ಪುನೀತ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ
ಮೈಸೂರು

ಪುನೀತ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ

November 17, 2021

‘ಪುನೀತ ನಮನ’ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ಪುನೀತ್ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ

ಮೈಸೂರು, ನ. ೧೬- ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಗಾಯಿತ್ರಿ ವಿಹಾರ್‌ದಲ್ಲಿ ಕರ್ನಾಟಕ ಚಲನ ಚಿತ್ರ ವಾಣ ಜ್ಯ ಮಂಡಳಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿ ಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಕ್ಷಿಣ ಭಾರತ ಚಿತ್ರರಂಗದ ಸಾವಿರಾರು ಕಲಾವಿದರು ಮುಖ್ಯಮಂತ್ರಿಗಳ ಈ ಘೋಷಣೆ ಯನ್ನು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿ ಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ಬಾಲ್ಯ ದಿಂದಲೂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಲ್ಲಿಯವರೆಗೂ ಚಿತ್ರರಂಗ ಮತ್ತು ಸಮಾಜ ಸೇವೆಯಲ್ಲಿ ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಅವರಿಗೆ ಮರಣೋತ್ತರ ‘ಕರ್ನಾ ಟಕ ರತ್ನ’ ಪ್ರಶಸ್ತಿ ನೀಡುವುದಾಗಿ ತಿಳಿ ಸಿದರು. ಪುನೀತ್ ನಮ್ಮೆಲ್ಲರಿಗೂ ಆತ್ಮೀಯ. ಅವನನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ್ಯ ದಲ್ಲಿಯೇ ಪ್ರತಿಭೆಯ ಚಿಲುಮೆ ಹೊಂದಿದ ವ್ಯಕ್ತಿ. ಬಾಲನಟನಾಗಿ ರಾಷ್ಟç ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್. ಸಣ್ಣ ವಯಸ್ಸಿನಲ್ಲೇ ಆತ ಅದ್ಭುತವಾಗಿ ನಟಿಸುತ್ತಿದ್ದ. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ ಎಂದು ಅವರು ಪುನೀತ್ ಅವರ ನಟನೆ ಯನ್ನು ಬಣ ್ಣಸಿದರು. ಪುನೀತ್ ಅವ ರನ್ನು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಪುö್ಪ ಅವರ ಹೆಸರನ್ನು ರಸ್ತೆಗೆ, ಪಾರ್ಕ್ಗೆ ಇಡಲು ಅನೇಕ ಆಗ್ರಹ ಬಂದಿತ್ತು. ಇದೇ ಉದ್ದೇಶ ವನ್ನು ಸರ್ಕಾರ ಹೊಂದಿದೆ. ವರನಟ ಡಾ.ರಾಜ್‌ಕುಮಾರ್ ಮತ್ತು ಪಾರ್ವ ತಮ್ಮ ಅವರ ಸ್ಮಾರಕದಂತೆ ಪುನೀತ್ ರಾಜ್‌ಕುಮಾರ್ಅವರ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ಇದರ ಜತೆಗೆ ಪುನೀತ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಘೋಷಣೆ ಮಾಡುತ್ತಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಪ್ಪು ಬಗ್ಗೆ ಭಾವುಕ ನುಡಿಗಳನ್ನು ಹಂಚಿಕೊAಡರು. ಅಂತಿಮ ದರ್ಶನದ ವೇಳೆ ಪುನೀತ್ ಅವರ ಹಣೆಗೆ ನಾನು ಮುತ್ತು ಕೊಟ್ಟಿದ್ದೆ. ನಾನು ಮುತ್ತು ಕೊಟ್ಟಾಗ ಬಹಳಷ್ಟು ಜನರು ಬೇರೆ ಬೇರೆ ರೀತಿ ವಿಶ್ಲೇಷಣೆ ಮಾಡಿದರು. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೋಕೆ ಹೋಗಲ್ಲ. ಅದು ನನ್ನ ಹೃದಯದಿಂದ ಬಂದ ಭಾವನೆ. ಮುತ್ತು ರಾಜರ ಮಗನಿಗೆ ಕರ್ನಾಟಕ ರತ್ನವನ್ನು ಕೊಡುವುದು ಎಷ್ಟು ಸಂತೋಷ ಆಗಿದೆಯೋ, ಅದೇ ರೀತಿ ಆರು ಕೋಟಿ ಜನರ ಪರವಾಗಿ ಆ ಮುತ್ತನ್ನು ನಾನು ಕೊಟ್ಟಿದ್ದೆ ಎಂದು ನುಡಿದರು. ಇದೇ ವೇಳೆ ಪುನೀತ್ ಅಂತಿಮ ನಮನ ಮತ್ತು ಅಂತಿಮ ಸಂಸ್ಕಾರದ ಸಮಯದಲ್ಲಿ ಸಹಕರಿಸಿದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ, ಸರ್ಕಾರದ ಅಧಿಕಾರಿಗಳಿಗೆ ಬೊಮ್ಮಾಯಿ ಧನ್ಯವಾದ ತಿಳಿಸಿದರು.

Translate »