ಭೂಗೋಳಶಾಸ್ತç ವಿಷಯದ ೧೮ ಪ್ರಶ್ನೆಗಳು ಪರೀಕ್ಷೆ ಆರಂಭಕ್ಕೂ ಮುನ್ನ ಸೌಮ್ಯರ ಮೊಬೈಲ್ ವಾಟ್ಸಾಪ್ ಮೂಲಕ ಬೇರೆಯವರಿಗೆ ರವಾನೆಯಾಗಿದ್ದವೆಂಬ ಆರೋಪ
ಮೈಸೂರು, ಏ.೨೫ (ಆರ್‌ಕೆ)- ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ (ಅಸಿಸ್ಟೆಂಟ್ ಪ್ರೊಫೆಸರ್) ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಕುರಿತಂತೆ ಮೈಸೂರು ಮಾನಸಗಂಗೋತ್ರಿಯ ಅತಿಥಿ ಉಪನ್ಯಾಸಕಿಯನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಭೂಗೋಳಶಾಸ್ತç ಅಧ್ಯಯನ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಸೌಮ್ಯ ಬಂಧಿತರು. ಮೈಸೂರಲ್ಲಿ ಬಂಧಿಸಿದ ಪೊಲೀಸರು, ನ್ಯಾಯಾಧೀಶರ ಮುಂದೆ ಅವರ ನಿವಾಸದಲ್ಲೇ ಹಾಜರುಪಡಿಸಿ, ನ್ಯಾಯಾ ಧೀಶರ ಆದೇಶದನ್ವಯ ತಮ್ಮ ವಶಕ್ಕೆ ಪಡೆದು, ನಂತರ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾಗಿರುವ ಡಾ. ಹೆಚ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದ ಡಾ. ಸೌಮ್ಯ, ಮೈಸೂರು ವಿಶ್ವವಿದ್ಯಾನಿಲಯದ ಭೂಗೋಳಶಾಸ್ತç ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಏಇಂ)ವು ೨೦೨೨ರ ಮಾರ್ಚ್ ೧೪ರಂದು ನಡೆಸಿದ ಭೂಗೋಳಶಾಸ್ತç ಪ್ರಶ್ನೆ ಪತ್ರಿಕೆಯ ೧೮ ಪ್ರಶ್ನೆಗಳು ಪರೀಕ್ಷೆ ಆರಂಭಕ್ಕೂ ಮುನ್ನ ಸೌಮ್ಯ ಎಂಬಾಕೆಯ ಮೊಬೈಲ್‌ನಿಂದ ವಾಟ್ಸಾಪ್‌ನಲ್ಲಿ ಬೇರೆಯವರ ಮೊಬೈಲ್‌ಗೆ ರವಾನೆಯಾಗಿದ್ದು, ಫಾರ್ವರ್ಡ್ ಆಗಿರುವ ೧೮ ಬಹು ಆಯ್ಕೆ ಮಾದರಿಯ ಉತ್ತರ ಸಹಿತ ಪ್ರಶ್ನೆಗಳು, ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಯಥಾವತ್ತಾಗಿದ್ದವು. ಈ ಸಂಬAಧ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ದೂರು ನೀಡಿದ್ದರು.
