ಹಿರಿಯ ಮುತ್ಸದ್ದಿ ಹೆಚ್.ಡಿ.ಚೌಡಯ್ಯ ಇನ್ನಿಲ್ಲ
ಮಂಡ್ಯ

ಹಿರಿಯ ಮುತ್ಸದ್ದಿ ಹೆಚ್.ಡಿ.ಚೌಡಯ್ಯ ಇನ್ನಿಲ್ಲ

February 17, 2022

ಮಂಡ್ಯ, ಫೆ.೧೬(ಮೋಹನ್‌ರಾಜ್)- ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಶಿಕ್ಷಣ ತಜ್ಞ, ಸಹಕಾರಿ ಧುರೀಣ ಹಾಗೂ ಮಾಜಿ ಶಾಸಕ ಡಾ.ಹೆಚ್.ಡಿ. ಚೌಡಯ್ಯ(೯೪) ತಡರಾತ್ರಿ ೨.೩೦ರಲ್ಲಿ ಸ್ವಗ್ರಾಮ ತಾಲೂಕಿನ ಹೊಳಲು ಗ್ರಾಮ ದಲ್ಲಿ ವಿಧಿವಶರಾದರು. ಇತ್ತೀಚೆಗೆ ಅವರ ಪತ್ನಿ ದೊಡ್ಡಲಿಂಗಮ್ಮನವರ ಅಗಲಿಕೆಯ ನಂತರ ತೀವ್ರವಾಗಿ ನೊಂದಿದ್ದ ಹೆಚ್.ಡಿ. ಚೌಡಯ್ಯ ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ೧೯೨೮ರಲ್ಲಿ ಮಂಡ್ಯ ತಾಲೂ ಕಿನ ಹೊಳಲು ಗ್ರಾಮದಲ್ಲಿ ಜನಿಸಿದ ಚೌಡಯ್ಯ, ಬಿಎಸ್ಸಿ (ಅಗ್ರಿ) ಪದವೀಧರ ರಾಗಿದ್ದರು. ಆಗಿನ ಕಾಲದ ತಾಲೂಕು ಬೋರ್ಡ್ ಮೆಂಬರ್ ಹಾಗೂ ಅಧ್ಯಕ್ಷರಾ ಗುವ ಮೂಲಕ ರಾಜ ಕಾರಣಕ್ಕೆ ಪ್ರವೇಶ ಮಾಡಿದ ಅವರು, ನಾಲ್ಕು ಬಾರಿ ವಿಭ ಜಿತ ಕೆರಗೋಡು ಕ್ಷೇತ್ರದ ಶಾಸಕರಾಗಿ,

ಒಮ್ಮೆ ವಿಧಾನ ಪರಿಷತ್ ಸದಸ್ಯರಾ ಗಿಯೂ ಸೇವೆ ಸಲ್ಲಿಸಿ ದ್ದಾರೆ. ೧೯೮೯ರಲ್ಲಿ ಮಂಡ್ಯದ ಪಿಇಟಿ ಟ್ರಸ್ಟ್ (ಜನತಾ ಶಿಕ್ಷಣ ಟ್ರಸ್ಟ್) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ೩೧ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ನಿತ್ಯ ಸಚಿವ ಕೆ.ವಿ.ಶಂಕರೇಗೌಡರು ಹಾಗೂ ಚೌಡಯ್ಯನವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದ್ದರೂ ಶಂಕರೇಗೌಡರು ಮಾತ್ರ ಚೌಡಯ್ಯ ಅವರನ್ನೇ ತಮ್ಮಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದರು. ಪಿಇಟಿ ಟ್ರಸ್ಟ್ನ ಸಮಗ್ರ ಅಭಿವೃದ್ಧಿಗೆ ಚೌಡಯ್ಯ ಕಾರಣರಾದರು. ಆಡಳಿತದಲ್ಲಿ ದಕ್ಷತೆ, ಶಿಸ್ತು ಬದ್ಧತೆ, ಪ್ರಾಮಾಣ ಕತೆ ರೂಢಿಸಿಕೊಂಡಿದ್ದ ಮತ್ತು ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದ ಚೌಡಯ್ಯ ಅವರಿಗೆ ಅಪಾರ ಅಭಿಮಾನಿ ಬಳಗವಿದ್ದು, ನಿತ್ಯ ಸಚಿವ ಕೆ.ವಿ.ಶಂಕರೇಗೌಡ, ಜಿ.ಮಾದೇಗೌಡ, ಸಿಂಗಾರಿಗೌಡ, ಎಸ್.ಎಂ.ಕೃಷ್ಣ ಸೇರಿದಂತೆ ಅನೇಕ ರಾಜಕಾರಣ ಗಳ ಬಳಗದಲ್ಲಿ ಬೆಳೆದ ಚೌಡಯ್ಯ ಅವರು ಮಂಡ್ಯ ಜಿಲ್ಲೆಯ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ: ನಾಲ್ಕು ಬಾರಿ ಶಾಸಕರಾಗಿ, ವಿಪಕ್ಷ ನಾಯಕನಾಗಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಹೆಚ್.ಡಿ.ಚೌಡಯ್ಯ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಹೊಳಲು ಗ್ರಾಮದ ಚೌಡಯ್ಯ ಅವರ ಆಲೆಮನೆ ಆವರಣದಲ್ಲಿ ಅವರ ಪಾರ್ಥೀವ ಶರೀರಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ, ಕುಶಾಲತೋಪು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದ ಬಳಿಕ ಅವರ ಪುತ್ರ ಅಗ್ನಿ ಸ್ಪರ್ಶ ಮಾಡಿದರು. ಈ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಸಚಿವರಾದ ಡಾ.ಅಶ್ವತ್ಥ್ ನಾರಾಯಣ, ಕೆ.ಸಿ.ನಾರಾಯಣಗೌಡ ಹಾಗೂ ಜಿಲ್ಲಾಧಿಕಾರಿ ಎಸ್.ಅಶ್ವಥಿ ಉಪಸ್ಥಿತರಿದ್ದರು.

Translate »