನೆ ಬಂದಿದೆ. ಕೂಡಲೇ ಮಹೇಶ್ ನೀರು ಬಂದ್ ಮಾಡಿ, ಓವರ್‍ಹೆಡ್ ಟ್ಯಾಂಕ್ ಮೇಲೆ ಹತ್ತಿ ನೋಡಿದಾಗ ನೀರಿನಲ್ಲಿ ಕ್ರಿಮಿ ನಾಶಕ ಹಾಕಿರುವುದು ಗೊತ್ತಾಗಿದೆ.

ಬಳಿಕ ಗ್ರಾಪಂ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಮಂಗಳವಾರ ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿ, ಕುರುಹಟ್ಟಿ ಗ್ರಾಮದ ಹೆಡ್ ವಾಟರ್ ಟ್ಯಾಂಕ್‍ಗೆ ಮಿಶ್ರಣವಾಗಿದ್ದ ಕ್ರಿಮಿ ನಾಶಕ ನೀರನ್ನು ಕುಡಿದಿದ್ದರೆ ಗ್ರಾಮದಲ್ಲಿ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮದಲ್ಲಿನ 50 ಸಾವಿರ ಲೀ. ಸಾಮ ಥ್ರ್ಯದ ಹೆಡ್ ವಾಟರ್ ಟ್ಯಾಂಕರ್‍ಗೆ ಕಿಡಿ ಗೇಡಿಗಳು ಕ್ರಿಮಿನಾಶಕ ಸುರಿದಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಗ್ರಾಮಸ್ಥರು ವಿಷಯ ತಿಳಿಸಿದ ಕೂಡಲೇ ಗ್ರಾಮದ ಮುಖಂಡರೊಂದಿಗೆ ಹೋಗಿ ನೀರನ್ನು ಬಳಸದಂತೆ ಗ್ರಾಮಸ್ಥ ರಿಗೆ ಹೇಳಿ ಟ್ಯಾಂಕ್‍ನಿಂದ ನೀರು ಬಂದ್ ಮಾಡಿ ಅನಾಹುತ ತಪ್ಪಿಸಲಾಗಿದೆ ಎಂದರು.

ಕ್ರಿಮಿನಾಶಕ ಮಿಶ್ರಣಗೊಂಡಿದ್ದ ನೀರನ್ನು ಸಂಪೂರ್ಣವಾಗಿ ತೆಗೆದು ಟ್ಯಾಂಕ್‍ನ್ನು ಶುಚಿಗೊಳಿಸಿ, ಹೊಸದಾಗಿ ನೀರು ತುಂಬಿಸಿ, ಬಳಕೆಗೆ ಅನುವು ಮಾಡಿ ಕೊಡಲಾಗಿದೆ. ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Translate »