ಈ ಸಂಬAಧ ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಎಫ್‌ಐಆರ್ ದಾಖ ಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮೊಬೈಲ್ ವಾಟ್ಸಾಪ್‌ನಿಂದ ಪ್ರಶ್ನೆಪತ್ರಿಕೆ ಪ್ರತಿ ರವಾನೆಯಾಗಿದೆ ಎಂಬ ಸುಳಿವು ದೊರೆತ ತಕ್ಷಣ ಸೌಮ್ಯರನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಈ ಪ್ರಶ್ನೆಪತ್ರಿಕೆ ನೀಡಿದರ‍್ಯಾರು? ಎಷ್ಟು ಮಂದಿಗೆ ರವಾನೆ ಮಾಡಲಾಗಿದೆ? ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್‌ಪಿನ್ ಯಾರು? ಎಂಬುದರ ಮೂಲ ಪತ್ತೆಗೆ ಮುಂದಾಗಿರುವ ಪೊಲೀಸರು, ತಮ್ಮ ವಶದಲ್ಲಿರುವ ಡಾ. ಸೌಮ್ಯರಿಂದ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಮೈಸೂರಿನ ಈ ಡಾ. ಸೌಮ್ಯ ಯಾರು, ಎಲ್ಲಿ ನೆಲೆಸಿದ್ದಾರೆ, ಅವರ ಹಿನ್ನೆಲೆ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಸೌಮ್ಯ ಮಾಹಿತಿ ಕೋರಿ ವಿಭಾಗದ ಮುಖ್ಯಸ್ಥರಿಗೆ ಪತ್ರ
ಮೈಸೂರು: ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಬಯಲು ಹಗರಣ ದಲ್ಲಿ ಬಂಧಿತರಾಗಿರುವ ಡಾ.ಸೌಮ್ಯರ ಬಗ್ಗೆ ಮಾಹಿತಿ ನೀಡುವಂತೆ ಭೂಗೋಳ ಶಾಸ್ತç ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಜಯಶ್ರೀ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಆರ್.ಶಿವಪ್ಪ ತಿಳಿಸಿದ್ದಾರೆ.
ಪತ್ರಿಕೆ, ಟಿವಿಗಳಲ್ಲಿ ಸುದ್ದಿ ಪ್ರಕಟವಾದ ನಂತರವಷ್ಟೇ ನಮಗೆ ತಿಳಿಯಿತು. ಪೊಲೀಸರು ಬಂಧಿಸಿದ್ದಾರೆAದು ತಿಳಿದ ತಕ್ಷಣ ಇಂದು ಭೂಗೋಳಶಾಸ್ತç ವಿಭಾಗದ ಮುಖ್ಯಸ್ಥ ರೊಂದಿಗೆ ಮಾತನಾಡಿ, ಸೌಮ್ಯ ಯಾರು, ಯಾವಾಗ ನೇಮಕಗೊಂಡರು ಎಂಬಿತ್ಯಾದಿ ಮಾಹಿತಿ ನೀಡುವಂತೆ ಪತ್ರ ಮುಖೇನ ಕೋರಿದ್ದೇನೆ ಎಂದರು.
ಪೊಲೀಸರಾಗಲೀ, ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳಾ ಗಲೀ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ವಿಭಾಗದ ಮುಖ್ಯಸ್ಥರಿಂದ ವರದಿ ಬಂದ ಮೇಲೆ ಪರಿಸ್ಥಿತಿ ಏನೆಂಬು ದನ್ನು ಗಮನಿಸಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಎಫ್‌ಐಆರ್ ಆಗಿರುವುದರಿಂದ ಡಾ.ಸೌಮ್ಯ ವಿರುದ್ಧ ನಾವು ಅಗತ್ಯ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರೊ. ಶಿವಪ್ಪ ನುಡಿದರು.
ಕೆ.ಆರ್.ಪೇಟೆ ಪಿಯು ಕಾಲೇಜು ಉಪನ್ಯಾಸಕಿಗೆ ಪರೀಕ್ಷೆ ಆರಂಭಕ್ಕೆ ಅರ್ಧ ಗಂಟೆ ಮುನ್ನ ಪ್ರಶ್ನೆ ರವಾನೆ
ಮೈಸೂರು: ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮುಂಚೆ ಕೆ.ಆರ್.ಪೇಟೆಯಲ್ಲಿ ಪಿಯು ಕಾಲೇಜು ಉಪ ನ್ಯಾಸಕಿಯಾಗಿರುವ ತನ್ನ ಗೆಳತಿಗೆ ಡಾ. ಆರ್. ಸೌಮ್ಯ ಪ್ರಶ್ನೆಗಳನ್ನು ರವಾನಿಸಿದ್ದರು ಎಂದು ತಿಳಿದುಬಂದಿದೆ.
