ರಂಗಾಯಣದಲ್ಲಿ 30 ವರ್ಷಗಳ ನಾಟಕ, ಸಂಗೀತ ಗೀತೆಗಳ ದಾಖಲೀಕರಣ
ಮೈಸೂರು

ರಂಗಾಯಣದಲ್ಲಿ 30 ವರ್ಷಗಳ ನಾಟಕ, ಸಂಗೀತ ಗೀತೆಗಳ ದಾಖಲೀಕರಣ

May 28, 2020

ಮೈಸೂರು, ಮೇ 27(ಎಂಕೆ)- `ಕೊರೊನಾ ಸೋಂಕಿನೊಂದಿಗೇ ಬದುಕು ವುದನ್ನು ಕಲಿಯಬೇಕು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ರಂಗಭೂಮಿ ಕಲಾವಿದರ, ಅಭಿಮಾನಿಗಳ ನೆಚ್ಚಿನ ಮೈಸೂರು ರಂಗಾಯಣದಲ್ಲಿ ಪ್ರೇಕ್ಷಕರ ಹೊರತಾದ ಹಲವು ಚಟು ವಟಿಕೆಗಳನ್ನು ಕೈಗೊಳ್ಳಲಾಗಿದೆ.

ಸಾಂಸ್ಕøತಿಕ ಚಟುವಟಿಕೆಗಳಿಲ್ಲದ ವೇಳೆ ಯಲ್ಲೂ ರಂಗಾಯಣದಲ್ಲಿ 30 ವರ್ಷ ಗಳಿಂದ ನಡೆದಿರುವ ನಾಟಕ ಪ್ರದ ರ್ಶನಗಳು, ನಾಟಕೋತ್ಸವಗಳು ಹಾಗೂ ಬಿ.ವಿ.ಕಾರಂತರು ಸಂಗೀತ ಸಂಯೋ ಜಿಸಿರುವ ಹಾಡುಗಳನ್ನು ಹೊಸದಾಗಿ ದಾಖಲೀಕರಣ ಮಾಡಲು ಮುಂದಾ ಗಿದೆ. ಅಲ್ಲದೆ ರಂಗಾಯಣ ಆವರಣದಲ್ಲಿ ಹಸಿರೀಕರಣವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ನಾಟಕ ಪ್ರದರ್ಶನಕ್ಕೆ ಬಳಸುವ ಎಲ್ಲಾ ಬಗೆಯ ಪರಿಕರಗಳನ್ನು ಶುಚಿಗೊಳಿಸಿ ಪ್ರತ್ಯೇಕವಾಗಿಡುವ ವ್ಯವಸ್ಥೆ ಮಾಡಲಾಗಿದೆ. ಅಲಂಕಾರಿಕ ಪರಿಕರಗಳನ್ನು ಲಂಕೇಶ್ ಗ್ಯಾಲರಿಯಲ್ಲಿ, ಲೈಟಿಂಗ್ ಪರಿಕರಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇಡಲಾಗುತ್ತಿದೆ. ರಂಗಾಯಣಕ್ಕೆ ಸಂಬಂಧಿಸಿದ ಪ್ರತಿ ಯೊಂದು ವಸ್ತುವನ್ನು ಜೋಪಾನ ಮಾಡಲಾಗುವುದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇದುವರೆಗೂ ಪ್ರದರ್ಶನಗೊಂಡಿರುವ ನಾಟಕಗಳಲ್ಲಿ ಯಾವುದು ದಾಖಲಾಗಿ ಲ್ಲವೊ ಅಂತಹ ನಾಟಕಗಳನ್ನು ಪಟ್ಟಿ ಮಾಡ ಲಾಗಿದ್ದು, ಜೂ.1ರಿಂದ ದಾಖಲಿಸುವ ಕೆಲಸ ಪ್ರಾರಂಭಿಸಲಾಗುವುದು. ಕಲಾವಿದ ರಿಗೆ ತರಬೇತಿ ನೀಡಿ, ಮತ್ತೆ ಪ್ರದರ್ಶಿಸಿ ರೆಕಾರ್ಡ್ ಮಾಡಲಾಗುವುದು ಎಂದರು.

ಅತ್ಯುತ್ತಮ ನಾಟಕಗಳನ್ನು ಕಲಾಭಿ ಮಾನಿಗಳು ಮರೆಯಬಾರದು ಎಂಬ ಉದ್ದೇಶದಿಂದ ಹೊಸ ಪ್ರಯತ್ನ ಮಾಡ ಲಾಗುತ್ತಿದೆ. ರೆಕಾರ್ಡಿಂಗ್ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಲಾಗುವುದು. ಅಲ್ಲದೆ ಹಿರಿಯ ರಂಗಭೂಮಿ ಕಲಾವಿದ ರಾಮಚಂದ್ರ ಅಡಪ ಅವರಿಂದ ಬಿ.ವಿ.ಕಾರಂತರು ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಹಾಡಿಸಿ ದಾಖಲಿಸಲಾಗುವುದು. ಸಾರ್ವಜನಿಕ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡು ವವರೆಗೂ ದಾಖಲೀಕರಣ ಕಾರ್ಯಕ್ರಮ ನಡೆಯುತ್ತದೆ ಎಂದು ತಿಳಿಸಿದರು.

ರಂಗ ವಸ್ತು ಸಂಗ್ರಹಾಲಯ: ಮೈಸೂರು ರಂಗಾಯಣದಲ್ಲಿ ಪ್ರತ್ಯೇಕವಾಗಿ ‘ರಂಗ ವಸ್ತುಸಂಗ್ರಹಾಲಯ’ ನಿರ್ಮಾಣ ಮಾಡ ಬೇಕು ಎಂದು ಚಿಂತಿಸಲಾಗಿದೆ. ರಂಗ ವಸ್ತು ಸಂಗ್ರಹಾಲಯದಲ್ಲಿ ರೆಕಾರ್ಡಿಂಗ್ ರೂಂ, ಗ್ರಂಥಾಲಯ, ಸ್ಟುಡಿಯೋ ಇರ ಲಿದೆ. ಇದೊಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ರಂಗಾಯಣ ಕಲಾ ವಿದರು, ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಹಸಿರೀಕರಣ: ಅರಣ್ಯ ಇಲಾಖೆ ಸಹ ಕಾರದಿಂದ ರಂಗಾಯಣ ಆವರಣದಲ್ಲಿ 100ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವನರಂಗ ಎಂದರೆ ವನವೇ ಕಾಣಬೇಕು. ಅದಕ್ಕಾಗಿ ಕೊಡಗಿನಿಂದ ಕೆಲವು ವಿಶೇಷ ಸಸಿಗಳನ್ನು ತಂದು ನೆಡಲಾಗುತ್ತಿದೆ ಎಂದು ಹೇಳಿದರು.

ಕೊರೊನಾ ಮುಂಜಾಗ್ರತೆ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಂಗಾಯಣಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದು, ಕೈಗಳಿಗೆ ಸಾನಿ ಟೈಸರ್ ನೀಡಲಾಗುತ್ತಿದೆ. ತಪ್ಪದೇ ಮಾಸ್ಕ್ ಬಳಸುವಂತೆ ತಿಳಿಸಲಾಗಿದೆ. ರಂಗಾಯಣ ಆವರಣದಲ್ಲಿ ಸ್ವಚ್ಛತೆ ಒತ್ತು ನೀಡಲಾ ಗಿದ್ದು, ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

Translate »