ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ
ಮೈಸೂರು

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

April 30, 2022

ಬೆAಗಳೂರು, ಏ. ೨೯- ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬAಧಿಸಿದAತೆ ಕೊನೆಗೂ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಅವರ ಜೊತೆಗೆ ಮೂವರು ಆರೋಪಿಗಳ ಬಂಧನವಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಕರ್ನಾಟಕ ಸಿಐಡಿ ಪೊಲೀಸರು ದಿವ್ಯಾ ಹಾಗರಗಿ ಸೇರಿದಂತೆ ಮೂವರನ್ನು ಮಹಾರಾಷ್ಟçದ ಪುಣೆಯಲ್ಲಿ ಬಂಧಿಸಿದ್ದಾರೆ ಎಂದರು. ೫೪೫ ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೆಲವರು ಮಾಡಿದ ಅಕ್ರಮದಿಂದಾಗಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆದವರಿಗೆ ಅನ್ಯಾಯ ವಾಗಿದೆ. ಈ ವಿಷಯದಲ್ಲಿ ತುಂಬಾ ನೋವಾಗಿದೆ. ಅನೇಕ ವರ್ಷ ಗಳಿಂದ ಸರ್ಕಾರದ ಪರೀಕ್ಷೆಗಳು ನಡೆಯುತ್ತಿದ್ದು ಆಗಾಗ ಹಗರಣಗಳು ಕೂಡ ಆಗುತ್ತಿವೆ. ಇದಕ್ಕೆ ಇತಿಶ್ರೀ ಹಾಡಬೇಕೆಂದು ಸರ್ಕಾರ ಸವಾಲಾಗಿ ತೆಗೆದುಕೊಂಡಿದೆ.

ಸಿಐಡಿ ತಂಡ ಉತ್ತಮವಾಗಿದ್ದು ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ, ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ಯಾವುದೇ ಕಾರಣಕ್ಕೂ ಮಧ್ಯೆ ಪ್ರವೇಶಿಸುವುದಿಲ್ಲ ಎಂದರು. ತನಿಖೆಯಿಂದ ಎಲ್ಲಾ ಮಾಹಿತಿಗಳು ಹೊರ ಬರುತ್ತದೆ. ಈ ಪ್ರಕರಣದ ಹಿಂದೆ ಪ್ರಭಾವಿ ನಾಯಕರ ಕೈವಾಡ ವಿದೆ ಎಂದು ಸಂದೇಹ ಕೂಡ ಇದೆ, ಸಾಕ್ಷಾ÷್ಯಧಾರಗಳನ್ನು ಸಂಗ್ರಹಿಸಿ ಖಾತ್ರಿ ಮಾಡಿಕೊಂಡು ಹೋಗಿ ಬಂಧಿಸಿರುವುದರಿAದ ಆರೋಪಿಗಳನ್ನು ಬಂಧಿಸು ವಲ್ಲಿ ತಡವಾಯಿತು ಎಂದರು.

ಪ್ರಕರಣಕ್ಕೆ ಸಂಬAಧಪ ಟ್ಟಂತೆ ಸರ್ಕಾರ ಖಂಡಿತವಾಗಿಯೂ ತಾತ್ವಿಕ ನಿರ್ಣಯ ತೆಗೆದುಕೊಳ್ಳಲಿದೆ. ಕಾಯ್ದೆ ಗಳಡಿಯಲ್ಲಿ ಪ್ರಕರಣ ದಾಖಲಿಸಿ ಅಪರಾಧಿಗಳಿಗೆ ಶಿಕ್ಷೆಯಾಗು ವಂತೆ ನೋಡಿಕೊಳ್ಳಲಾಗುವುದು. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆಸುವವರಿಗೆ ಇದೊಂದು ತಕ್ಕ ಪಾಠವಾಗಬೇಕು. ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದರು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತಕ್ಕೊಳಗಾದವರಿಗೆ ಶಾಸಕ ಜಮೀರ್ ಅಹ್ಮದ್ ಕಡೆಯವರು ಆರ್ಥಿಕ ಸಹಾಯ ಮಾಡುತ್ತಿರುವ ಬಗ್ಗೆ ಕೇಳಿದಾಗ, ಇಂತಹವ ರಿಂದಲೇ ಸಮಾಜ ಕಂಟಕರು ಬೆಳೆಯುತ್ತಾರೆ. ಇದು ಸಮಾಜಕ್ಕೆ ಮಾರಕ, ಅವರು ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿಯೂ ಹೀಗೆ ಮಾಡಿದರು ಎಂದು ಟೀಕಿಸಿದರು. ಶಾಸಕ ಪ್ರಿಯಾಂಕ್ ಖರ್ಗೆಯವರು ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬAಧಿಸಿದAತೆ ಸರಿಯಾದ ಸಾಕ್ಷಿಗಳನ್ನು ನೀಡಿ ತನಿಖೆಗೆ ಶಕ್ತಿ ತುಂಬಿಸುವ ಕೆಲಸ ಮಾಡಲಿ ಎಂದರು.

