ಇಂದು ಪ್ರಧಾನಿ ಮೋದಿಯಿಂದ ಸಂಸದರ ಬಹುಮಹಡಿ ಫ್ಲಾಟ್‍ಗಳ ಉದ್ಘಾಟನೆ
ಮೈಸೂರು

ಇಂದು ಪ್ರಧಾನಿ ಮೋದಿಯಿಂದ ಸಂಸದರ ಬಹುಮಹಡಿ ಫ್ಲಾಟ್‍ಗಳ ಉದ್ಘಾಟನೆ

November 23, 2020

ನವದೆಹಲಿ,ನ.22- ನವದೆಹಲಿಯಲ್ಲಿ ಸಂಸದರಿಗೆ ನಿರ್ಮಾಣ ಗೊಂಡಿರುವ ಬಹು ಮಹಡಿಯ ಫ್ಲ್ಯಾಟ್‍ಗಳನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 23ರಂದು ಬೆಳಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಉಪಸ್ಥಿತರಿರಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಈ ಫ್ಲ್ಯಾಟ್‍ಗಳು ನವದೆಹಲಿಯ ಡಾ.ಬಿ.ಡಿ.ಮಾರ್ಗದಲ್ಲಿವೆ. ಎಂಟು ಹಳೆಯ ಬಂಗಲೆಗಳನ್ನು 76 ಫ್ಲ್ಯಾಟ್‍ಗಳನ್ನು ನಿರ್ಮಿಸಲು ಪುನರಾಭಿವೃದ್ಧಿ ಮಾಡಲಾಗಿದೆ.

 

Translate »