ಪ್ರವಾಸಿಗರ ಸೆಳೆಯುತ್ತಿದೆ ರೈಲ್ವೆ ಇತಿಹಾಸ ಸಾರುವ ಮ್ಯೂಸಿಯಂ ರಾಜಕುಮಾರ್ ಭಾವಸಾರ್
ಮೈಸೂರು

ಪ್ರವಾಸಿಗರ ಸೆಳೆಯುತ್ತಿದೆ ರೈಲ್ವೆ ಇತಿಹಾಸ ಸಾರುವ ಮ್ಯೂಸಿಯಂ ರಾಜಕುಮಾರ್ ಭಾವಸಾರ್

June 12, 2020

ಮೈಸೂರು, ಜೂ.11- ಲಾಕ್‍ಡೌನ್ ನಿಂದಾಗಿ ಮುಚ್ವಲ್ಪಟ್ಟಿದ್ದ ಮೈಸೂರಿನ ಅತ್ಯಾಕರ್ಷಕ ರೈಲ್ ಮ್ಯೂಸಿಯಂ ಕಳೆದ ಜೂ.8ರಿಂದ ಪುನಾರಂಭಗೊಂಡಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.

ಮೈಸೂರಿನ ತುಂಬಾ ಹಳೆಯದಾದ ರೈಲ್ ಮ್ಯೂಸಿಯಂ ಅನ್ನು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಅವರ ಕಲ್ಪನೆಯಡಿ ಮರು ನಿರ್ಮಾಣಗೊಂಡ ರೈಲ್ ಮ್ಯೂಸಿಯಂ ಕಳೆದ ಮಾರ್ಚ್ 16ರಂದು ಉದ್ಘಾಟನೆಯಾದ 8 ದಿನಕ್ಕೆ ಲಾಕ್‍ಡೌನ್ ಘೋಷಣೆಯಾಗಿತ್ತು. ಹೀಗಾಗಿ 70 ದಿನ ಗಳ ಕಾಲ ಮುಚ್ಚಲ್ಪಟ್ಟಿದ್ದ ಮ್ಯೂಸಿಯಂ ಜೂ.8ರಿಂದ ತೆರೆಯಲಾಗಿದ್ದು, ಮತ್ತೊಮ್ಮೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಶತಮಾನಗಳ ಹಿಂದಿನ ಅಂದರೆ 100 ರಿಂದ 150 ವರ್ಷಗಳಷ್ಟು ಹಳೆಯದಾದ ರೈಲ್ವೆ ಕಾರ್ಯಾಚರಣೆಗೆ ಸಂಬಂಧಿಸಿದ ಅಪರೂಪದ ಹಲವಾರು ವಸ್ತುಗಳ ಸಂಗ್ರ ಹವೇ ಈ ರೈಲ್ವೆ ಮ್ಯೂಸಿಯಂ. ಮೈಸೂ ರಿನ ಕೆಆರ್‍ಎಸ್ ರಸ್ತೆ ಸಿಎಫ್‍ಟಿಆರ್‍ಐ ಮುಖ್ಯ ದ್ವಾರದ ಎದುರಿನಲ್ಲಿರುವ ರೈಲ್ವೆ ಮ್ಯೂಸಿಯಂ ನವೀಕರಣಕ್ಕಾಗಿ 2018ರ ಮಾರ್ಚ್‍ನಿಂದ ಸರಿಯಾಗಿ ಒಂದು ವರ್ಷ ಮುಚ್ಚಲ್ಪಟ್ಟಿತ್ತು. ನಂತರ 2019ರ ಮಾ.16 ರಂದು ನವೀಕೃತ ರೈಲ್ ಮ್ಯೂಸಿಯಂ ಉದ್ಘಾಟನೆಗೊಂಡಿತ್ತು. ಕೇವಲ 8 ದಿನದಲ್ಲಿ 800ಕ್ಕೂ ಹೆಚ್ಚು ಪ್ರವಾಸಿಗರು ಮ್ಯೂಸಿ ಯಂಗೆ ಭೇಟಿ ನೀಡಿ ಸುತ್ತಾಡಿ ಹೋಗಿದ್ದರು.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಇದನ್ನು ನೋಡಿದ ನಂತರ ಹಿಂದಿರುಗಿ ಹೋಗುವಾಗ ನೆನಪುಗಳನ್ನು ಕೊಂಡೊ ಯ್ಯುವ ರೀತಿಯಲ್ಲಿ ರೈಲ್ ಮ್ಯೂಸಿಯಂ ನಿರ್ಮಾಣಗೊಂಡಿದೆ. ಭಾರತೀಯ ರೈಲ್ವೆ ಇತಿಹಾಸವನ್ನು ಸಾರುವ ಮ್ಯೂಸಿಯಂ ಅನ್ನು ಪ್ರವಾಸಿಗರಿಗೆ ಇನ್ನಷ್ಟು ಹತ್ತಿರವಾಗಿ ಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್, ಮೈಸೂರು ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ದೇಶದ ಅತ್ಯಂತ ಹಳೆಯದಾದ ರೈಲ್ವೆ ಮ್ಯೂಸಿಯಂ ಅನ್ನು ನವೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸುಂದರ ಪ್ರವೇಶ ದ್ವಾರ, ಕೆಫಿಟೇರಿಯಾ, ಕೋಚ್ ಕೆಫೆ, ಶೌಚಾಲಯ, ಆಡಿಯೋ-ವೀಡಿಯೋ ದೃಶ್ಯ ಕೇುದ್ರ, ಮಕ್ಕಳ ಆಟದ ಉದ್ಯಾನಗಳು ಇಲ್ಲಿವೆ. ಪುರಾತನ ಉಗಿ ಬಂಡಿಗಳು (ಐಔಅಔಒಔಖಿIಗಿS) ಗಾಡಿಗಳು ವಿಶೇಷ ಉದ್ದೇಶದ ವಾಹನ ಗಳು, ವ್ಯಾಗನ್‍ಗಳು, ದೂರ ಸಂಪರ್ಕ ಉಪಕರಣಗಳು ಇನ್ನಿತರೆ ವಸ್ತುಗಳು ಇಲ್ಲಿ ಚಿತ್ತಾಕರ್ಷಕವಾಗಿವೆ.