ಪರೀಕ್ಷೆ ನಡೆದ ದಿನ ಬೆಳಗ್ಗೆ ೮.೩೦ ಗಂಟೆಗೆ ತನ್ನ ಸ್ನೇಹಿತೆ ಮೊಬೈಲ್ ವಾಟ್ಸಾಪ್‌ಗೆ ೧೮ ಪ್ರಶ್ನೆಗಳನ್ನು ರವಾನಿಸಿದ್ದ ಡಾ. ಸೌಮ್ಯಾ, ಫೋನ್ ಮಾಡಿ ಮಾಹಿತಿಯನ್ನೂ ನೀಡಿದ್ದರು. ಹೀಗೆ ವಾಟ್ಸಾಪ್‌ನಲ್ಲಿ ಬಂದ ಪ್ರಶ್ನೆಗಳನ್ನು ಉಪನ್ಯಾಸಕಿ ಬಿಡದಿ ಪಿಯು ಕಾಲೇಜು ಉಪನ್ಯಾಸಕನಾಗಿರುವ ತನ್ನ ಸ್ನೇಹಿತನಿಗೂ ರವಾನಿಸಿದ್ದರು. ಆದರೆ ಆತ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಬರೆಯುವ ತರಾತುರಿಯಲ್ಲಿದ್ದರಿಂದ
ವಾಟ್ಸಾಪ್ ನೋಡಿರಲೇ ಇಲ್ಲ. ಪರೀಕ್ಷೆ ಮುಗಿಸಿ, ಮನೆಗೆ ಬಂದು ವಾಟ್ಸಾಪ್ ತೆರೆದಾಗ ತಾನು ಬರೆದು ಬಂದಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಗಳೇ ಇವು ಎಂಬುದು ದೃಢಪಟ್ಟಿದ್ದರಿಂದ ಅಂದೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಹಾಗಾಗಿ ಅಸಿಸ್ಟೆಂಟ್ ಪ್ರೊಫೆಸರ್‌ಗಳ ನೇಮಕಾತಿ ಪರೀಕ್ಷಾ ಪ್ರಶ್ನೆಪತ್ರಿಕೆ ಬಯಲು ಹಗರಣ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಪಿಯು ಉಪನ್ಯಾಸಕರ ಹುದ್ದೆಗಾಗಿ ೨೦೨೦ರಲ್ಲಿ ನಡೆದ ಪರೀಕ್ಷೆಯಲ್ಲಿ ಆತ ಮೊದಲ ರ‍್ಯಾಂಕ್ ಗಳಿಸಿ ಆಯ್ಕೆಯಾಗಿ ಸದ್ಯ ಬಿಡದಿ ಬಳಿಯ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದು, ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಹುದ್ದೆ ಬಯಸಿ ಈ ಪರೀಕ್ಷೆ ಬರೆದಿದ್ದರು. ಈತ ಪ್ರತಿಭಾನ್ವಿತನಾದ್ದರಿಂದ ತನ್ನ ಭವಿಷ್ಯದ ದೃಷ್ಟಿಯಿಂದ ಕೂಡಲೇ ದೂರು ನೀಡುವ ಧೈರ್ಯ ಮಾಡಿದ್ದಾರೆ. ಡಾ. ಸೌಮ್ಯ, ಮೈಸೂರಿನ ಆಲನಹಳ್ಳಿ ಬಳಿಯ ಗಿರಿದರ್ಶಿನಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ತಂದೆ, ತಾಯಿ, ಸಹೋದರನೊಂದಿಗೆ ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ಸಂಬAಧ ಮೈಸೂರಲ್ಲಿ ಮತ್ತೋರ್ವ ಅತಿಥಿ ಉಪನ್ಯಾಸಕರು ಸಿಕ್ಕಿ ಬೀಳುವ ಸಾಧ್ಯತೆ ಇದೆ. ಈ ಸಂಬAಧ ಎರಡು ಮನೆಗಳ ಶೋಧನೆಯಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಠಾಣೆ ಇನ್ಸ್ಪೆಕ್ಟರ್ ಚಂದ್ರಶೇಖರ್ ತನಿಖೆ ನಡೆಸುತ್ತಿದ್ದಾರೆ. ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ವೆಂಕಟೇಶ್ ನಾಯ್ದು ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ.