ಡೆಲ್ಟಾ ಪ್ಲಸ್ ಹರಡದಂತೆ ಕ್ಷಿಪ್ರ ಕ್ರಮ-ಸಿಎಂ ಭರವಸೆ: ಜಿಟಿಡಿ
ಮೈಸೂರು

ಡೆಲ್ಟಾ ಪ್ಲಸ್ ಹರಡದಂತೆ ಕ್ಷಿಪ್ರ ಕ್ರಮ-ಸಿಎಂ ಭರವಸೆ: ಜಿಟಿಡಿ

June 25, 2021

ಮೈಸೂರು, ಜೂ.24(ಎಂಟಿವೈ)- ಮೈಸೂರಲ್ಲಿ ಕೊರೊನಾದ ರೂಪಾಂತರಿ ಗಳಾದ `ಡೆಲ್ಟಾ ಪ್ಲಸ್’ ಮತ್ತು `ಡೆಲ್ಟಾ ವೈರಸ್’ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಬಿ.ಎಸ್. ಯಡಿ ಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಜತೆ ಮಾತಾಡಿದೆ. ರೂಪಾಂತರಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳುವುದಾಗಿ ಇಬ್ಬರೂ ಭರವಸೆ ನೀಡಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಲಸಿಕಾ ಕೇಂದ್ರದಲ್ಲಿ ಗುರುವಾರ ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಮೈಸೂರಲ್ಲಿ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಜಿಲ್ಲಾಡ ಳಿತ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ ಈಗ ರೂಪಾಂತರಿ ವೈರಸ್ ಪತ್ತೆ ಆಗಿರುವುದರಿಂದ ಜನರಲ್ಲಿ ಸಹಜವಾಗಿ ಆತಂಕ ಮೂಡಿದೆ. ಮೈಸೂರಲ್ಲಿ ಡೆಲ್ಟಾ ಪ್ಲ್ಲಸ್ ಕಾಣಿಸಿಕೊಂಡ ಬಗೆ ಹೇಗೆ? ಎಂದು ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ ಎಂದರು.

ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಜನರು ಕೋವಿಡ್ ನಿಯಮ ಪಾಲಿಸಬೇಕು. ಹೆಚ್ಚು ಗುಂಪುಗೂಡದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯ ಮಾಸ್ಕ್ ಧರಿಸಬೇಕು, ಲಸಿಕೆ ಹಾಕಿಸಿಕೊಂಡು ಕೊರೊನಾ ಸೋಂಕಿನಿಂದ ಪಾರಾಗಬೇಕು ಎಂದು ಸಲಹೆ ನೀಡಿದರು.

3 ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನ ಹಲವು ನಾಯಕ ರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ. ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷ ಸಮಯವಿದೆ. ಮುಂದಿನ ನಡೆ ಇನ್ನೂ ನಿರ್ಧರಿಸಿಲ್ಲ. ಕಾಂಗ್ರೆಸ್ ಪP್ಷÀ ಸೇರು ತ್ತೇನೆಂದು ನಾನು ಎಲ್ಲಿಯೂ ಹೇಳಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ `ಜಿಟಿಡಿ ನಮ್ಮ ಪಕ್ಷಕ್ಕೆ ಬರುತ್ತಾರೆ’ ಎಂದೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ನನ್ನ ಸ್ನೇಹಿತರು. ಅವರೊಂದಿಗೆ ಉತ್ತಮ ಒಡನಾಟವಿದೆ. ಹಾಗಾಗಿ, ಅವರು ಪ್ರೀತಿ ಯಿಂದ ಜಿಟಿಡಿ ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಹೇಳಿz್ದÁರೆ ಅಷ್ಟೆ. ಸಹಕಾರಿ ಒಕ್ಕೂಟದ ಚುನಾವಣೆ ವೇಳೆ ರಾಜಣ್ಣ ಅವರೊಂದಿಗೆ ಮಾತನಾಡಿದ್ದೆ. ಅದಾಗಿ ಮೂರು ತಿಂಗಳೇ ಆಯಿತು ಎಂದರು.

ಕಾಂಗ್ರೆಸ್‍ನಲ್ಲಿ ಚರ್ಚೆಯಾಗುತ್ತಿರುವ ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ, `ಅದು ಕಾಂಗ್ರೆಸ್‍ನ ಆಂತ ರಿಕ ವಿಚಾರ. ಸಿಎಂ ಯಾರಾಗಲಿದ್ದಾರೆ ಎಂದು ಹೇಳುವುದು ಆ ಪಕ್ಷಕ್ಕೆ ಬಿಟ್ಟ ವಿಚಾರ’ ಎಂದಷ್ಟೇ ಪ್ರತಿಕ್ರಿಯಿಸಿದರು.

Translate »