ಮೈಸೂರಿನ ರಾಜ ಒಡೆಯರ್‍ಗೆ ಸೇರಿದ ಮೊದಲ ತಲೆಮಾರಿನ ಉಗಿ ಲೋಕೋಮೋಟಿವ್ ಮತ್ತು ಗಾಡಿಗಳಿವೆ. ಮಹಾರಾಣಿ ಸಲೂನ್ ಬೋಗಿ ಪ್ರಮುಖ ಆಕರ್ಷಣೆÉಯಾಗಿದೆ. ಹಳೆಯ ಸಿಗ್ನಲ್ ದೀಪಗಳು, ಟಿಕೆಟ್ ಮುದ್ರಿಸುವ ಯಂತ್ರ, ಟಿಕೆಟ್ ಇಡುವ ರ್ಯಾಕ್ ಕೂಡ ಇಲ್ಲಿ ನೋಡಲು ಸಿಗುತ್ತದೆ. ಮಕ್ಕಳಿಗಾಗಿ ಬ್ಯಾಟರಿ ಚಾಲಿತ ಮಿನಿ ಟಾಯ್ ರೈಲು ಸಹ ಇಲ್ಲಿದೆ.

ತೀರಾ ಹಳೆಯ ಕಾಲದ ಇಂಜಿನ್‍ಗಳು, ಬೋಗಿಗಳು, ಕ್ರೈನ್ ಇತ್ಯಾದಿ ವಸ್ತುಗಳು ಪ್ರವಾಸಿಗರಿಗೆ ರೈಲಿನ ಇತಿಹಾಸ ತಿಳಿಸು ತ್ತವೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ರೈಲ್ವೆ ವಸ್ತುಗಳನ್ನು ಒಳಗೊಂಡ ಮ್ಯೂಸಿಯಂಗೆ ಪ್ರವಾಸಿಗರು ಪರಿವಾರ ಸಹಿತ ಭೇಟಿ ನೀಡಬಹುದಾಗಿದೆ. ದೊಡ್ಡ ದೊಡ್ಡ ಮರಗಳಿಂದ ಆವೃತವಾದ ಮ್ಯೂಸಿಯಂಗೆ ಭೇಟಿ ನೀಡಿದವರಿಗೆ ಸುಂದರ ಪರಿಸರ ನಡುವೆ ಓಡಾಡಿದ ಅನುಭವವೂ ಸಿಗಲಿದೆ.

Translate »