೧೧ ದಿನ ಸಿಐಡಿ ವಶಕ್ಕೆ
ಕಲಬುರಗಿ, ಏ. ೨೯- ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ೧೧ ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಲಾಗಿದೆ. ಮಹಾರಾಷ್ಟçದ ಪುಣೆಯಲ್ಲಿ ಪೊಲೀಸರು ದಿವ್ಯಾ ಹಾಗರಗಿ ಬಂಧಿಸಿದ್ದರು.

ಶುಕ್ರವಾರ ಕಲಬುರಗಿಯ ೩ನೇ ಜೆಎಂಎಫ್‌ಸಿ ಕೋರ್ಟ್ ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ಗಳಾದ ದಿವ್ಯಾ ಹಾಗರಗಿ ಸೇರಿದಂತೆ ಇತರ ೬ ಮಂದಿ ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಿದೆ.

ಪುಣೆ ಉದ್ಯಮಿ ಆಶ್ರಯ
ಕಲಬುರಗಿ, ಏ. ೨೯- ಪಿಎಸ್‌ಐ ನೇಮಕಾತಿ ಅಕ್ರಮದ ಮೂಲ ಕಿಂಗ್‌ಪಿನ್ ದಿವ್ಯಾ ಹಾಗರಗಿ ಕಳೆದ ೧೫ ದಿನಗಳಿಂದ ಮಹಾರಾಷ್ಟçದ ಪುಣೆಯ ಉದ್ಯಮಿ ಸುರೇಶ್ ಕಾಟೇಗಾಂವ್ ಆಶ್ರಯದಲ್ಲಿದ್ದಳು ಎಂದು ತಿಳಿದುಬಂದಿದೆ.

ದಿವ್ಯಾಗೆ ಆಶ್ರಯಕೊಟ್ಟ ಸುರೇಶ್ ಕಾಟೇಗಾಂವ್ ಮರುಳು ದಂಧೆ ಮಾಡುತ್ತಿದ್ದ. ಈಕೆಗೆ ಆಶ್ರಯ ನೀಡಿದ ಕಾರಣಕ್ಕೆ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ದಲ್ಲಿ ದಿವ್ಯಾ ಹಾಗರಗಿ, ಅರ್ಚನಾ, ಸುನಂದಾ ಸಹ ಬಂಧನವಾಗಿದ್ದು, ಶಾಂತಿಬಾಯಿ, ಸುರೇಶ್ ಕಾಟೇಗಾಂವ್ ಸೇರಿದಂತೆ ಮತ್ತೊಬ್ಬರನ್ನು ವಶಕ್ಕೆ ತೆಗೆದು ಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ
ಮುಖ್ಯಸ್ಥೆ, ಅಕ್ರಮಕ್ಕೆ ಸಂಬAಧಿಸಿದAತೆ ಸಿಐಡಿ ಪೊಲೀಸರು ಶಹಾಬಾದ್ ನಗರಸಭೆಯ ದ್ವಿತೀಯ ದರ್ಜೆ ಸಹಾಯಕಿ ಜ್ಯೋತಿ ಪಾಟೀಲ್ ಎಂಬುವವರನ್ನು ವಶಕ್ಕೆ ಪಡೆದಿದ್ದರು. ಪಿಎಸ್‌ಐ ಪರೀಕ್ಷೆ ಬರೆದಿದ್ದ ಸೇಡಂನ ಶಾತಿಬಾಯಿ ಬಸ್ಯನಾಯ್ಕ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳುವಲ್ಲಿ ಸಹಕರಿಸಿದ ಆರೋಪವಿದೆ. ಜ್ಯೋತಿ ಪಾಟೀಲ್ ಅವರ ಮೊಬೈಲ್‌ಗೆ ಬಂದ ಹಾಗೂ ಅವರ ಮೊಬೈಲ್‌ನಿಂದ ಹೊರಹೋದ ಕರೆಗಳನ್ನು ಸಿಐಡಿ ತಂಡ ಜಾಲಾಡಿದಾಗ ಆರೋಪಿಗಳಲ್ಲಿ ಒಬ್ಬರು ಜ್ಯೋತಿ ಪಾಟೀಲ್ ಅವರ ಜೊತೆ ಸಂಪರ್ಕದಲ್ಲಿ ಇರುವುದು ಗೊತ್ತಾಯಿತು. ಆ ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿದ ತನಿಖಾಧಿಕಾರಿಗಳು ಮಹಾರಾಷ್ಟçದ ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಕಳೆದ ಮಧ್ಯರಾತ್ರಿ ಪುಣೆಯಲ್ಲಿ ದಿವ್ಯಾ ಹಾಗರಗಿ ಹಾಗೂ ಇತರರನ್ನು ಬಂಧಿಸಿದ್ದಾರೆ.

 

Translate »