ಮೇ 16ರಿಂದಲೇ ಶಾಲೆಗಳು ಆರಂಭ
ಮೈಸೂರು

ಮೇ 16ರಿಂದಲೇ ಶಾಲೆಗಳು ಆರಂಭ

April 27, 2022

ಬೆAಗಳೂರು,ಏ.೨೬-ಕೊರೊನಾ ೪ನೆ ಅಲೆ ಭೀತಿಯ ನಡುವೆಯೇ ನಿಗದಿಯಂತೆ ಮೇ ೧೬ರಿಂದ ಶಾಲೆಗಳು ಆರಂಭವಾಗ ಲಿವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದಿಲ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜೂನ್-ಜುಲೈನಲ್ಲಿ ನಾಲ್ಕನೇ ಅಲೆ ಕಾಣ ಸಿ ಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಮೇ ೧೬ರಿಂದ ಶಾಲೆಗಳನ್ನು ಆರಂ ಭಿಸುವ ತೀರ್ಮಾನವನ್ನು ಈಗಾಗಲೇ ಮಾಡಿದ್ದೇವೆ. ಅದರಂತೆ ರಾಜ್ಯಾದ್ಯಂತ ೧ರಿಂದ ೧೦ನೇ ತರಗತಿಗಳು ಮೇ ೧೬ ರಿಂದ ಪ್ರಾರಂಭವಾಗಲಿವೆ ಎಂದರು.

ಮೂರನೇ ಅಲೆ ಸಂದರ್ಭದಲ್ಲೂ ಶಾಲೆಗಳನ್ನು ನಡೆಸಿದ್ದೇವೆ. ಅದರ ಅನುಭವದ ಮೇಲೆ ಎಲ್ಲ ಸುರಕ್ಷತೆಗಳನ್ನು ಪಾಲಿಸಿ ಶಾಲೆಗಳು ಕಾರ್ಯನಿರ್ವಹಿಸಲಿವೆ. ಕೋವಿಡ್ -೧೯ಗೆ ಸಂಬAಧಿಸಿದAತೆ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಕೋವಿಡ್ ಕಾರ್ಯ ಪಡೆಯ ಸಲಹೆ- ಸೂಚನೆಗಳನ್ನು ಪಾಲಿಸಿ ಶಾಲೆಗಳನ್ನು ಆರಂಭಿಸಲಾಗುವುದು ಎಂದರು. ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಲಿಯುವುದನ್ನು ಕಡ್ಡಾಯ ಮಾಡಿರುವುದು ಕರ್ನಾಟಕ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದ್ದು, ಈ ಶಾಲೆಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೋಟಿಸ್‌ಗೆ ಅವರಿಂದ ಉತ್ತರ ಬಂದ ನಂತರ ಈ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬಿಎಸ್‌ಸಿ ಮಂಡಳಿಗೆ ಶಿಫಾರಸ್ಸು ಮಾಡುವುದಾಗಿ ಸಚಿವ ನಾಗೇಶ್ ಹೇಳಿದರು.

Translate »