ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ದಸಂಸ ಪ್ರತಿಭಟನೆ
ಮೈಸೂರು

ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ದಸಂಸ ಪ್ರತಿಭಟನೆ

June 24, 2020

ಮೈಸೂರು, ಜೂ.23(ಎಂಟಿವೈ)- ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ಮಾಡಿ ರೈತರನ್ನು ಬೀದಿಗೆ ತರಲಿದೆ ಎಂದು ಟೀಕಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು, ಬಿಜೆಪಿ ಸರ್ಕಾರ ಅಧಿ ಕಾರಕ್ಕೆ ಬಂದಾಗಲೆಲ್ಲಾ ಜನ ವಿರೋಧಿ, ರೈತ ವಿರೋಧಿ ನೀತಿಯನ್ನೇ ಅನುಸರಿಸುತ್ತದೆ. ಬಂಡವಾಳಶಾಹಿಗಳಿಗೆ ಅನುಕೂಲ ವಾಗುವ ಯೋಜನೆಗಳಿಗೇ ಆದ್ಯತೆ ನೀಡುತ್ತ್ತದೆ. ಇದೀಗ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುವ ತಿದ್ದುಪಡಿ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರನ್ನು ಶಾಶ್ವತವಾಗಿ ಭೂ ವಂಚಿತರ ನ್ನಾಗಿಸಲು ಮತ್ತು ಗ್ರಾಮದಿಂದ ಹೊರ ದಬ್ಬಲು ಸಂಚು ರೂಪಿಸಿರುವ ಬಿಜೆಪಿ ಸರ್ಕಾರ, ಕೃಷಿ ಸಂಬಂಧಿತ ನೀತಿಗಳಲ್ಲಿ ಬದಲಾ ವಣೆ ತರುತ್ತಿದೆ. ಹೊಸ ಗೇಣಿ ನೀತಿ, ಎಪಿ ಎಂಸಿ ನೀತಿ, ವಿದ್ಯುತ್ ನೀತಿ ಹಾಗೂ ಭೂ ಸುಧಾರಣಾ ನೀತಿ ಇವು ಒಂದೇ ಉದ್ದೇಶ ಹೊಂದಿದ, ಪರಸ್ಪರ ಸಂಬಂಧವಿರುವ 4 ನೀತಿಗಳಾಗಿವೆ. ಹಣ ಬಲ ಹೊಂದಿದ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿ ಕೊಡುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ಮುಖಂಡ ರಾದ ರಾಜಣ್ಣ, ಹನುಮಂತು, ಸುರೇಶ್ ಯರಗನಹಳ್ಳಿ, ನಾಗ ರಾಜ್, ಪುಟ್ಟಸ್ವಾಮಿ, ಗೋವಿಂದರಾಜು, ನಾಗರತ್ನಮ್ಮ ಸೇರಿ ದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »