ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ರೇಡಿಯೋಗಳ ಪ್ರಮುಖ ಪಾತ್ರ
ಮೈಸೂರು

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ರೇಡಿಯೋಗಳ ಪ್ರಮುಖ ಪಾತ್ರ

December 10, 2020

ಮೈಸೂರು, ಡಿ.9(ಆರ್‍ಕೆಬಿ)- ಶಿಕ್ಷಣ, ಮನರಂಜನೆ, ಮಾಹಿತಿ ಒದಗಿಸುವ ಜೊತೆಗೆ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿಯೂ ಕಾರ್ಯ ನಿರ್ವಹಿಸುವ ಏಕೈಕ ಮಾಧ್ಯಮ ರೇಡಿಯೋ ಎಂದು ಮೈಸೂರು ವಿಶ್ವ ವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಹೇಳಿದರು.

ಮೈಸೂರು ವಿವಿ ಸಮುದಾಯ ರೇಡಿಯೋ ಕೇಂದ್ರದ ವತಿಯಿಂದ ಬುಧವಾರ ಆಯೋ ಜಿಸಿದ್ದ ಕೋವಿಡ್-19 ಸಮಯದಲ್ಲಿ ಸಮು ದಾಯ ರೇಡಿಯೋದ ಪಾತ್ರ’ ಕುರಿತ ವೆಬಿ ನಾರ್‍ಗೆ ಚಾಲನೆ ನೀಡಿ ಮಾತನಾಡಿದರು. ಜನಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿರುವ ರೇಡಿಯೋ, ತಂತ್ರಜ್ಞಾನದಲ್ಲಿ ಪ್ರತೀ ವರ್ಷ ಅನೇಕ ಬದಲಾವಣೆಗಳನ್ನು ಕಾಣು ತ್ತಿದ್ದೇವೆ. ಮಾಧ್ಯಮ ತಂತ್ರಜ್ಞಾನದಲ್ಲಿ ಉಳಿದೆಲ್ಲ ತಂತ್ರಜ್ಞಾನಗಳಿಗಿಂತ ಹೆಚ್ಚಿನ ಬದಲಾವಣೆ ಕಾಣುತ್ತಿದ್ದೇವೆ. ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ರೇಡಿಯೋ ಉತ್ತಮ ಮಾಧ್ಯಮ ವಾಗಿದೆ ಎಂಬುದನ್ನು ರೇಡಿಯೋ ಸಾಬೀತು ಪಡಿಸಿದೆ ಎಂದು ತಿಳಿಸಿದರು.

ತಮ್ಮ ಕಾರ್ಯಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಮುಖ್ಯತೆ ಹೊಂದಿರುವ ಮಾಧ್ಯಮಗಳ ಕೊಡುಗೆಯನ್ನು ಸ್ಮರಿಸಿದ ಅವರು, ಈ ನಿಟ್ಟಿನಲ್ಲಿ ರೇಡಿಯೋ ಸಹ ಪ್ರಮುಖ ಪಾತ್ರ ವಹಿಸಿದೆ. ರೇಡಿಯೋ ಬೆಳವಣಿಗೆಯು ದೇಶದಲ್ಲಿ ಮುಂದೆ ಸಾಗುತ್ತಿದೆ. ರೇಡಿಯೋ ಗಳು ಸಮುದಾಯದ ಅಭಿವೃದ್ಧಿಗೆ ಶ್ರಮಿಸು ತ್ತಿವೆ. ದೇಶಾದ್ಯಂತ 251ಕ್ಕೂ ಹೆಚ್ಚು ಕೇಂದ್ರ ಗಳು ಸೇವೆ ಸಲ್ಲಿಸುತ್ತಿದ್ದು, ಇವುಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ರೇಡಿಯೋ ಪರಿಣಾಮಗಳ ಕುರಿತು ವೆಬಿ ನಾರ್‍ಗಳ ಮೂಲಕ ಅರಿವು ಮೂಡಿಸಬೇಕಿದೆ. ರೇಡಿಯೋ ಮೂಲಕ ತರಬೇತಿ ಕಾರ್ಯಕ್ರಮ ಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಕಾರ್ಯ ಆಗಬೇಕಿದೆ ಎಂದು ತಿಳಿಸಿದರು.

ಯುನೆಸ್ಕೋ ಸಹ ಅಧ್ಯಾಪಕಿ, ಹೈದ್ರಾಬಾದ್ ವಿವಿ ಸಮುದಾಯ ರೇಡಿಯೋ ಮುಖ್ಯಸ್ಥೆ ಪೆÇ್ರ.ಕಾಂಚನಾ ಮಲ್ಲಿಕ್, ಕುಲಪತಿ ವಿಶೇಷಾಧಿ ಕಾರಿ ಡಾ.ಚೇತನ್, ಪೆÇ್ರ.ನಿರಂಜನ್ ವಾನಳ್ಳಿ, ಮೈಸೂರು ವಿವಿ ಸಿಆರ್‍ಎಸ್ ಸಹ ಸಂಯೋಜಕಿ ಡಾ.ಎಂ.ಎಸ್.ಸಪ್ನಾ ಇತರರು ಉಪಸ್ಥಿತರಿದ್ದರು.

 

 

Translate »