ಚಾ.ನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತರಾದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
ಮೈಸೂರು

ಚಾ.ನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತರಾದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

May 4, 2021

ಮೈಸೂರು,ಮೇ3-ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತ ರೋಗಿಗಳು ಆಕ್ಸಿಜನ್ ಕೊರತೆ ಯಿಂದ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಸೂರು ಜಿಲ್ಲಾಧಿಕಾರಿಗಳಿಂದ ಆಕ್ಸಿಜನ್ ಚಾಮರಾಜ ನಗರ ಜಿಲ್ಲೆಗೆ ಸರಬರಾಜಾಗುತ್ತಿತ್ತು. ನಿನ್ನೆ ಬೆಳಗಿನ ಜಾವ ಆಕ್ಸಿಜನ್ ಕೊಂಡೊಯ್ಯುವ ವಾಹನ ಮೈಸೂರಿ ನಲ್ಲಿ ಕಾಯುತ್ತಿತ್ತು. ಆದರೆ ಮೈಸೂರು ಜಿಲ್ಲಾಧಿಕಾರಿಗಳು ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಮಾಡಲು ಸಾಧ್ಯವಿಲ್ಲವೆಂದು ಆ ಘಳಿಗೆಯಲ್ಲಿ ತಿಳಿಸಿದ್ದಾರೆ.

ಈ ಒಂದು ಸಂಗತಿ ನನಗೆ ದೂರವಾಣಿ ಮೂಲಕ ನಿನ್ನೆ ಬೆಳಿಗ್ಗೆ 7.56 ಗಂಟೆಗೆ ತಿಳಿಯಿತು. ನಾನು ಸುಮಾರು 9 ಗಂಟೆ ಸಮಯಕ್ಕೆ ರಾಜ್ಯದ ಕೋವಿಡ್ ನೋಡಲ್ ಅಧಿಕಾರಿಗಳಾದ ನಿಶ್ಚಿತ್ ಮತ್ತು ಗುಂಜಾಲ್ ಕೃಷ್ಣ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದೆ. ಮೈಸೂರು ಜಿಲ್ಲಾಧಿಕಾರಿಗಳು, ಚಾಮ ರಾಜನಗರ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಮಾಡಲು ಸಾಧ್ಯವಿಲ್ಲ ವೆಂದು ತಿಳಿಸಿರುವುದಾಗಿ ನನಗೆ ತಿಳಿದು ಬಂದಿದೆ. ಬೆಳಿಗ್ಗೆ 11 ಗಂಟೆ ಒಳಗೆ ಆಕ್ಸಿಜನ್ ಚಾಮರಾಜನಗರ ಜಿಲ್ಲೆಗೆ ತಲುಪದೆ ಇದ್ದರೆ ತುಂಬಾ ಸಂಕಷ್ಟ ಪರಿಸ್ಥಿತಿ ಎದುರಾಗಿ, ಸೋಂಕಿತರಿಗೆ ಬಹಳ ತೊಂದರೆ ಯಾಗುತ್ತದೆ. ದಯವಿಟ್ಟು ನೀವು ಮೈಸೂರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ, ಕೂಡಲೇ ಆಕ್ಸಿಜನ್ ಸರಬರಾಜು ಮಾಡಿಸಲು ಕ್ರಮ ವಹಿಸುವಂತೆ ವಿನಂತಿಸಿದೆ ಎಂದು ಹೇಳಿದ್ದಾರೆ.

ಗುಂಜಾಲ್ ಕೃಷ್ಣರವರು, ಮೈಸೂರು ಜಿಲ್ಲಾಧಿಕಾರಿಗಳು ಆಕ್ಸಿಜನ್ ಸರಬರಾಜು ಮಾಡಲು ನಿರಾಕರಿಸಿರುವುದು, ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸರಬರಾಜು ಮಾಡಲು ನಿರ್ದೇಶನ ನೀಡು ವುದಾಗಿ ತಿಳಿಸಿದರು. ನಿಶ್ಚಿತ್ ಸಹ ಮೈಸೂರು ಜಿಲ್ಲಾಧಿಕಾರಿ ಗಳೊಂದಿಗೆ ಈ ಸಂಬಂಧ ಈಗಾಗಲೇ ನಾನು ಮಾತ ನಾಡಿದ್ದೇನೆ. ಆದರೆ ನಮ್ಮ ನಿರ್ದೇಶನವನ್ನು ಅವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದಕಾರಣ, ಈಗ ಬದಲಿ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆಂದು ತಿಳಿಸಿದರು.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನು ಸಹ ನಾನು ದೂರವಾಣಿ ಮೂಲಕ ಸಂಪರ್ಕಿಸಿದೆ. ಸಚಿವರು ಸಹ ಮೈಸೂರು ಜಿಲ್ಲಾಧಿಕಾರಿಗಳು ಸಹಕರಿಸದೆ ಇರುವುದರ ಬಗ್ಗೆ ತಮ್ಮ ಅಸಮಾಧಾನವÀನ್ನು ವ್ಯಕ್ತ ಪಡಿಸಿ, ಕೂಡಲೇ ಬದಲಿ ವ್ಯವಸ್ಥೆ ಮಾಡುವುದಾಗಿ ನನಗೆ ತಿಳಿಸಿದರು. ಆದರೂ ಸಕಾಲದಲ್ಲಿ ಆಕ್ಸಿಜನ್ ದೊರೆಯದೆ ಇದ್ದ ಕಾರಣಕ್ಕಾಗಿ ಸುಮಾರು 24 ಮಂದಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿತನವೇ ಮುಖ್ಯ ಕಾರಣ ಎಂಬುದು ಈ ಎಲ್ಲಾ ಸನ್ನಿವೇಶಗಳಿಂದ ದೃಢಪಡುತ್ತದೆ. ಇದೊಂದು ಮಹಾ ದುರಂತ. ಸರ್ಕಾರವೇ ಇದರ ಜವಾಬ್ದಾರಿಯನ್ನು ಹೊರಬೇಕಾಗಿದೆ. ಈ ದುರಂತದಿಂದ ಮರಣ ಹೊಂದಿದವರಿಗೆ ಕನಿಷ್ಠ ತಲಾ 5 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸುತ್ತೇನೆ. ಸಕಾಲದಲ್ಲಿ ಆಕ್ಸಿಜನ್ ಸರಬ ರಾಜು ಮಾಡಲು ಅಡ್ಡಿಪಡಿಸಿರುವ ಮೈಸೂರು ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ವರ್ತನೆ ಬಗ್ಗೆ ಕೂಡಲೇ ಮಾಹಿತಿ ಪಡೆದು, ಪರಿಶೀಲಿಸಿ, ಅವರನ್ನು ಅಮಾನತುಗೊಳಿಸಿ, ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಮುಖ್ಯಮಂತ್ರಿಗಳನ್ನು ಅವರು ಆಗ್ರಹಿಸಿದ್ದಾರೆ.

Translate »