ಮೈಸೂರು : ಉನ್ನತ ಶಿಕ್ಷಣ ಸಂಸ್ಥೆಯೊಂದು ಅಳವಡಿಸಿಕೊಳ್ಳುವ ಪಠ್ಯ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ವಕೀಲ ಜೆ.ಪುರುಷೋತ್ತಮ್ ಹೇಳಿದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್‍ಡಿಎಂ-ಐಎಂಡಿ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಎಡಿನ್ ಸೈನರ್ಜಿ’ (ಶೈಕ್ಷಣಿಕ ಹಾಗೂ ಕೈಗಾರಿಕೆ ವಲಯ ಮುಖಾಮುಖಿ) ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕ ಶಿಕ್ಷಣ ತರಗತಿಯಲ್ಲಿ ಸಾಧ್ಯವಿಲ್ಲ. ಇದಕ್ಕೆ ಆಂತರಿಕ ತರಬೇತಿ ಅಗತ್ಯ. ಶಿಕ್ಷಣ ಸಂಸ್ಥೆಗಳು ಉದ್ಯೋಗಕ್ಕೆ ಅಗತ್ಯ ವಿಷಯಗಳನ್ನು ಪಠ್ಯಗಳಲ್ಲಿ ಅಳವಡಿಸಬೇಕು. ಪ್ರಮಾಣ ಪತ್ರಕ್ಕಾಗಿ ಬೇಕಾದ ಮಾಹಿತಿಯನ್ನಲ್ಲ ಎಂದು ಹೇಳಿದರು.
ನಾನು ಮೊದಲ ಬಾರಿಗೆ ಕಂಪನಿಯೊಂದರ ಸಂದರ್ಶನಕ್ಕೆ ಹೋಗಿದ್ದೆ. ಆದರೆ, ನಾನು ಆಯ್ಕೆಯಾಗಲಿಲ್ಲ. ಆದರೀಗ ಅದೇ ಕಂಪನಿಗೆ ಸಂಬಂಧ ಪಟ್ಟಂತೆ ಕಾನೂನು ವಹಿವಾಟುಗಳನ್ನು ನಾನೇ ನಿರ್ವಹಿಸುತ್ತಿದ್ದೇನೆ. ಹಾಗಾಗಿ ಅವಕಾಶ ಗಳು ಹೇಗೆ