ವಲಸೆ ಕಾರ್ಮಿಕರಿಗೆ ಅಕ್ಕಿ ಭಾಗ್ಯ
ಮೈಸೂರು

ವಲಸೆ ಕಾರ್ಮಿಕರಿಗೆ ಅಕ್ಕಿ ಭಾಗ್ಯ

May 23, 2020

ಮೈಸೂರು, ಮೇ 22- ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಆತ್ಮ ನಿರ್ಭರ್ ಭಾರತ್ ಯೋಜನೆ ಯಡಿ ಮೇ ಮತ್ತು ಜೂನ್ ಎರಡೂ ಮಾಹೆ ಗಳಿಗೆ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿ ಅಕ್ಕಿಯನ್ನು ಉಚಿತ ವಾಗಿ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರದ ಆದೇಶ ದಂತೆ ಈ ಯೋಜನೆ ಯಡಿ ಬರುವ ಫಲಾನುಭವಿಗಳು ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಂಚಿಕೆ ಪಡೆಯುತ್ತಿರ ಬಾರದು. ಫಲಾನುಭವಿಯ ಆಧಾರ್ ಸಂಖ್ಯೆಯ ಮುಖಾಂತರ ಪರಿಶೀಲಿಸಿ ಅವರ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ಬಂದ ನಂತರ, ಸದರಿ ಓ.ಟಿ.ಪಿ.ಯನ್ನು ದಾಖಲಿಸಿ ಪಡಿತರ ವಿತರಣೆ ಮಾಡಲಾಗುವುದು. ನ್ಯಾಯಬೆಲೆ ಅಂಗಡಿಗಳ ಮೂಲಕ ಮೇ ಮಾಹೆಯಲ್ಲಿ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿಯನ್ನು ಮೇ 26ರಿಂದ ಮೇ 31ರವರೆಗೆÉ ವಿತರಿಸಲಾಗುವುದು. ಜೂನ್ ಮಾಹೆಯ ಅಕ್ಕಿಯನ್ನು ಜೂ.1ರಿಂದ ಜೂ.10ರವರೆಗೆ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ಹಾಗೂ ಕಡಲೆ ಕಾಳನ್ನು ನೀಡಲಾಗುತ್ತದೆ. ಮೇ ಮಾಹೆಯಲ್ಲಿ ಆಹಾರ ಧಾನ್ಯವನ್ನು ಪಡೆಯದ ಫಲಾನುಭವಿಗಳು ಜೂನ್‍ನಲ್ಲಿ ಎರಡೂ ತಿಂಗಳ ಒಟ್ಟು 10 ಕೆ.ಜಿ. ಅಕ್ಕಿ ಮತ್ತು ಕಡಲೆ ಕಾಳನ್ನು ಪಡೆಯಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಗಳ ಇಲಾಖೆ, ಮೈಸೂರು ವಿಭಾಗದ ಜಂಟಿ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »