ಮನುಷ್ಯ ವಿದ್ಯೆ, ಅಧಿಕಾರ ಗಳಿಸಿಕೊಂಡು ಆರೋಗ್ಯ, ಶಕ್ತಿ ಕಳೆದುಕೊಳ್ಳುತ್ತಿದ್ದಾನೆ: ಪ್ರಾಧ್ಯಾಪಕ ಮಹೇಶ್‍ಚಂದ್ರ ಗುರು ವಿಷಾಧ
ಮೈಸೂರು

ಮನುಷ್ಯ ವಿದ್ಯೆ, ಅಧಿಕಾರ ಗಳಿಸಿಕೊಂಡು ಆರೋಗ್ಯ, ಶಕ್ತಿ ಕಳೆದುಕೊಳ್ಳುತ್ತಿದ್ದಾನೆ: ಪ್ರಾಧ್ಯಾಪಕ ಮಹೇಶ್‍ಚಂದ್ರ ಗುರು ವಿಷಾಧ

July 29, 2018

ಮೈಸೂರು:  ಮನುಷ್ಯನಿಗೆ ವಿದ್ಯೆ, ಅಧಿಕಾರ ಹೆಚ್ಚಾಗುತ್ತಿದ್ದು, ಆರೋಗ್ಯ, ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್‍ಚಂದ್ರ ಗುರು ಅಭಿಪ್ರಾಯಪಟ್ಟರು.

ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ತನುಮನ ಸಂಸ್ಥೆ ಆಯೋಜಿಸಿದ್ದ `ಜಗ ನಡೆಯಲಿ ಬುದ್ಧನ ಕಡೆ’ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಧರ್ಮಗಳು ನೀವೂ ಒಳ್ಳೆಯವರಾಗಿ ಮತ್ತೊಬ್ಬರಿಗೂ ಒಳ್ಳೆಯದನ್ನೇ ಮಾಡಿ ಎಂಬ ಸಂದೇಶವನ್ನು ಸಾರುತ್ತವೆ. ಆದರೆ ಮನುಷ್ಯನಿಗೆ ಅಹಂಕಾರ ಹೆಚ್ಚಾಗಿದೆ. ನಮಗೆ ಯಾರು ಶತ್ರುಗಳಿಲ್ಲ ಬದಲಾಗಿ ನಮಗೆ ನಾವೇ ಶತ್ರುಗಳಾಗಿದ್ದೇವೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್ ಈ ಮೂರು ರತ್ನಗಳು ಎಲ್ಲರನ್ನು ಬೆಳಕಿನೆಡೆಗೆ ಕರೆದೊಯ್ದರು. ಹಾಗಾಗಿ ನಾವು ವ್ಯಕ್ತಿತ್ವವನ್ನು ರೂಢಿಸಿಕೊಂಡು ನಮಗಾಗಿ ಬದುಕುವ ಬದಲಾಗಿ ಸಮಾಜಕ್ಕೆ ಬದುಕಬೇಕಿದೆ ಎಂದು ಹೇಳಿದರು.

ಮೈಸೂರು ವಿವಿ ಸಹ ಪ್ರಾಧ್ಯಾಪಕ ಡಾ.ವಿ.ಷಣ್ಮುಗಂ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರೊ.ಕೆ.ಸಿದ್ದರಾಜು, ಸಾಹಿತಿ ಡಾ.ಕೆ.ಪಿ.ಮಹದೇವಯ್ಯ, ಸಮಾಜ ಸೇವಕಿ ಜಿ.ದೀಪ ಅತರ್ಗ, ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ್ ಹೆಗ್ಗೂರು, ತನುಮನ ಸಂಸ್ಥೆ ಅಧ್ಯಕ್ಷ ವಿ.ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Translate »