ಮೈಸೂರಲ್ಲಿ ಪೊಲೀಸ್ ನೇಮಕಾತಿ  ದೈಹಿಕ ಸಾಮಥ್ರ್ಯ ಪರೀಕ್ಷೆ ಆರಂಭ
ಮೈಸೂರು

ಮೈಸೂರಲ್ಲಿ ಪೊಲೀಸ್ ನೇಮಕಾತಿ  ದೈಹಿಕ ಸಾಮಥ್ರ್ಯ ಪರೀಕ್ಷೆ ಆರಂಭ

September 28, 2018

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಪರೇಡ್ ಗ್ರೌಂಡ್‍ನಲ್ಲಿ ಜಿಲ್ಲಾ ಮೀಸಲು ಪಡೆ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅಭ್ಯರ್ಥಿ ಗಳ ದೈಹಿಕ ಪರೀಕ್ಷೆಗಳು ಬುಧವಾರ ದಿಂದ ಆರಂಭಗೊಂಡಿವೆ.

ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ನೇತೃತ್ವದಲ್ಲಿ ಎಸ್ಪಿ ಅಮಿತ್ ಸಿಂಗ್, ಎಎಸ್ಪಿ ಸ್ನೇಹಾ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ದೈಹಿಕ ಪರೀಕ್ಷೆ ನಡೆಸುತ್ತಿದ್ದು, ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ಸುಮಾರು 12 ಸಾವಿರ ಮಂದಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಅಕ್ಟೋಬರ್ 12 ರವರೆಗೆ ನಡೆಯುವ ದೈಹಿಕ ಪರೀಕ್ಷೆಯಲ್ಲಿ ದಿನಕ್ಕೆ 850 ಮಂದಿಯಂತೆ ಹಾಜರಾಗುವರು. 2 ಕಿ.ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್‍ಪುಟ್ ಸ್ಪರ್ಧೆಯಲ್ಲಿ ಪಾಸಾದವರಿಗೆ ಲಿಖಿತ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು.

ಕೆಎಸ್‍ಆರ್‍ಪಿಗೆ 517 ಮಂದಿ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ 296 ಮಂದಿ ಪೊಲೀಸ್ ಕಾನ್ಸ್‍ಟೇಬಲ್‍ಗಳನ್ನು ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ನಡೆಸಲಾಗುತ್ತಿದ್ದು, 90 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ದೈಹಿಕ ಪರೀಕ್ಷೆ ನಡೆಸಲು ನಿಯೋಜಿಸಲಾಗಿದೆ ಎಂದು ಐಜಿಪಿ ಶರತ್‍ಚಂದ್ರ ತಿಳಿಸಿದ್ದಾರೆ. ಸ್ಥಳದಲ್ಲಿ ಕುಡಿಯುವ ನೀರು, ಆಂಬುಲೆನ್ಸ್, ಅಗ್ನಿಶಾಮಕದಳದ ಸಿಬ್ಬಂದಿ ಸೌಲಭ್ಯ ಒದಗಿಸಿದ್ದು, ಪರೀಕ್ಷಾ ಪ್ರಕ್ರಿಯೆಯನ್ನು ವೀಡಿಯೋ ಮಾಡಲಾಗುತ್ತಿದೆ. ನೇಮಕಾತಿ ಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

Translate »